Advertisement

ಪ್ರಶಾಂತ್‌ಕುಮಾರ್‌ ಗ್ರೂಪ್‌ಎಂ ಸಿಇಒ

01:43 AM May 24, 2019 | Team Udayavani |

ಬೆಂಗಳೂರು: ಗ್ರೂಪ್‌ ಎಂ ದಕ್ಷಿಣ ಏಷಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಯಾಗಿ ಪ್ರಶಾಂತ್‌ ಕುಮಾರ್‌ (ಪಿಕೆ) ಅವರನ್ನು ನೇಮಕ ಮಾಡಲಾಗಿದೆ ಎಂದು ಗ್ರೂಪ್‌ ಎಂ ಏಷಿಯಾ ಪೆಸಿಫಿಕ್‌ನ ಸಿಇಒ ಮಾರ್ಕ್‌ ಪ್ಯಾಟರ್ಸನ್‌ ಪ್ರಕಟಿಸಿದ್ದಾರೆ.

Advertisement

ಪ್ರಸ್ತುತ ಸಿಇಒ ಹುದ್ದೆಯಲ್ಲಿ ಸ್ಯಾಮ್‌ ಸಿಂಗ್‌ ಅವರು ಕಾರ್ಯನಿರ್ವಹಿಸುತ್ತಿದ್ದು, ಅವರ ಸೇವೆ ಜೂನ್‌ ಅಂತ್ಯದಲ್ಲಿ ಕೊನೆಗೊಳ್ಳಲಿದೆ. ಆ ಸ್ಥಾನಕ್ಕೆ ಮುಖ್ಯ ಕಾರ್ಯಾಚರ‌ಣೆ ಅಧಿಕಾರಿ (ಸಿಒಒ)ಯಾಗಿ ಸೇವೆ ಸಲ್ಲಿಸುತ್ತಿರುವ ಪ್ರಶಾಂತ್‌ ಕುಮಾರ್‌ ಅವರಿಗೆ ಬಡ್ತಿ ನೀಡಿ, ತಕ್ಷಣ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. 15 ವರ್ಷಗಳಿಂದ ಗ್ರೂಪ್‌ ಎಂ ಕಂಪನಿಯಲ್ಲಿ ಪಿಕೆ ಅವರು ಸೇವೆ ಸಲ್ಲಿಸುತ್ತಿದ್ದಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಿಕೆ, ಸ್ಯಾಮ್‌ ಅವರೊಂದಿಗೆ ಕೆಲಸ ಮಾಡಿದ ಅನುಭವ ನನಗಿದೆ. ಅವರೊಬ್ಬ ಕಠಿಣ ಪರಿಶ್ರಮದ ಕೆಲಸಗಾರ. ಅವರ ಭವಿಷ್ಯಕ್ಕೆ ಶುಭ ಕೋರುತ್ತೇನೆ. ಎಲ್ಲರ ಸಹಕಾರದೊಂದಿಗೆ ಹೊಸ ಹುದ್ದೆಯನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಹಾಗೂ ಕಂಪನಿಯ ಅಭಿವೃದ್ಧಿಗೆ ದುಡಿಯುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next