Advertisement

ಪ್ರಶಾಂತ್‌ ಪೂಜಾರಿ ಕೊಲೆ ಪ್ರಕರಣ: 4 ಆರೋಪಿಗಳಿಗೆ ನ್ಯಾಯಾಂಗ ಬಂಧನ

01:48 PM Jun 08, 2017 | Harsha Rao |

ಮೂಡಬಿದಿರೆ: ಹೂವಿನ ವ್ಯಾಪಾರಿ ಪ್ರಶಾಂತ್‌ ಪೂಜಾರಿ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳೂ ಸೇರಿದಂತೆ ಒಟ್ಟು 4 ಮಂದಿ ಆರೋಪಿಗಳು ಮೂಡಬಿದಿರೆ ನ್ಯಾಯಾಲಯಕ್ಕೆ ಶರಣಾಗಿದ್ದು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

2015ರ ಅ. 9ರಂದು ಬೆಳಗ್ಗೆ ತಮ್ಮ ಹೂವಿನ ಅಂಗಡಿಗೆ ಹೋಗುತ್ತಿದ್ದ  ಪ್ರಶಾಂತ್‌ ಪೂಜಾರಿಯನ್ನು ಮೂರು ಬೈಕುಗಳಲ್ಲಿ ಬಂದ ಆರು ಮಂದಿ ತಲವಾರ್‌ನಲ್ಲಿ ಕಡಿದು ಕೊಲೆ ಮಾಡಿದ್ದರು. ಪ್ರಮುಖ ಆರೋಪಿ ಅಕºರ್‌ ವಳಚ್ಚಿಲ್‌ (30), ಸಿರಾಜ್‌ ಉಳ್ಳಾಲ (28) ಮತ್ತು ಈ ಕೃತ್ಯದಲ್ಲಿ ಸಹಕಾರ ನೀಡಿದ  ಅನ್ವರ್‌ ಬಜಪೆ, ತಾಜುದ್ದೀನ್‌ ಬಜಪೆ ಇವರು ಕೋರ್ಟಿಗೆ ಶರಣಾದವರು.

ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿ ಒಟ್ಟು  17 ಮಂದಿಯನ್ನು ಹೆಸರಿಸಲಾಗಿದ್ದು ಪೊಲೀಸರು ಕೆಲವರನ್ನು ಬಂಧಿಸಿದ್ದರು.

ಈ ಹಿಂದೆ ಆರೋಪಿಗಳ ಪೈಕಿ ಮಹಮ್ಮದ್‌ ಹನೀಫ್‌ (36), ಇಬ್ರಾಹಿಂ ಲಿಯಾಕತ್‌ (26), ಮಹಮ್ಮದ್‌ ಇಲ್ಯಾಸ್‌ (27) ಮತ್ತು  ಅಬ್ದುಲ್‌ ರಶೀದ್‌   ಇವರ ಬಂಧನವಾಗಿತ್ತು.

ಹಂಡೇಲು ಬಳಿ ನಡೆದಿದ್ದ ಅಶೋಕ್‌ ಮತ್ತು ವಾಸು ಅವರ ಮೇಲೆ ಹಲ್ಲೆ ಹಾಗೂ  ಜಯನಾಥ್‌ ಕೋಟ್ಯಾನ್‌ ಅವರ ಮೇಲಿನ ಹಲ್ಲೆ  ನಡೆಸಿರುವುದು ತಾವೇ ಎಂದು ಈ ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದರು.  ಇವರೆಲ್ಲರೂ ಬಜಪೆ, ಸುರತ್ಕಲ್‌, ಮಂಗಳೂರು ಪರಿಸರದವರು.

Advertisement

ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಪ್ರಶಾಂತ್‌ ಪೂಜಾರಿ ಮೂಡಬಿದಿರೆ ಸಮೀಪದ ಗಂಟಾಲ್ಕಟ್ಟೆ  ಕಸಾಯಿಖಾನೆ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದದ್ದೇ ಹತೆÂಗೆ ಕಾರಣವೆನ್ನಲಾಗಿದೆ.

ಇನ್ನೂ ಮೂವರು ಬಾಕಿ
ಪ್ರಶಾಂತ್‌ ಕೊಲೆ ಪ್ರಕರಣದ 17 ಮಂದಿ ಆರೋಪಿಗಳಲ್ಲಿ ಈ ಹಿಂದೆ 10 ಮಂದಿಯನ್ನು ಬಂಧಿಸಲಾಗಿತ್ತು.  ಈ ಪೈಕಿ ಮುಸ್ತಾಫ ಕಾವೂರು ಮೈಸೂರಿನ ಸಬ್‌ ಜೈಲಿನಲ್ಲಿ ಪ್ರಶಾಂತ್‌ ಪೂಜಾರಿಯ ಸ್ನೇಹಿತ ಕಿರಣ್‌ ಶೆಟ್ಟಿಯಿಂದ ಹತ್ಯೆಗೀಡಾಗಿದ್ದ. ಉಳಿದ 9 ಮಂದಿ ಆರೋಪಿಗಳಲ್ಲಿ ಹೆಚ್ಚಿನವರಿಗೆ ಜಾಮೀನು ಸಿಕ್ಕಿದೆ.

ಪ್ರಕರಣದಲ್ಲಿ ಮಿಕ್ಕುಳಿದ  ಆರೋಪಿಗಳಾದ ನವಾಜ್‌ ಮಂಗಳೂರು, ಇರ್ಷಾದ್‌ ಬಜ್ಪೆ, ಮುಸ್ತಾಫ್‌ ಬಜಪೆ ಇನ್ನೂ ತಲೆಮರೆಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next