Advertisement

ಅಭಿವೃದ್ದಿ ವಿಚಾರ ಇಲ್ಲದವರು ಸಿ.ಡಿ. ಬಗ್ಗೆ ಮಾತನಾಡುತ್ತಾರೆ: ಪ್ರತಾಪ್ ಸಿಂಹ

04:57 PM Feb 04, 2023 | Team Udayavani |

ಮೈಸೂರು: ಕರ್ನಾಟಕದ ರಾಜಕಾರಣವು ಸಿ.ಡಿ. ವಿಚಾರ, ಆಡಿಯೋ, ವೈಯಕ್ತಿಕ ವಿಚಾರ ಬಿಟ್ಟು ಮುಂದೆ ಸಾಗಿದೆ. ಜನರ ಮುಂದೆ ತೆರೆದಿರಲು ಅಭಿವೃದ್ಧಿ ವಿಚಾರ ಇಲ್ಲದೆ ಇಂತಹ ವಿಚಾರದಲ್ಲೇ ಇದ್ದಾರೆ. ಯಾರ ಹತ್ತಿರ ಅಭಿವೃದ್ಧಿ ವಿಚಾರ ಇಲ್ಲವೂ ಅಂತಹವರು ಇಂತಹ ಸಿಡಿ‌ ವಿಚಾರ ಮಾತನಾಡಿಕೊಂಡು ಇರುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಮೊಬೈಲ್ ತೆಗೆದರೂ ಏನಾದರೊಂದು ಸಿಕ್ಕಿರುತ್ತದೆ. ಓಪನ್ ಮಾಡಿ ಅಂದರೆ ಎಷ್ಟು ಜನಕ್ಕೆ ಧೈರ್ಯ ಇದೆ ಹೇಳಿ? ಇಂತಹ ವಿಚಾರಗಳಿಗೆ ಜನ ಸೊಪ್ಪು ಹಾಕಲ್ಲ ಎನ್ನುವುದು ಎಲ್ಲಾ ಚುನಾವಣೆಯಲ್ಲಿ ಗೊತ್ತಾಗಿದೆ. ಹಾಗಾಗಿ ಇಂತಹ ವಿಚಾರ ಬಿಟ್ಟು ಬೇರೆ ವಿಚಾರ ಮಾತನಾಡಿ. ಆಗ ಜನ ಕೂಡ ಒಪ್ಪಿಕೊಳ್ಳುತ್ತಾರೆ ಎಂದರು.

ಇದನ್ನೂ ಓದಿ:ಹಸೆಮಣೆ ಏರಿದಾಕ್ಷಣ ರಕ್ತದಾನ ಮಾಡಿದ ನವಜೋಡಿ; ಲಗ್ನಪತ್ರಿಕೆಯಲ್ಲಿ ಮಾಹಿತಿ

ಇದು ಕೇವಲ ರಾಜಕಾರಣಿಗಳ ಮೊಬೈಲ್‌ನಲ್ಲಿ ಅಲ್ಲ, ಎಲ್ಲರ ಮೊಬೈಲಿನಲ್ಲೂ ಇದೆ. ಇದನ್ನ ಪ್ರಶ್ನೆ ಮಾಡುವವರು ಹಾಗೂ ವಿರೋಧ ಪಕ್ಷದಲ್ಲಿ ಇದ್ದು ಆಡಳಿತ ಪಕ್ಷದವರನ್ನು ಪ್ರಶ್ನಿಸುವವರೂ ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next