Advertisement

Ayodhya ರಾಮಮಂದಿರದಲ್ಲಿ ಹೊರಗಿನಿಂದ ತಂದ ಪ್ರಸಾದ ನಿಷಿದ್ಧ

11:22 PM Sep 27, 2024 | Team Udayavani |

ಅಯೋಧ್ಯೆ: ತಿರುಪತಿ ಲಡ್ಡುವಿನ ಕಲಬೆರಕೆ ವಿವಾದದ ಬೆನ್ನಲ್ಲೇ ಅಯೋಧ್ಯೆಯ ರಾಮಮಂದಿರದಲ್ಲಿ ಹೊರಗಿ ನಿಂದ ಬರುವ ಪ್ರಸಾದಗಳನ್ನು ದೇವರಿಗೆ ಅರ್ಪಿಸುವುದನ್ನು ನಿಷೇಧಿಸಲಾಗಿದೆ. ಇದೇ ವೇಳೆ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ದೇಶದೆಲ್ಲೆಡೆ ಬಿಕರಿಯಾಗುತ್ತಿರುವ ತುಪ್ಪಗಳ ಶುದ್ಧತೆಯನ್ನು ಪ್ರಶ್ನಿಸಿದ್ದಾರೆ.

Advertisement

ಜತೆಗೆ ದೇವಾಲಯಗಳಲ್ಲಿ ಅಲ್ಲಿನ ಅರ್ಚಕರ ಮೇಲ್ವಿಚಾರಣೆಯಲ್ಲೇ ಪ್ರಸಾದವನ್ನು ತಯಾರಿಸ ಬೇಕು ಎಂದು ಕೋರಿದ್ದಾರೆ. ಅಲ್ಲದೇ ಎಲ್ಲ ಪ್ರಮುಖ ಧಾರ್ಮಿಕ ಕೇಂದ್ರಗಳು ಹಾಗೂ ದೇವಾಲಯಗಳಲ್ಲಿ ಹೊರಗಿನಿಂದ ತಂದ ಪ್ರಸಾದಗಳನ್ನು ದೇವರಿಗೆ ಅರ್ಪಿಸಲು ಸಂಪೂರ್ಣ ನಿಷೇಧ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ. “ತಿರುಪತಿ ಪ್ರಸಾದದಲ್ಲಿ ಕೊಬ್ಬು ಬಳಕೆಯಾದ ಬಗ್ಗೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಭಕ್ತರು ಹಾಗೂ ಧಾರ್ಮಿಕ ಮುಖಂಡರು ಇದನ್ನು ಖಂಡಿಸಿದ್ದು, ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ ಎಂದು ಸತ್ಯೇಂದ್ರ ದಾಸ್‌ ಹೇಳಿದ್ದಾರೆ.

ಅಲ್ಲದೆ ದೇಶದಲ್ಲಿ ಮಾರಾಟವಾಗುತ್ತಿರುವ ತುಪ್ಪ ಹಾಗೂ ಎಣ್ಣೆಯ ಶುದ್ಧತೆ ಬಗ್ಗೆಯೂ ಸರಕಾರ ಪರೀಕ್ಷೆ ನಡೆಸಬೇಕು ಎಂದ ಅವರು, ದೇಶದ ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next