ಪಟ್ನಾ: ಸದ್ಯ ಯಾವುದೇ ರಾಜಕೀಯ ಪಕ್ಷದ ಸ್ಥಾಪನೆ ಇಲ್ಲ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಗುರುವಾರ (ಮೇ 05) ಸ್ಪಷ್ಟಪಡಿಸಿದ್ದು, ಬಿಹಾರದ ಚಂಪಾರಣ್ ಜಿಲ್ಲೆಯಿಂದ 3,000 ಕಿಲೋ ಮೀಟರ್ ದೂರದವರೆಗೆ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ:ಸಂವಿಧಾನಕ್ಕೆ ಅಪಚಾರ ಮಾಡಿದ ಹೊರಟ್ಟಿ ರಾಜೀನಾಮೆ ನೀಡಬೇಕು : ಬಿ.ಕೆ. ಹರಿಪ್ರಸಾದ್
ಇತ್ತೀಚೆಗಷ್ಟೇ ಪ್ರಜಾಪ್ರಭುತ್ವದ ರಿಯಲ್ ಮಾಸ್ಟರ್ಸ್ ಗಳಾದ ಜನರ ಮುಂದೆ ಹೋಗುವುದಾಗಿ ಟ್ವೀಟ್ ಮಾಡಿದ್ದ ಪ್ರಶಾಂತ್ ಕಿಶೋರ್ ಇಂದು ಸುದ್ದಿಗಾರರ ಜತೆ ಮಾತನಾಡುತ್ತ, ಜನರ ಬಳಿ ಹೋಗುವ ಮೂಲಕ ಉತ್ತಮ ಆಡಳಿತದ ಬಗ್ಗೆ ಮತ್ತು ಸಮಸ್ಯೆಗಳ ಕುರಿತು ಹೆಚ್ಚು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡುವ ಉದ್ದೇಶದಿಂದ ಅಕ್ಟೋಬರ್ 2ರಿಂದ 3,000 ಕಿಲೋ ಮೀಟರ್ ದೂರದವರೆಗಿನ ಪಾದಯಾತ್ರೆ ಆರಂಭಿಸುವುದಾಗಿ ಪ್ರಶಾಂತ್ ಕಿಶೋರ್ ಹೇಳಿದ್ದು, ಬಿಹಾರದಲ್ಲಿ ಸದ್ಯ ಯಾವುದೇ ಚುನಾವಣೆ ಇಲ್ಲ. ಈ ನಿಟ್ಟಿನಲ್ಲಿ ತಮಗೆ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಉದ್ದೇಶ ಹೊಂದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಉತ್ತಮ ಆಡಳಿತ (ಜನ್ ಸುರಾಜ್) ಐಡಿಯಾವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಮುಂದಿನ 3-4 ತಿಂಗಳ ಕಾಲ ಬಿಹಾರದಲ್ಲಿ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಲಿದ್ದೇನೆ ಎಂದು ಕಿಶೋರ್ ವಿವರಿಸಿದ್ದು, ಚಂಪಾರಣ್ ಪ್ರದೇಶದಿಂದ ಅಕ್ಟೋಬರ್ 2ರಿಂದ 3,000 ಕಿಲೋ ಮೀಟರ್ ಪಾದಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.