Advertisement

ಸದ್ದು ಮಾಡುತ್ತಿದ್ದ ಪ್ರಥಮ್ ನಿರ್ದೇಶನದ ‘ನಟ ಭಯಂಕರ’ ಟ್ರೇಲರ್

05:54 PM Jan 27, 2023 | Team Udayavani |

ನಟ ಪ್ರಥಮ್‌ ಅಭಿನಯಿಸಿ ಮತ್ತು ನಿರ್ದೇಶಿಸಿರುವ “ನಟ ಭಯಂಕರ’ ಇದೇ ಫೆ. 3ರಂದು ತೆರೆಗೆ ಬರುತ್ತಿದೆ. ಸದ್ಯ “ನಟ ಭಯಂಕರ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಪ್ರಥಮ್‌ ಆ್ಯಂಡ್‌ ಟೀಮ್‌, ಇತ್ತೀಚೆಗೆ ಸಿನಿಮಾದ ಮೊದಲ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ನಟ ಧ್ರುವ ಸರ್ಜಾ, ನಿರ್ದೇಶಕ ಬಹದ್ದೂರ್‌ ಚೇತನ್‌, ಲಹರಿ ವೇಲು ಮೊದಲಾದ ಗಣ್ಯರು “ನಟ ಭಯಂಕರ’ ಟ್ರೇಲರ್‌ ಬಿಡುಗಡೆ ವೇಳೆ ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.

Advertisement

ಇದೇ ವೇಳೆ ಮಾತನಾಡಿದ ನಟ ಕಂ ನಿರ್ದೇಶಕ ಪ್ರಥಮ್‌, “ಕೋವಿಡ್‌ ಲಾಕ ಡೌನ್‌ ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ ಹಲವು ಅಡೆತಡೆಗಳನ್ನು ಎದುರಿಸಿ, ಅಂತಿಮವಾಗಿ “ನಟ ಭಯಂಕರ’ ಸಿನಿಮಾವನ್ನು ಪೂರ್ಣಗೊಳಿಸಿ ತೆರೆಗೆ ತರುತ್ತಿದ್ದೇವೆ. ಇದೊಂದು ಸಸ್ಪೆನ್ಸ್‌, ಹಾರರ್‌, ಕಾಮಿಡಿ ಸಬೆjಕ್ಟ್ ಸಿನಿಮಾ. ಒಂದು ಕುರುಡು ದೆವ್ವ ಮತ್ತು ಒಬ್ಬ ಸೂಪರ್‌ ಸ್ಟಾರ್‌ ನಟನ ನಡುವೆ ನಡೆಯುವ ಕಥೆ ಸಿನಿಮಾದಲ್ಲಿದೆ. ಇತ್ತೀಚಿನ ವರ್ಷ ಗಳಲ್ಲಿ ಕನ್ನಡದಲ್ಲಿ ಈ ಶೈಲಿಯ ಸಿನಿಮಾ ಬಂದಿದ್ದು ಅಪರೂಪ. ದೊಡ್ಡ ಕಲಾವಿದರ ತಾರಾಗಣ ಸಿನಿಮಾ ದಲ್ಲಿದೆ. ಸ್ವಲ್ಪ ತಡವಾದರೂ ಎಲ್ಲೂ ರಾಜಿ  ಯಾಗದೆ ಗುಣಮಟ್ಟದಲ್ಲಿ ಈ ಸಿನಿಮಾ ಮಾಡಿದ್ದೇವೆ. ಸಿನಿಮಾಕ್ಕೆ ಈಗಾಗಲೇ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದ್ದು, ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ವನಿತಾ ಅಂಡರ್ 19 ವಿಶ್ವಕಪ್: ಕಿವೀಸ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ

ಸಿನಿಮಾದ ಟ್ರೇಲರ್‌ ಬಿಡುಗಡೆ ಬಳಿಕ ಮಾತನಾಡಿದ ನಟ ಧ್ರುವ ಸರ್ಜಾ, “ಟ್ರೇಲರ್‌ ತುಂಬ ಪ್ರಾಮಿಸಿಂಗ್‌ ಆಗಿದೆ. ಸಿನಿಮಾದಲ್ಲಿ ಪ್ರಥಮ್‌ ಹೊಸದೇನನ್ನೋ ಹೇಳುವ ಪ್ರಯತ್ನ ಮಾಡಿರುವುದು ಟ್ರೇಲರ್‌ನಲ್ಲಿ ಕಾಣುತ್ತದೆ. ಸಿನಿಮಾ ಬಿಡುಗಡೆಯಾದ ಬಳಿಕ ಎಲ್ಲರೂ ಸಿನಿಮಾ ನೋಡಿ ಹಾರೈಸಿ’ ಎಂದರು.

“ಸ್ವಾರಸ್ಯ ಸಿನಿ ಕ್ರಿಯೇಷನ್ಸ್‌’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ “ನಟ ಭಯಂಕರ’ ಸಿನಿಮಾದಲ್ಲಿ ನಾಯಕ ಪ್ರಥಮ್‌ ಅವರಿಗೆ ಸುಶ್ಮಿತಾ ಜೋಶಿ, ನಿಹಾರಿಕಾ ನಾಯಕಿಯರಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಸಾಯಿ ಕುಮಾರ್‌, ಶೋಭರಾಜ್‌, ಕುರಿ ಪ್ರತಾಪ್‌, ಉಮೇಶ್‌, ಪವನ್‌, ಓಂ ಪ್ರಕಾಶ ರಾವ್‌, ಶಂಕರ ಅಶ್ವಥ್‌, ಮ್ಯಾಜಿಕ್‌ ರಂಗ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

ಅಂದಹಾಗೆ, “ನಟ ಭಯಂಕರ’ ಸಿನಿಮಾ ಫೆ. 3ಕ್ಕೆ ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next