ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಬೆನ್ನಲ್ಲೇ ಅದಕ್ಕೆ ಅನೇಕ ಕಾರಣಗಳು ಹೊರಬಿದ್ದಿವೆ.
ಕಾಂಗ್ರೆಸ್‌ನಲ್ಲಿ ಭರಪೂರ ಬದಲಾವಣೆಗಳಿಗೆ ಪ್ರಶಾಂತ್ ಕಿಶೋರ್ ಸೂಚಿಸಿದ್ದನ್ನು ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅತ್ಯಂತ ಶಿಸ್ತುಬದ್ಧವಾಗಿ ಕೇಳಿದ್ದರಾದರೂ ರಾಹುಲ್ ಗಾಂಧಿ ಮಾತ್ರ ಅದಕ್ಕೆ ಒತ್ತು ಕೊಟ್ಟಿಲ್ಲ.
ಪಕ್ಷದಲ್ಲಿ ಇಷ್ಟೆಲ್ಲ ದೊಡ್ಡ ಮಟ್ಟದ ಬೆಳವಣಿಗೆಯಾಗುತ್ತಿದ್ದರೂ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಿದ್ದು, ಪ್ರಶಾಂತ್‌ಗೆ ಇಷ್ಟವಾಗಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಅದೇ ಕಾರಣಕ್ಕೆ ಅವರು ಕಾಂಗ್ರೆಸ್ ಸೇರಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಪ್ರಶಾಂತ್ ಪಕ್ಷಕ್ಕೆ ಸೇರುವುದಿಲ್ಲ ಎಂದು ಹೇಳಿದ್ದರೂ ಕಾಂಗ್ರೆಸ್ ಮಾತ್ರ ಅವರಿಗೆ ಎಂದೆಂದಿಗೂ ಪಕ್ಷದ ಬಾಗಿಲು ತೆರೆದಿರುತ್ತದೆ ಎಂದು ಹೇಳಿದೆ. ಪಕ್ಷದ ಹಿರಿಯ ನಾಯಕ ಎ.ಕೆ.ಆ್ಯಂಟನಿ ಪಕ್ಷದ ಬಗ್ಗೆ ಮಾತನಾಡಿದ್ದು, “ಕಾಂಗ್ರೆಸ್ ಅನ್ನು ಕಡೆಗಣಿಸಬೇಡಿ. ನಮ್ಮ ಪಕ್ಷವಿಲ್ಲದೆ ಕೇಂದ್ರದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಕಾಂಗ್ರೆಸ್‌ಗೆ ನೆಹರು-ಗಾಂಧಿ ಕುಟುಂಬವೇ ಪವರ್ ಹೌಸ್. ಅವರಿಲ್ಲದೆ ಪಕ್ಷವನ್ನು ಶೇ. 99 ಕಾರ್ಯಕರ್ತರು ಒಪ್ಪುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ : ಅರಂತೋಡು : ರಜೆಯಲ್ಲಿ ಅಜ್ಜನ ಮನೆಗೆ ಬಂದಿದ್ದ ಬಾಲಕ ಹೊಳೆಯಲ್ಲಿ ಮುಳುಗಿ ಸಾವು