Advertisement

ಕಾಂಗ್ರೆಸ್‌ ಸೇರದಿರುವ ನಿರ್ಧಾರ ಸಮರ್ಥನೀಯ: ಪ್ರಶಾಂತ್‌ ಕಿಶೋರ್‌

08:59 PM Dec 10, 2021 | Team Udayavani |

ನವದೆಹಲಿ: ಕೆಲವು ಕಾರಣಗಳಿಂದಲೇ ಕಾಂಗ್ರೆಸ್‌ ಸೇರದೇ ಇರಲು ನಿರ್ಧರಿಸಿದ್ದಾಗಿ ಚುನಾವಣಾ ವ್ಯೂಹರಚನೆಕಾರ ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

Advertisement

ಅಂಥ ನಿರ್ಧಾರ ಕೈಗೊಂಡಿದ್ದರೆ, ಆ ಪಕ್ಷಕ್ಕೆ ಮತ್ತು ತಮಗೆ ವೈಯಕ್ತಿಕವಾಗಿ ನಷ್ಟ ಉಂಟಾಗುತ್ತಿತ್ತು. ಅದನ್ನು ತಪ್ಪಿಸುವ ನಿಟ್ಟಿನಲ್ಲಿಯೇ ಈ ಪಕ್ಷ ಸೇರ್ಪಡೆ ನಿರ್ಧಾರವನ್ನು ಚರ್ಚಿಸಿ ಸಹಮತದಿಂದ ನಿರ್ಧರಿಸಲಾಗಿತ್ತು ಎಂದು ಹೇಳಿದ್ದಾರೆ. “ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಈ ಅಂಶ ಪ್ರಸ್ತಾಪಿಸಿದ್ದಾರೆ.

ಉತ್ತಮ ಪ್ರತಿಪಕ್ಷವಾಗಿ ಕಾರ್ಯವೆಸಗಲು ಕಾಂಗ್ರೆಸ್‌ಗೆ ಉತ್ತಮ ಅವಕಾಶ ಇದ್ದರೂ, ಅದನ್ನು ಪಕ್ಷ ಸರಿಯಾದ ಬಳಕೆ ಮಾಡಲಿಲ್ಲ ಎಂದು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಹೊಂದಿರುವ ಸ್ಥಿತಿಯನ್ನು ಗಮನಿಸಿಯೇ ಈ ಬಗ್ಗೆ ಟ್ವೀಟ್‌ ಮಾಡಿದ್ದೇನೆಯೇ ಹೊರತು, ಯಾರನ್ನೂ ವೈಯಕ್ತಿಕವಾಗಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹತ್ತು ವರ್ಷಗಳ ಚುನಾವಣೆಯನ್ನು ಗಮನಿಸುವುದಾದರೆ, ಹೆಚ್ಚಿನ ಚುನಾವಣೆಗಳಲ್ಲಿ ಸೋತಿದೆ. 2012ರಲ್ಲಿ ಕರ್ನಾಟಕದ ವಿಧಾನಸಭೆ ಚುನಾವಣೆ ಹೊರತುಪಡಿಸಿ ಉಳಿದ ಶೇ.90ರಲ್ಲಿ ಅವರು ಸೋತಿದ್ದಾರೆ ಎಂದರು.

ಉತ್ತಮವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಆ ಪಕ್ಷ ಪ್ರಭಾರ ಅಧ್ಯಕ್ಷರನ್ನು ಹೊಂದಿರಲು ಸಾಧ್ಯವೇ ಇಲ್ಲ. ಹೀಗಾಗಿ, ಅವರು ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ಹೊಂದಬೇಕಾಗಿದೆ ಎಂದರು. 1984ರ ಚುನಾವಣೆಯಲ್ಲಿ 404 ಕ್ಷೇತ್ರಗಳಲ್ಲಿ ಗೆದ್ದ ಬಳಿಕ ಕಾಂಗ್ರೆಸ್‌ ಏಕಾಂಗಿಯಾಗಿ ಚುನಾವಣೆಯಲ್ಲಿ ಜಯ ಸಾಧಿಸಿದ್ದೇ ಇಲ್ಲ ಎಂದು ಪ್ರತಿಪಾದಿಸಿದ್ದಾರೆ ಪ್ರಶಾಂತ್‌ ಕಿಶೋರ್‌.

ಇದನ್ನೂ ಓದಿ:ಕತ್ರಿನಾ-ವಿಕ್ಕಿ ಮದುವೆ ಕೇಕ್‌ ತಯಾರಿಕೆಗೆ ಬರೋಬ್ಬರಿ 48 ಗಂಟೆ ಬೇಕಾಗಿತ್ತಂತೆ!

Advertisement

ಕಾಂಗ್ರೆಸ್‌ ವರಿಷ್ಠರು ತಮ್ಮನ್ನು ಸಂಪರ್ಕಿಸಿದ್ದ ಕಾರಣಕ್ಕಾಗಿಯೇ ಆ ಪಕ್ಷಕ್ಕಾಗಿ ಗೆಲ್ಲುವ ಸೂತ್ರ ರಚಿಸಿದ್ದೆ. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಪಕ್ಷದ ನಾಯಕರಿಗೆ ಸೇರಿದ್ದು ಎಂದರು. ಎರಡು ವರ್ಷಗಳಿಂದ ಕಾಂಗ್ರೆಸ್‌ ನಾಯಕರ ಜತೆಗೆ ಮಾತುಕತೆ ನಡೆಸಲಾಗುತ್ತಿದೆ. ಪಶ್ಚಿಮ ಬಂಗಾಳ ಚುನಾವಣೆ ಬಳಿಕ ಅದು ಇನ್ನೂ ಸ್ಪಷ್ಟವಾಗಿ ನಡೆಯುತ್ತಿದೆ ಎಂದರು.

ಯುಪಿಎ ಅಸ್ತಿತ್ವದಲ್ಲಿಯೇ ಇಲ್ಲ ಎಂಬ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದ ಬಗ್ಗೆ ಉತರಿಸಿದ ಪ್ರಶಾಂತ್‌ ಕಿಶೋರ್‌ “ಈ ಬಗ್ಗೆ ಅವರೇ ಹೆಚ್ಚಿನ ಮಾಹಿತಿ ನೀಡಬೇಕಾಗಿದೆ’ ಎಂದರು. 2004ರಲ್ಲಿ ಯುಪಿಎಯಲ್ಲಿ ಇದ್ದವರೆಲ್ಲ ಮೈತ್ರಿಕೂಟ ತ್ಯಜಿಸಿದ್ದಾರೆ. ಒಕ್ಕೂಟ ರಚನೆ ವೇಳೆ ಇಲ್ಲದೇ ಇದ್ದವರು ಸೇರ್ಪಡೆಯಾಗಿದ್ದಾರೆ. ಹೀಗಾಗಿ, 2004ರಿಂದ 2019ರ ನಡುವೆ ಇದ್ದ ಯುಪಿಎ ಈಗ ಇಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next