Advertisement

ʼಸಲಾರ್‌ʼನಿಂದ ಮತ್ತೊಂದು ʼಕೆಜಿಎಫ್‌ʼ ನಿರೀಕ್ಷೆ ಬೇಡ.. Salaar ಕಥೆ ರಿವೀಲ್ ಮಾಡಿದ್ರು ನೀಲ್

05:03 PM Nov 29, 2023 | Team Udayavani |

ಹೈದರಾಬಾದ್: ಡಾರ್ಲಿಂಗ್‌ ಪ್ರಭಾಸ್‌ ಅವರ ʼಸಲಾರ್‌ʼ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿಯೇ ಇದೆ. ಸಿನಿಮಾ ರಿಲೀಸ್‌ ಗೆ ದಿನಗಣನೆ ಆರಂಭವಾಗಿದೆ. ಸದ್ಯ ಬಹು ನಿರೀಕ್ಷಿತ ʼಸಲಾರ್‌ʼ ಟ್ರೇಲರ್‌ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

Advertisement

ಕೆಜಿಎಫ್‌ -1,2 ಬಳಿಕ ಪ್ರಶಾಂತ್‌ ನೀಲ್‌ ಅವರ ʼಸಲಾರ್‌ʼ ನೋಡಲು ಜನ ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಸಟ್ಟೇರಿದ ದಿನದಿಂದ ನಾನಾ ರೀತಿಯಲ್ಲಿ ಸದ್ದು ಮಾಡಿದೆ. ಅದರಲ್ಲಿ ಹೆಚ್ಚು ಸುದ್ದಿಯಾಗಿದ್ದು ಸಿನಿಮಾ ರಿಮೇಕ್ ಎನ್ನುವ ವಿಚಾರ. ಪ್ರಶಾಂತ್‌ ನೀಲ್‌ ಅವರು ತಮ್ಮ ʼಉಗ್ರಂʼ ಸಿನಿಮಾದ ಕಥೆಯನ್ನೇ ʼಸಲಾರ್‌ʼ ನಲ್ಲಿ ಹೇಳಿದ್ದಾರೆ ಎನ್ನಲಾಗಿತ್ತು.

ಸಿನಿಮಾದ ಕಥೆಯ ಬಗ್ಗೆ ಮೊದಲ ಬಾರಿ ನಿರ್ದೇಶಕ ಪ್ರಶಾಂತ್‌ ನೀಲ್‌ ಮೌನ ಮುರಿದ್ದಾರೆ. ʼಪಿಂಕ್‌ ವಿಲ್ಲಾʼ ಈ ಬಗ್ಗೆ ಎಕ್ಸ್‌ ಕ್ಲೂಸಿವ್‌ ಆಗಿ ಅವರು ಮಾತನಾಡಿದ್ದಾರೆ.

“ಸಲಾರ್‌ “ ಸ್ನೇಹಿರಿಬ್ಬರು ಶತ್ರುಗಳಾಗುವ ಕಥೆಯನ್ನೊಳಗೊಂಡಿರುವ ಸಿನಿಮಾವಾಗಿದೆ. ಸ್ನೇಹವೇ ಸಲಾರ್‌ ನಲ್ಲಿ ಕಾಣುವ ಪ್ರಮುಖ ಭಾವನೆಯಾಗಿದೆ. ʼಸಲಾರ್ʼ ಮೊದಲ ಪಾರ್ಟ್‌ ನಲ್ಲಿ ಅರ್ಧ ಕಥೆಯನ್ನು ಹೇಳುತ್ತೇವೆ. ಇನ್ನರ್ಧ ಕಥೆಯನ್ನು ಎರಡನೇ ಭಾಗದಲ್ಲಿ ಹೇಳುತ್ತೇವೆ. ಡಿಸೆಂಬರ್ 1 ರಂದು ಬಿಡುಗಡೆಯಾಗಲಿರುವ ಸಲಾರ್ ಟ್ರೈಲರ್‌ನಲ್ಲಿ ಪ್ರೇಕ್ಷಕರು ನಾವು ರಚಿಸಿದ ಪ್ರಪಂಚದ ಒಂದು ಝಲಕ್‌ ನ್ನು ನೋಡಲಿದ್ದಾರೆ” ಎಂದು ಹೇಳಿದ್ದಾರೆ.

“ನಾನು ಇಲ್ಲಿಯವರೆಗೆ ಮಾಡಿದ ಎಲ್ಲಾ ಚಿತ್ರಗಳು ಫ್ಯಾಂಟಸಿಯ ಸ್ಪರ್ಶವನ್ನು ಹೊಂದಿವೆ. ಸ್ನೇಹಿತ, ತಾಯಿ ಅಥವಾ ತಂದೆ ಎನ್ನುವಂಥದ್ದು ಜಗತ್ತನ್ನು ಆಕರ್ಷಿಸುವ ಭಾವನೆಗಳಾಗಿವೆ. ನನ್ನ ಪ್ರಕಾರ ಭಾವನೆಗಳಿಲ್ಲದ ಚಿತ್ರವು ಶೋರಿಲ್‌ನಂತೆ ಕಾಣುತ್ತದೆ. ಸಿನಿಮಾದಲ್ಲಿ ಈ ಭಾವನೆಗಳಿದ್ದರೆ ಮಾತ್ರ ಆ್ಯಕ್ಷನ್ ಗಳು ಹೊರಬರಲು ಸಾಧ್ಯ. ನಾನು ಯಾವಾಗಲೂ ಎಮೋಷನಲ್‌ ಕಥೆಗಳನ್ನು ಬರೆಯುತ್ತೇನೆ. ನಂತರದ ಹಂತದಲ್ಲಿ ಇದರಲ್ಲಿ ಆ್ಯಕ್ಷನ್ ಗಳು ಸೇರುತ್ತವೆ. ʼಸಲಾರ್‌ʼ ನಲ್ಲೂ ಹೀಗೆಯೇ ಆಗಿದೆ” ಎಂದು ಹೇಳಿದ್ದಾರೆ.

Advertisement

ʼಸಲಾರ್‌ʼ ಹಾಗೂ ʼಕೆಜಿಎಫ್‌ʼ ಎರಡೂ ಭಿನ್ನವಾಗಿವೆ. ಭಿನ್ನವಾದ ಭಾವ,ಕಥೆಯನ್ನೊಳಗೊಂಡಿದೆ. ʼಸಲಾರ್‌ʼ ಕಥೆ ಹೇಳುವ ರೀತಿ ಭಿನ್ನವಾಗಿದೆ. ಜನ ʼಸಲಾರ್‌ʼ ನಿಂದ ಮತ್ತೊಂದು ʼಕೆಜಿಎಫ್‌ʼ ನಿರೀಕ್ಷೆ ಮಾಡುವುದು ಬೇಡ. ʼಸಲಾರ್‌ʼ ಎನ್ನುವುದೇ ಒಂದು ಬೇರೆ ಜಗತ್ತು.

“ಕೆಜಿಎಫ್ ಎರಡು ಭಾಗವಾಗಿರಲಿಲ್ಲ, ಆದರೆ ಸಲಾರ್ ಆಗಿದೆ. ಕಥೆಯು ತುಂಬಾ ದೊಡ್ಡದಾಗಿದೆ, ಇದು ಸರಿಯಾದ 6 ಗಂಟೆಗಳ ಚಲನಚಿತ್ರವನ್ನು ಮಾಡಬಹುದು. ಎರಡನೇ ಭಾಗಕ್ಕೆ ಸಾಕಷ್ಟು ವಿಷಯವಿದೆ ಮತ್ತು ಸಲಾರ್: ಭಾಗ ಒಂದನ್ನು ವೀಕ್ಷಿಸಿದಾಗ ಪ್ರೇಕ್ಷಕರು ಸಹ ಅದೇ ರೀತಿ ಭಾವಿಸುತ್ತಾರೆ. ಇದೊಂದು ಶುದ್ಧ ಕಥೆ ಆಧಾರಿತ ಚಿತ್ರ. ವಾಸ್ತವವಾಗಿ, ನಾನು ಕೆಜಿಎಫ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲೇ ನಾನು ಸಲಾರ್ ಬರೆದಿದ್ದೆ” ಎಂದು ಹೇಳಿದ್ದಾರೆ.

ಅಂದಹಾಗೆ ಡಿ.1 ರಂದು ʼಸಲಾರ್‌ʼ ಟ್ರೇಲರ್‌ ರಿಲೀಸ್‌ ಆಗಲಿದೆ. ಡಿ.22 ರಂದು ಸಿನಿಮಾ ತೆರೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next