Advertisement

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

09:36 PM Mar 26, 2023 | Team Udayavani |

ಹುಣಸೂರು: ಕಳೆದ 25 ವರ್ಷಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್, ಜೆಡಿಎಸ್ ಸರಕಾರಗಳು ಮಾಡದ ಮೀಸಲಾತಿಯ ಕ್ರಾಂತಿಕಾರಿ ಕೆಲಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಮಾಡಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸದರು, ಮುಸ್ಲಿಮರಿಗೆ ಓಲೈಕೆಗಾಗಿ ಹಿಂದೆ ಶೇ.೪ರಷ್ಟು ಮೀಸಲಾತಿಯನ್ನು ನೀಡಿದ್ದರು. ಇದು ಸಂವಿಧಾನ ಅಡಿಯಲ್ಲಿ ತಪ್ಪು ನಿರ್ಧಾರವಾಗಿತ್ತು. ಆದರಿಂದ ಇಂದಿನ ಬಿಜೆಪಿ ಸರಕಾರ ಯಾವ ರೀತಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂಬುದನ್ನು ಕಾನೂನಿನಡಿಯಲ್ಲಿ ಪರಾಮರ್ಶಿಸಿ, ನ್ಯಾಯಯುತವಾಗಿ ಮೀಸಲಾತಿಯನ್ನು ನೀಡಿದೆ.

ಸಂವಿಧಾನಾತ್ಮಕವಾಗಿ ಮುಸ್ಲಿಮರ ಮೀಸಲಾತಿಯನ್ನು ರದ್ದುಮಾಡಿ, ನ್ಯಾಯಯುತವಾಗಿ ಸಮುದಾಯಕ್ಕೆ ಸಿಗಬೇಕಾದ ಒಕ್ಕಲಿಗ, ವೀರಶೈವ, ಎಸ್.ಸಿ-ಎಸ್.ಟಿ. ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಜೊತೆಗೆ ಒಳ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದು, ಅಲ್ಪಸಂಖ್ಯಾತರಿಗೆ ಅನಾವಶ್ಯಕವಾಗಿ ನೀಡಿದ್ದ ಮೀಸಲಾತಿಯನ್ನು ಇತರರಿಗೆ ಹಂಚಿಕೆ ಮಾಡುವ ಮೂಲಕ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸಿದ್ದಾರೆ. ಅಲ್ಲದೆ ಬ್ರಾಹ್ಮಣ ಸಮುದಾಯದ ಬಡವರಿಗಾಗಿ ಶೇ.10ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.

ಪರಿಶಿಷ್ಟ ವರ್ಗದ ಮೀಸಲಾತಿಯಡಿ ಆದಿವಾಸಿಗಳಿಗೆ ಒಳ ಮೀಸಲಾತಿ ಅವಶ್ಯದ ಬಗೆಗಿನ ಹಾಗೂ ಮುಜಾಫರ್ ಅಸ್ಸಾದಿ ವರದಿಯನ್ವಯ 3418 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಬಿಜೆಪಿ ಸರಕಾರ ಗಮನ ಹರಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

18 ತಿಂಗಳಲ್ಲಿ ಎಲ್ಲರಿಗೂ ಶುದ್ದ ನೀರು:
ಹಳೆ ಉಂಡುವಾಡಿಯಿಂದ ಸುಮಾರು ೫೮೦ಕೋಟಿ ರೂ ವೆಚ್ಚದಲ್ಲಿ ಹುಣಸೂರು-ಚಾಮುಂಡೇಶ್ವರಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಕೇಂದ್ರ ಸರಕಾರದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮುಂದಿನ 18 ತಿಂಗಳಿನಲ್ಲಿ ಕಾವೇರಿ ನದಿಯಿಂದ ನದಿಯಿಂದ ಶುದ್ಧ ಕುಡಿಯುವ ನೀರಿನ ಪೂರೈಸಲಾಗುವುದು. ಹಾಗೂ ಹುಣಸೂರು ತಾಲೂಕಿನ ಮರದೂರು ಏತ ನೀರಾವರಿಯೋಜನೆಯಡಿ ತಾಲೂಕಿನ 47, ಕೋಟೆ ತಾಲೂಕಿನ 2 ಕೆರೆಗಳಿಗೆ ನೀರು ತುಂಬಿಸುವ 85 ಕೋಟಿ ವೆಚ್ಚದ ಯೋಜನೆಗೆ ಸಂಪುಟಸಭೆ ಒಪ್ಪಿಗೆ ನೀಡಿದೆ. ಅಲ್ಲದೆ ಒಕ್ಕಲಿಗ ಸಮುದಾಯಕ್ಕೆ ನಗರದಲ್ಲಿ ಎರಡು ಎಕರೆ ಭೂಮಿ, 2 ಕೋಟಿ ರೂ ಅನುದಾನ ಬಿಡುಗಡೆಮಾಡಿದ್ದು. ಸಂಸದರ ನಿಧಿಯಿಂದ 50 ಲಕ್ಷರೂ ನೀಡುವುದಾಗಿ ತಿಳಿಸಿದರು.
ಲಕ್ಷ್ಮಣತೀರ್ಥ ನದಿ ಶುದ್ದೀಕರಣಕ್ಕೆ 90 ಕೋಟಿ ವೆಚ್ಚದಡಿ ಡಿಪಿಆರ್ ತಯಾರಿಸಿದ್ದು, ಮೊದಲ ಹಂತದಲ್ಲಿ 29 ಕೋಟಿರೂ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

Advertisement

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ವಿಭಾಗೀಯ ಪ್ರಮುಖ್ ಮೈ.ವಿ.ರವಿಶಂಕರ್, ತಾಲೂಕು ಅಧ್ಯಕ್ಷ ನಾಗಣ್ಣಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಯೋಗಾನಂದಕುಮಾರ್, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ರಮೇಶ್‌ಕುಮಾರ್, ತಂಬಾಕು ಮಂಡಳಿ ಸದಸ್ಯ ದಿನೇಶ್, ಮುಖಂಡರಾದ ಹನಗೋಡುಮಂಜುನಾಥ್, ದೇವರಹಳ್ಳಿ ಸೋಮಶೇಖರ್, ಮಹದೇವ್ ಮತ್ತಿತರರಿದ್ದರು.

ಹುಣಸೂರಿಗೆ ಸ್ಪರ್ಧಿಯಲ್ಲಾ: ಹುಣಸೂರು ಕ್ಷೇತ್ರಕ್ಕೆ ನಿಮ್ಮ ಹೆಸರು ಕೇಳಿಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ನನ್ನ ಕ್ಷೇತ್ರವ್ಯಾಪ್ತಿಯಲ್ಲಿ ಸರ್ವರಿಗೂ ಸೌಲಭ್ಯ ಕಲ್ಪಿಸುವುದಕ್ಕೆ ಮೊದಲ ಆಧ್ಯತೆ, ಮೋದಿಯವರ ಕೈಕೆಳಗೆ ಕೆಲಸ ಮಾಡುವೆನೇ ಹೊರತು. ರಾಜ್ಯ ರಾಜಕಾರಣಕ್ಕೆ ಬರಲ್ಲವೆಂದು ಸಂಸದ ಪ್ರತಾಪಸಿಂಹ ಸ್ಪಷ್ಟಪಡಿಸಿದರು. ಪ್ರತಿಬಾರಿ ಹೊರಗಿನ ಅಥವಾ ಡೆಮ್ಮಿ ಕ್ಯಾಂಡಿಡೇಟ್ ಹಾಕುತ್ತೀರಾ ಎಂಬ ಅಭ್ಯರ್ಥಿ ಬಗೆಗಿನ ಪ್ರಶ್ನೆಗೆ ಕಮಲವೇ ಇಲ್ಲಿ ಅಭ್ಯರ್ಥಿ ಎಂದು ಹೇಳಿ ಜಾರಿಕೊಂಡರು.

ಇದನ್ನೂ ಓದಿ: ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್‌ ಸ್ಪೋರ್ಟ್ಸ್ ನ “ಟ್ರೋಫಿ ಟೂರ್‌’

Advertisement

Udayavani is now on Telegram. Click here to join our channel and stay updated with the latest news.

Next