ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಗೆ ಕುಲಪತಿ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ರಾಮಸೇನೆಯ ಪ್ರಸಾದ್ ಅತ್ತಾವರರನ್ನು ಬಂಧಿಸಲಾಗಿದೆ.
ವಿವಿ ಪ್ರಾದ್ಯಾಪಕರಿಗೆ ವಿವೇಕ್ ಆಚಾರ್ಯ ಎನ್ನುವವರ ಮೂಲಕ ಪ್ರಸಾದ್ ಅತ್ತಾವರ ಪರಿಚಯವಾಗಿದ್ದು, ತನಗೆ ದೇಶದ ಗಣ್ಯ ವ್ಯಕ್ತಿಗಳ ಪರಿಚಯವಿದ್ದು ಬೇಕಾದ ಕೆಲಸ ಮಾಡಿಸಬಲ್ಲೆ ಎಂದು ಹಲವರೊಂದಿಗೆ ತಗೆದ ಫೋಟೊ ತೋರಿಸಿ ನಂಬಿಸಿದ್ದ.
ಇದನ್ನೂ ಓದಿ:ಕುಡಿದು ಕಾರು ಚಲಾಯಿಸಿ ಪಾದಚಾರಿಗೆ ಢಿಕ್ಕಿ ಹೊಡೆದ ಪಿಡಬ್ಲ್ಯೂಡಿ ಎಇಇ: ಪಾದಚಾರಿ ಸಾವು
ನಿಮಗೆ ರಾಯಚೂರು ವಿಶ್ವವಿದ್ಯಾಲಯ ಕುಲಪತಿಯನ್ನಾಗಿ ಮಾಡುತ್ತೇನೆ ಎಂದು ನಂಬಿಸಿ, 30 ಲಕ್ಷ ಹಣ ಕೇಳಿದ್ದ. ನಂತರ ಒತ್ತಾಯವಾಗಿ ಪ್ರಾದ್ಯಾಪಕರಿಂದ 17.5 ಲಕ್ಷ ರೂ ಪಡೆದು, ಉಳಿದ ಹಣಕ್ಕೆ 3 ಖಾಲಿ ಚೆಕ್ ಪಡೆದು ವಂಚಿಸಿ, ಹಣ ಮರಳಿ ಕೇಳಿದಾಗ ಜೀವ ಬೇದರಿಕೆ ಹಾಕಿದ್ದಾಗಿ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ನೇಪಾಳದಲ್ಲೂ ಕೆಜಿಎಫ್ 2 ಹವಾ : ಯಶ್ ಅಭಿಮಾನಿಯ ಅಭಿಮಾನಕ್ಕೆ ನೆಟ್ಟಿಗರು ಫಿದಾ..!