ಪಟ್ನಾ: ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಇದೀಗ ಅಧಿಕೃತವಾಗಿ ಜೆಡಿಯುನ ನಂ.2 ಆಗಿ ಹೊರ ಹೊಮ್ಮಿದ್ದಾರೆ. ಪ್ರಶಾಂತ್ ಕಿಶೋರ್ ಅವರನ್ನು ಪಕ್ಷದ ಉಪಾಧ್ಯಕ್ಷ ರಾಗಿ ನೇಮಕ ಮಾಡಿ ಮುಖ್ಯ ಮಂತ್ರಿ ಹಾಗೂ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಈ ಮೂಲಕ ಪಕ್ಷದಲ್ಲಿ ಎರಡನೇ ಅತ್ಯಂತ ಪ್ರಭಾವಿ ನಾಯಕರನ್ನಾಗಿ ಅಷ್ಟೇ ಅಲ್ಲ, ತಮ್ಮ ಉತ್ತರಾಧಿ ಕಾರಿಯ ನ್ನಾಗಿಯೂ ಮಾಡಿದ್ದಾರೆ. ಈ ಸಂಬಂಧ ಮಾತನಾಡಿ ರುವ ಪಕ್ಷದ ವಕ್ತಾರ ಕೆ.ಸಿ.ತ್ಯಾಗಿ ಅವರು, ಪ್ರಶಾಂತ್ ಕಿಶೋರ್ ಅವರ ಈ ನೇಮಕದಿಂದಾಗಿ ಸಾಂಪ್ರ ದಾಯಿಕ ಮತಗಳ ಜತೆಗೆ ಸಮಾಜದ ಎಲ್ಲ ವರ್ಗ ಗಳನ್ನು ಮುಟ್ಟಲು ಸಾಧ್ಯ ವಾಗುತ್ತದೆ. ಅವರ ಚಾಣಾಕ್ಷತೆ ಮತ್ತು ಹಿಂದಿನ ಸಾಧನೆಗಳು ಪಕ್ಷಕ್ಕೆ ಹೆಚ್ಚಿನ ನೆರವು ಮಾಡಲಿವೆ ಎಂದು ಹೇಳಿದ್ದಾರೆ. ಈ ಮಧ್ಯೆ, ಪ್ರಶಾಂತ್ ಕಿಶೋರ್ ಅವರ ಈ ನೇಮಕದಿಂದಾಗಿ ಜೆಡಿಯುನಲ್ಲಿ ಭಿನ್ನಮತ ಕಾಣಿಸಿಕೊಳ್ಳುವ ಆತಂಕವೂ ಎದುರಾಗಿದೆ. ಪಕ್ಷದ ಹಿರಿಯ ನಾಯಕರು ಕಿಶೋರ್ ಅವರನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಆದರೆ, ಪ್ರಶಾಂತ್ ಕಿಶೋರ್ ಅವರು 2015ರಲ್ಲಿ ಬಿಹಾರದಲ್ಲಿ ಪಕ್ಷವನ್ನು ಗೆಲ್ಲಿಸಿಕೊಟ್ಟ ಬಗ್ಗೆ ವಿಶ್ವಾಸ ಹೊಂದಿರುವ ನಿತೀಶ್‌ಕುಮಾರ್ ಅಪಾರ ಭರವಸೆ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.