Advertisement
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು 2019 ರಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಉಲ್ಲೇಖಿಸಿ, ಬಿಹಾರ ಸಿಎಂ ಅದೇ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಶೋರ್ ಹೇಳಿದರು.
Related Articles
Advertisement
ಭವಿಷ್ಯದ ದೃಷ್ಟಿಯಿಂದ ಎಲ್ಲಾ ವಿರೋಧ ಪಕ್ಷಗಳು ಮಾತುಕತೆ ನಡೆಸುವಂತೆ ಒತ್ತಾಯಿಸಿದ ನಿತೀಶ್ ಕುಮಾರ್, ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುತ್ತೇನೆ. ಇತರ ಜನರು ಸಹ ಇರುತ್ತಾರೆ ಮತ್ತು ನಾವು ಕುಳಿತು ನಿರ್ಧರಿಸುತ್ತೇವೆ ಎಂದು ಹೇಳಿದ್ದರು. ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಪ್ರಶಾಂತ್ ಕಿಶೋರ್ “ಬಿಹಾರದ ಭವಿಷ್ಯವನ್ನು ಕೇಸರಿ ಪಕ್ಷವು ನಿತೀಶ್ ಕುಮಾರ್ ಅವರಿಗೆ ಮಾರಾಟ ಮಾಡಿದೆ ಎಂದು ಆರೋಪಿಸಿದ್ದಾರೆ. “ಬಿಹಾರದಲ್ಲಿ ಬಿಜೆಪಿ ಹಿಂಬಾಲಕನ ಸ್ಥಾನ ಹೊಂದಿದೆ. ಅದು ಬಿಹಾರದ ಭವಿಷ್ಯವನ್ನು ನಿತೀಶ್ಗೆ ಮಾರಾಟ ಮಾಡಿದೆ” ಎಂದಿದ್ದಾರೆ.