Advertisement

ಬಿಡುಗಡೆಗೆ ಸಿದ್ಧವಾದ ಪ್ರಥಮ್‌ ಅಭಿನಯದ ‘ನಟ ಭಯಂಕರ’

03:18 PM Sep 03, 2022 | Team Udayavani |

ಪ್ರಥಮ್‌ ಅಭಿನಯದ “ನಟ ಭಯಂಕರ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು “ನಟ ಭಯಂಕರ’ ಥಿಯೇಟರ್‌ಗೆ ಬರುವ ಮೊದಲೇ ಪ್ರಥಮ್‌ ತಮ್ಮ ಚಿತ್ರತಂಡದವರು ಮಾತ್ರವಲ್ಲದೆ, ಚಿತ್ರರಂಗದ ಮತ್ತು ಬೇರೆ ವರ್ಗದ ಅನೇಕ ಸಿನಿಪ್ರಿಯರಿಗೂ ತಮ್ಮ ಸಿನಿಮಾವನ್ನು ತೋರಿಸಿ ಅವರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಎಲ್ಲ ಕಡೆಗಳಿಂದ “ನಟ ಭಯಂಕರ’ನಿಗೆ ತುಂಬ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿರುವುದರಿಂದ ಖುಷಿಯಾಗಿರುವ ಪ್ರಥಮ್‌, ಇದೇ ದಸರಾ ಹಬ್ಬದ ವೇಳೆಗೆ “ನಟ ಭಯಂಕರ’ ದರ್ಶನ ಮಾಡಿಸಲು ರೆಡಿಯಾಗಿದ್ದಾರೆ.

Advertisement

“ನಮ್ಮ ಪ್ಲಾನ್‌ ಪ್ರಕಾರ ಇಷ್ಟೊತ್ತಿಗಾಗಲೇ “ನಟ ಭಯಂಕರ’ ಸಿನಿಮಾ ರಿಲೀಸ್‌ ಆಗಬೇಕಿತ್ತು. ಆದರೆ ಇದೊಂದು ಹಾರರ್‌-ಕಾಮಿಡಿ ಸಿನಿಮಾಗಿದ್ದರಿಂದ, ಗ್ರಾಫಿಕ್ಸ್‌ ಕೆಲಸಗಳಿಗೆ ಸಾಕಷ್ಟು ಸಮಯ ಹಿಡಿಯಿತು. ಹಾಗಾಗಿ ಸಿನಿಮಾ ರಿಲೀಸ್‌ ಆಗೋದು ತಡವಾಯಿತು. ಲೇಟ್‌ ಆದರೂ ನೀಟ್‌ ಆದ ಸಿನಿಮಾ ಮಾಡಿದ್ದೇವೆ ಎಂಬ ಖುಷಿಯಿದೆ. ಗಟ್ಟಿ ಕಥೆಯಿರುವ “ನಟ ಭಯಂಕರ’ ಎಲ್ಲ ಥರದ ಆಡಿಯನ್ಸ್‌ ಗೂ ಇಷ್ಟವಾಗುವಂಥ ಸಿನಿಮಾವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಪ್ರಥಮ್‌.

“ಕನ್ನಡ ಚಿತ್ರರಂಗದ ಅನೇಕ ಘಟಾನುಘಟಿಗಳು ಈ “ನಟ ಭಯಂಕರ’ ಸಿನಿಮಾದಲ್ಲಿ  ಕಾಣಿಸಿಕೊಂಡಸಿದ್ದಾರೆ. “ಅಗ್ನಿ ಐಪಿಎಸ್‌’ ಸಿನಿಮಾದ ನಂತರ ಸಾಯಿಕುಮಾರ್‌ ಅಂಥದ್ದೇ ಒಂದು ಎನರ್ಜಿಟಿಕ್‌ ಪಾತ್ರದಲ್ಲಿ ಕಾಣಿಸಿಕೊಂಡರೆ, “ಡಕೋಟ ಎಕ್ಸ್‌ಪ್ರೆಸ್‌’ ಸಿನಿಮಾದ ನಂತರ ಓಂ ಪ್ರಕಾಶ್‌ ರಾವ್‌ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎನ್ನುವುದು ಪ್ರಥಮ್‌ ಮಾತು.

ಇದನ್ನೂ ಓದಿ:ಆರ್‌ಜೆಡಿಯೊಂದಿಗಿನ ಮೈತ್ರಿ ಮುರಿದು ಬಿಹಾರ ಶೀಘ್ರ ಜೆಡಿಯು ಮುಕ್ತ: ಸುಶೀಲ್ ಮೋದಿ

ಇನ್ನು ಈಗಾಗಲೇ “ನಟ ಭಯಂಕರ’ ಸಿನಿಮಾ ನೋಡಿದವರೆಲ್ಲರೂ, ಹಾರರ್‌ ಸಿನಿಮಾಗಳಲ್ಲೇ ಬೇರೆ ಥರದ ಮೇಕಿಂಗ್‌ ಈ ಸಿನಿಮಾದಲ್ಲಿದೆ. “ಕಾಂಚನಾ’ ಮತ್ತು “ಅರುಂಧತಿ’ ಸಿನಿಮಾವನ್ನು ಕಾಶೀನಾಥ್‌ ಮಾಡಿದ್ದರೆ, ಹೇಗಿರು ತ್ತಿತ್ತೋ ಆ ಥರ “ನಟ ಭಯಂಕರ’ ಸಿನಿಮಾ ಬಂದಿದೆ ಎನ್ನುತ್ತಿದ್ದಾರಂತೆ! “ಕನ್ನಡದಲ್ಲಿ ಇತ್ತೀಚೆಗೆ ಹಾರರ್‌-ಕಾಮಿಡಿ ಶೈಲಿಯ ಸಿನಿಮಾಗಳು ಬಂದಿದ್ದು ವಿರಳ, ಅಂಥ ವಿರಳ ಸಿನಿಮಾಗಳ ಸಾಲಿಗೆ “ನಟ ಭಯಂಕರ’ ಕೂಡ ಸೇರು ತ್ತದೆ. ಈಗಾಗಲೇ “ನಟ ಭಯಂ ಕರ’ ಪ್ರಮೋಶನ್ಸ್‌ ಶುರುವಾಗಿದ್ದು, ದಸರಾ ಹಬ್ಬದ ಹೊತ್ತಿಗೆ ಸಿನಿಮಾ ಬಿಡುಗಡೆ ಗ್ಯಾರಂಟಿ’ ಎನ್ನುತ್ತಾರೆ ಪ್ರಥಮ್.

Advertisement
Advertisement

Udayavani is now on Telegram. Click here to join our channel and stay updated with the latest news.

Next