Advertisement

‘ನಟ ಭಯಂಕರ’ನ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್; ಖುಷಿಯಲ್ಲಿ ಪ್ರಥಮ್

01:52 PM Feb 09, 2023 | Team Udayavani |

 

Advertisement

ಪ್ರಥಮ್‌ ಅಭಿನಯಿಸಿ, ನಿರ್ದೇಶಿಸಿದ್ದ “ನಟ ಭಯಂಕರ’ ಸಿನಿಮಾ ಕಳೆದವಾರ (ಫೆ. 3ಕ್ಕೆ) ಅದ್ಧೂರಿಯಾಗಿ ತೆರೆಗೆ ಬಂದಿದೆ. ಇನ್ನು “ನಟ ಭಯಂಕರ’ ಸಿನಿಮಾ ಬಿಡುಗಡೆಯಾದ ಬಹುತೇಕ ಎಲ್ಲ ಕೇಂದ್ರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸಿನಿಮಾದ ಗಳಿಕೆಯಲ್ಲೂ ನಿಧಾನವಾಗಿ ಏರಿಕೆಯಾಗುತ್ತಿದೆ. ಇದು “ನಟ ಭಯಂಕರ’ ಸಿನಿಮಾದ ನಾಯಕ ಕಂ ನಿರ್ದೇಶಕ ಪ್ರಥಮ್‌ ಖುಷಿಗೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡುವ ಪ್ರಥಮ್‌, “”ನಟ ಭಯಂಕರ’ ಸುಮಾರು ನೂರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆಯಾಗಿದ್ದು, ಬಹುತೇಕ ಎಲ್ಲ ಕೇಂದ್ರಗಳಲ್ಲೂ ಸಿನಿಮಾಕ್ಕೆ ಒಳ್ಳೆಯ ಒಪನಿಂಗ್‌ ಸಿಕ್ಕಿದೆ. ಆಡಿಯನ್ಸ್‌, ಮಿಡಿಯಾಗಳಿಂದಲೂ ಸಿನಿಮಾಕ್ಕೆ ಬಿಗ್‌ ರೆಸ್ಪಾನ್ಸ್‌ ಸಿಗುತ್ತಿದೆ. ಇನ್ನು ಅನೇಕ ಕಡೆಗಳಲ್ಲಿ ಸ್ವತಃ ಥಿಯೇಟರ್ ಗಳ ಮಾಲೀಕರೆ ತಮ್ಮ ಫ್ಯಾಮಿಲಿ ಜೊತೆ ಟಿಕೆಟ್‌ ತೆಗೆದುಕೊಂಡು ಸಿನಿಮಾ ನೋಡಿ, ಬಳಿಕ ಫೋನ್‌ ಮಾಡಿ ಒಳ್ಳೆಯ ಸಿನಿಮಾ ಮಾಡಿದ್ದೀರಿ ಎಂದು ಪ್ರಶಂಸೆ ಮಾಡಿದ್ದಾರೆ. ಮೊದಲ ವಾರದ ಗಳಿಕೆ ಕೂಡ ನಿಧಾನವಾಗಿ ಏರಿಕೆಯಾಗುತ್ತಿದೆ. ಸಹಜವಾಗಿಯೇ ಸಿನಿಮಾದ ಬಗ್ಗೆ ಒಂದು ಕಾನ್ಫಿಡೆನ್ಸ್‌ ಬಂದಿದೆ’ ಎನ್ನುತ್ತಾರೆ.

ಇನ್ನು “ನಟ ಭಯಂಕರ’ ಸಿನಿಮಾದಲ್ಲಿ ನಟನೆ ಮತ್ತು ನಿರ್ದೇಶನ ಎರಡರ ಜವಾಬ್ದಾರಿ ಕೂಡ ಪ್ರಥಮ್‌ ಮೇಲಿತ್ತು. ಸಿನಿಮಾ ಬಿಡುಗಡೆಯಾದ ನಂತರ ಪ್ರೇಕ್ಷಕರು ಪ್ರಥಮ್‌ ನಿರ್ದೇಶನಕ್ಕೆ ಫುಲ್‌ ಮಾರ್ಕ್ಸ್ ಕೊಟ್ಟಿದ್ದಾರಂತೆ! “ಈ ಸಿನಿಮಾದಲ್ಲಿ ನಟನೆ ಮತ್ತು ನಿರ್ದೇಶನ ಎರಡೂ ನನ್ನದೇ ಆಗಿತ್ತು. ಸಿನಿಮಾ ಬಿಡುಗಡೆಯಾದ ನಂತರ ನಿರ್ದೇಶಕನಾಗಿ ನನ್ನ ಕೆಲಸದ ಬಗ್ಗೆ ಆಡಿಯನ್ಸ್‌ ಮತ್ತು ಇಂಡಸ್ಟ್ರಿ ಮಾತನಾಡುತ್ತಿದೆ. ತುಂಬ ಸಮಯದ ನಂತರ ಹಾರರ್‌, ಆ್ಯಕ್ಷನ್‌, ಕಾಮಿಡಿ ಶೈಲಿಯ ಸಿನಿಮಾ ನೋಡಿ ಖುಷಿಯಾಯ್ತು ಎಂದು ಚಿತ್ರರಂಗದ ಅನೇಕರು ಬೆನ್ನುತಟ್ಟಿದ್ದಾರೆ. ಪ್ರೇಕ್ಷಕರು ಕೂಡ ನನ್ನ ನಿರ್ದೇಶನಕ್ಕೆ ಫುಲ್‌ ಮಾಕ್ಸ್‌ ಕೊಟ್ಟಿದ್ದಾರೆ’ ಎನ್ನುವುದು ನಟ ಕಂ ನಿರ್ದೇಶಕ ಪ್ರಥಮ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next