ಹೊಸದಿಲ್ಲಿ: ಪಾಕಿಸ್ಥಾನ ಸರಕಾರ ಭಾರತದ ವಿರುದ್ಧ ಉಗ್ರರನ್ನು ಛೂ ಬಿಡುವುದು ಹಗಲಿನಷ್ಟೇ ಸತ್ಯ. ಆದರೂ, ಪ್ರಸಾರ ಭಾರತಿಯ ದೂರದರ್ಶನ ಮತ್ತು ಆಕಾಶ ವಾಣಿಗೆ ವೀಕ್ಷಕರು, ಕೇಳುಗರ ಎರಡನೇ ಅತ್ಯಂತ ಹೆಚ್ಚಿನ ಸಂಖ್ಯೆ ಇರುವುದು ಅಲ್ಲಿಯೇ. ಅಮೆರಿಕದಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ರವಿವಾರ ಈ ಮಾಹಿತಿ ನೀಡಿದೆ. ಇದೇ ವೇಳೆ, “ಪ್ರಸಾರ ಭಾರತಿ’ಯ ಡಿಜಿಟಲ್ ಚಾನೆಲ್‌ಗಳು 2020ರಲ್ಲಿ ಶೇ.100ರಷ್ಟು ಬೆಳವಣಿಗೆ ಸಾಧಿಸಿವೆ.
ಪ್ರಸಾರ ಭಾರತಿಯ “ನ್ಯೂಸ್ ಆನ್ ಏರ್’ ಆ್ಯಪ್‌ಗೆ 2.5 ಮಿಲಿಯ ಬಳಕೆದಾರರು ಇದ್ದಾರೆ. ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ “ಚಂದನ’ ವಾಹಿನಿ ಪ್ರಸಾರ ಭಾರತಿಯ ಮೊದಲ 20 ಚಾನೆಲ್‌ಗಳ ಸ್ಥಾನದಲ್ಲಿ ಇರುವುದು ಗಮನಾರ್ಹ. ದೂರದರ್ಶನದ ಕ್ರೀಡಾ ವಾಹಿನಿ ಮತ್ತು ಆಕಾಶವಾಣಿಯ ಕ್ರೀಡಾ ಚಾನೆಲ್ ನಿಧಾನವಾಗಿ ಮೆಚ್ಚುಗೆಗಳಿಸಲು ಶಕ್ತವಾಗಿದೆ.
ಇದನ್ನೂ ಓದಿ:ವಿಶ್ವಸಂಸ್ಥೆಯ ಭದ್ರತ ಮಂಡಳಿಯಲ್ಲಿ ಇಂದು ತ್ವಿವರ್ಣ ಧ್ವಜ ಸ್ಥಾಪನೆ
ಜನಮೆಚ್ಚುಗೆ ಗಳಿಸಿದ ಡಿಜಿಟಲ್ ವೀಡಿಯೋಗಳ ಪೈಕಿ 2020 ಜ.26ರಂದು ಪ್ರಧಾನಿ ಮೋದಿಯವರು ಗಣರಾಜ್ಯ ದಿನ ವಿದ್ಯಾರ್ಥಿಗಳ ಜತೆಗೆ ಮಾತುಕತೆ ನಡೆಸಿದ್ದಕ್ಕೆ ಆದ್ಯತೆ ಸಿಕ್ಕಿದೆ. ಇದರ ಜತೆಗೆ 1,500ಕ್ಕೂ ಅಧಿಕ ರೇಡಿಯೋ ನಾಟಕಗಳೂ ಕೂಡ ಯೂ ಟ್ಯೂಬ್ ಚಾನೆಲ್ ನಲ್ಲಿ ಸಾರ್ವಜನಿಕರಿಗೆ ಲಭ್ಯವಿವೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ಈಶಾನ್ಯ ರಾಜ್ಯಕ್ಕಾಗಿ ಇರುವ ಆಕಾಶವಾಣಿ 1 ಲಕ್ಷಕ್ಕಿಂತ ಹೆಚ್ಚು ಚಂದಾದಾರರನ್ನು ಹೊಂದಿದೆ.