ಪಣಜಿ: ಜೀವನ ಪರ್ಯಂತ ಕ್ಯಾಬಿನೆಟ್ ಸ್ಥಾನಮಾನ ನೀಡುವಂತೆ ನಾನು ಸರ್ಕಾರವನ್ನು ಕೇಳಿರಲಿಲ್ಲ. ಸರ್ಕಾರ ನನಗೆ ನೀಡಿದೆ. ಸಂಪುಟ ಸ್ಥಾನಮಾನ ಕಾನೂನು ಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೈಕೋರ್ಟ್ ನಿರ್ಧರಿಸಬೇಕು. ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ ಎಂದು ಪ್ರತಾಪಸಿಂಗ್ ರಾಣೆ ಅವರು ಹೈಕೋರ್ಟಗೆ ಅಫಿಡವಿಟ್ ಸಲ್ಲಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಪ್ರತಾಪಸಿಂಗ್ ರಾಣೆ ಅವರಿಗೆ ಗೋವಾ ಸರ್ಕಾರವು ಜೀವಮಾನದ ಕ್ಯಾಬಿನೆಟ್ ಸ್ಥಾನಮಾನವನ್ನು ನೀಡಿದೆ. ಈ ವಿಶೇಷ ಸ್ಥಾನವೀಗ ಗೋವಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹಿರೀಯ ವಕೀಲ ಐರೀಶ್ ರೋಡ್ರಿಗಸ್ ಕ್ಯಾಬಿನೆಟ್ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕಳೆದ 50 ವರ್ಷಗಳಿಂದ ಗೋವಾ ವಿಧಾನಸಭೆಯಲ್ಲಿ ಶಾಸಕರಾಗಿದ್ದ ಪ್ರತಾಪಸಿಂಗ್ ರಾಣೆ ರವರ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ರಾಜ್ಯ ಸರ್ಕಾರ ಅವರಿಗೆ ಜೀವಮಾನದ ಕ್ಯಾಬಿನೆಟ್ ಸ್ಥಾನ ನೀಡಲು ನಿರ್ಧರಿಸಿತು. ಈ ಕುರಿತು ಅಧಿಸೂಚನೆಯನ್ನೂ ಕೂಡ ಹೊರಡಿಸಿತು. ಭಾರತೀಯ ಸಂವಿಧಾನದ ಪ್ರಕಾರ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರ ಸಂಖ್ಯೆ 12 ಕ್ಕೆ ನಿಗಧಿಯಾಗಿರುವುದರಿಂದ ರಾಣೆಗೆ ಈ ಸ್ಥಾನಮಾನ ನೀಡಿರುವುದರಿಂದ ಅದು 13 ಕ್ಕೆ ಏರಿಕೆಯಾಗಿದೆ. ಇದು ಕಾನೂನಿಗೆ ಹೊಂದಿಕೆಯಾಗುವುದಿಲ್ಲ. ತೆರಿಗೆದಾರರು ವೆಚ್ಛದ ಭಾರವನ್ನು ಭರಿಸಬೇಕಾಗುತ್ತದೆ. ಇದು ಕಾನೂನಿಗೆ ಹೊಂದಿಕೆಯಾಗುವುದಿಲ್ಲ. ತೆರಿಗೆದಾರರು ವೆಚ್ಛದ ಭಾರವನ್ನು ಭರಿಸಬೇಕಾಗುತ್ತದೆ. ಆದ್ದರಿಂದ ಅಧಿಸೂಚನೆಯನ್ನು ರದ್ಧುಗೊಳಿಸುವಂತೆ ಕೋರಿ ವಕೀಲ ಐರೀಶ್ ರೋಡ್ರಿಗಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕಳೆದ ವಿಚಾರಣೆಯ ವೇಳೆ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠವು ಸರ್ಕಾರ ಮತ್ತು ಪ್ರತಾಪಸಿಂಗ್ ರಾಣೆ ರವರಿಗೆ ನೋಟಿಸ್ ಜಾರಿಮಾಡಿ ತಮ್ಮ ವಾದ ಮಂಡಿಸುವಂತೆ ಸೂಚಿಸಿತ್ತು.
ಇದನ್ನೂ ಓದಿ : ಇನ್ನು ಸಂಪುಟ ಕಸರತ್ತು; ಯಾರಿಗೆ ಗೇಟ್ ಪಾಸ್? ಯಾರಿಗೆ ಸಚಿವ- ಡಿಸಿಎಂ ಸ್ಥಾನ?