Advertisement

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಬಂಡಾರಿ

12:27 PM Apr 28, 2024 | Kavyashree |

ತೀರ್ಥಹಳ್ಳಿ: ಯಾವುದೋ ಪಕ್ಷದಿಂದ ಹಿಂದುತ್ವ ಕಲಿಯಬೇಕಾಗಿಲ್ಲ. ನಾವು ಮೊದಲಿನಿಂದಲೂ ಹಿಂದುತ್ವದಿಂದ ಬೆಳೆದು ಬಂದವರು. ರಾಷ್ಟ್ರದ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ. ನಮಗೆ ಶಾಲೆಯಲ್ಲೇ ರಾಷ್ಟ್ರ ಪ್ರೇಮ ಕಲಿಸಿದ್ದಾರೆ. ಇನ್ನೊಬ್ಬರನ್ನು ತೆಗಳುವುದರಿಂದ ರಾಷ್ಟ್ರ ಪ್ರೇಮ ಬರುವುದಿಲ್ಲ. ನಮಗೆ ಅಂತಹ ರಾಷ್ಟ್ರ ಪ್ರೇಮ ಬೇಕಾಗಿಲ್ಲ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷ ಮಂಜುನಾಥ್ ಬಂಡಾರಿ ಹೇಳಿದರು.

Advertisement

ಭಾನುವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಎರಡನೇ ಹಂತದ ಮಾತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ತನ್ನ ಹಂತ ತಲುಪಲು ಆಗಿಲ್ಲ. ಜನರ ಬದುಕಿನೊಂದಿಗೆ ಇರುವ ಪಕ್ಷ ಕಾಂಗ್ರೆಸ್. ಮನೆ, ಅನ್ನಭಾಗ್ಯ, ಜನರ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ನೀಡಿದ್ದೇವೆ. ಈಗ ರಾಷ್ಟ್ರದಲ್ಲಿಯೂ ಕೂಡ ಕೊಡಲು ತೀರ್ಮಾನ ಮಾಡಲಾಗಿದೆ ಎಂದರು.

ಜನರ ಭಾವನೆ ಜೊತೆ ಆಟ ಆಡುವ ಕೆಲಸ ಬಿಜೆಪಿ ಪಕ್ಷದವರು ಮಾಡುತ್ತಿದ್ದಾರೆ. ನಾವು ಇಲ್ಲಿಯವರೆಗೆ ಏನು ಕೆಲಸ ಮಾಡಿದ್ದೇವೆ ಎಂದು ಹೇಳುತ್ತಿಲ್ಲ. ಬದಲಾಗಿ 2050 ರ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು.

ಸ್ವಿಸ್ ಬ್ಯಾಂಕ್ ನಿಂದ ಹಣ ತರುತ್ತೇವೆ. ಪ್ರತಿಯೊಬ್ಬರ ಬ್ಯಾಂಕ್ ಅಕೌಂಟ್ ಗೆ 15 ಲಕ್ಷ ಹಣ ಹಾಕುತ್ತೇವೆ. ಕಾಂಗ್ರೆಸ್ ಹಗರಣ ಬಯಲಿಗೆ ಎಳೆಯುತ್ತೇವೆ ಎಂದು ಹೇಳಿ ಚುನಾವಣೆ ಗೆದ್ದರು. ನಂತರ  60 ತಿಂಗಳು ಆದರು ಏನು ಮಾಡಿಲ್ಲ. 2019 ರಲ್ಲಿ ಪುಲ್ವಮಾ ದಾಳಿ ನಡೆಸಿ ದೇಶದ ಹಿತ ಮುಖ್ಯ ಎಂದು ಚುನಾವಣೆ ಗೆದ್ದರು. ನಮ್ಮ ದೇಶ ಸುರಕ್ಷತೆ ಇದೆ ಎಂದು ಹೇಳಿದರೆ ಆ ದಾಳಿ ಆಗಿದ್ದು ಹೇಗೆ? ಅದರ ತನಿಖೆ ಎಲ್ಲಿಯವರೆಗೆ ಬಂತು?ಎಂದು ವಾಗ್ದಾಳಿ ನಡೆಸಿದರು.

ಚುನಾವಣೆ ಆಯೋಗ ಮೊದಲ ಬಾರಿ ಪ್ರಧಾನಿಗೆ ನೋಟೀಸ್ ನೀಡಿದ್ದಾರೆ. ಹಾಗಾದ್ರೆ ನಮ್ಮ ದೇಶ ಎಲ್ಲಿಗೆ ಹೋಗುತ್ತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದವರು ಈಗ ಮಾಡುತ್ತಿರುವುದೇನು? ಮುಸ್ಲಿಂ ಬಗ್ಗೆ ಮಾತನಾಡುವುದು, ಧರ್ಮಗಳ ಬಗ್ಗೆ ಹೇಳಿಕೆ ನೀಡುವುದು, ದೇಶದ ಪ್ರಗತಿ ಬಗ್ಗೆ ಮಾತನಾಡುವುದು ಬಿಟ್ಟು ಕೋಮು ಸಂಘರ್ಷದ ಬಗ್ಗೆ ಮಾತನಾಡುತ್ತಾರೆ ಎಂದರು.

Advertisement

ಬಿಜೆಪಿ ಸರ್ಕಾರದ ಗ್ಯಾರಂಟಿ ಎನ್ನುವ ಬದಲು ಮೋದಿ ಗ್ಯಾರಂಟಿ ಎನ್ನುತ್ತಾರೆ. ನಿಮಗೆ ಪಕ್ಷ ಇಲ್ಲವಾ? ಪಕ್ಷದ ಬದಲು ವ್ಯಕ್ತಿಯನ್ನು ಗ್ಯಾರಂಟಿ ಎನ್ನುವುದು ಯಾಕೆ? ನಮ್ಮ ಪಕ್ಷಕ್ಕೆ ವ್ಯಾರೆಂಟಿ ಇದೆ, ನಿಮ್ಮ ವ್ಯಕ್ತಿಗೆ ವ್ಯಾರೆಂಟಿ ಇದೆಯೇ? ನಮ್ಮ ಪಕ್ಷದ ಗ್ಯಾರೆಂಟಿ ಹೆಸರನ್ನೇ ಕದ್ದಿದ್ದಿರಾ ಎಂದು ವಾಗ್ದಾಳಿ ನಡೆಸಿದರು.

ಈ ದೇಶ ಈಗ ಸರ್ವಧಿಕಾರದ ರೀತಿ ಹೋಗುತ್ತಿದೆ. ಸರ್ವಧಿಕಾರಿ ಧೋರಣೆ ಮಾಡುತ್ತಿದ್ದೀರಾ? ಈ.ಡಿ, ಸಿಬಿಐ, ಎನ್ಐಎ ಅನ್ನು ನಿಮ್ಮ ಕೆಲಸಕ್ಕೆ ಅನುಗುಣವಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದೀರಾ, ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ಭ್ರಷ್ಟರು ಆದ್ರೆ ನಿಮ್ಮಲ್ಲಿಗೆ ಬಂದಾಗ ಅವರು ಉತ್ತಮರು, ಹಾಗಾದ್ರೆ ಬಿಜೆಪಿ ಏನು ವಾಷಿಂಗ್ ಮೇಷನ್ ಆಗಿದ್ಯಾ ಎಂದು ಪ್ರಶ್ನೆ ಮಾಡಿದರು.

400 ಸೀಟ್ ಗೆಲ್ಲುತ್ತೇವೆ ಎಂದರೆ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಯಾಕೆ ಹೋಗಬೇಕಿತ್ತು. ನಿಮಗೆ ಸೋಲಿನ ಭಯ ಇದೆ. ನಾವು ಕರ್ನಾಟದಲ್ಲಿ ಮಾಡಿರುವ ಗ್ಯಾರಂಟಿಯಿಂದ 5 ಲಕ್ಷ ಕುಟುಂಬಕ್ಕೆ ಒಳ್ಳೆಯದಾಗಿದೆ. 5 ಗ್ಯಾರಂಟಿ 5 ಕೋಟಿ ಜನರಿಗೆ ಅನುಕೂಲವಾಗಿದೆ. ಗ್ಯಾರಂಟಿಯಿಂದ ನಮಗೆ ಜನ ಮತ ಹಾಕಿದರೆ, 28 ಕ್ಕೆ 28 ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ . ಶಿವಮೊಗ್ಗದಲ್ಲೂ ನಾವು ಗೆಲ್ಲುತ್ತೇವೆ. ಕಳೆದ ಚುನಾವಣೆಗೂ ಮೊದಲು ಗ್ಯಾರೆಂಟಿ ಕಾರ್ಡ್ ಬಗ್ಗೆ ಮಾತನಾಡಿದವರು ಈ ಬಾರಿ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ನಾವು ಎಲ್ಲಾ ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಕೆಸ್ತೂರು ಮಂಜುನಾಥ್, ಡಾ. ಸುಂದರೇಶ್, ರಹಮತುಲ್ಲ ಅಸಾದಿ, ಗೀತಾ ರಮೇಶ್, ವಿಶ್ವನಾಥ್ ಶೆಟ್ಟಿ, ಮಂಜುಳಾ ನಾಗೇಂದ್ರ ಅಮರನಾಥ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next