ಉಳ್ಳಾಲ : ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ಥಾನದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಕನ್ನಡಿಗರ ಪೈಕಿ 7 ಮಂದಿಯನ್ನು ರವಿವಾರ ಭಾರತಕ್ಕೆ ಏರ್ ಲಿಫ್ಟ್ ಮಾಡಲಾಗಿದ್ದು, ಅವರಲ್ಲಿ ಐವರು ದಕ್ಷಿಣ ಕನ್ನಡದವರು, ಆ ಪೈಕಿ ಅಫ್ಘಾನಿಸ್ಥಾನದ ನ್ಯಾಟೋ ಪಡೆಯ ಅಧೀನದ ಲಂಡನ್ ಮೂಲದ ಓವರ್ ಸೀಸ್ ಸಪ್ಲೈ ಸರ್ವೀಸಸ್ ಸಂಸ್ಥೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಅಕೌಂಟೆಂಟ್ ಆಗಿದ್ದ ಪ್ರಸಾದ್ ಆನಂದ್ ಕೂಡ ಒಬ್ಬರು.
ಇದನ್ನೂ ಓದಿ : ಕೋವಿಡ್19: ಕಳೆದ 160 ದಿನಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೋಂಕಿನ ಪ್ರಕರಣಗಳು ಪತ್ತೆ..!
2021ರ ಪೆಬ್ರವರಿಗೆ ಆಗಮಿಸಿದ್ದ ಪ್ರಸಾದ್ ಎಪ್ರಿಲ್ 3ರಂದು ಅಫ್ಘಾನಿಸ್ಥಾನಕ್ಕೆ ತೆರಳಿದ್ದರು. ಆ ಬಳಿಕ ಅಫಘಾನಿಸ್ಥಾನದಲ್ಲಿ ತಾಲಿಬಾನ್ ಅಕ್ರಮಣ ಆರಂಬಿಸಿದ್ದು , ಕಾಬೂಲ್ ನಲ್ಲಿದ್ದ ಪ್ರಸಾದ್ ಸೇರಿದಂತೆ ಐದು ಮಂದಿ ಕನ್ಬಡಿಗರನ್ನು ಏರ್ ಲಿಫ್ಟ ಮಾಡಿ ಕತಾರ್ ಗೆ ಕೊಂಡೊಯ್ದಿದ್ದು, ಬಳಿಕ ನಿನ್ನೆ(ಭಾನುವಾರ, ಆಗಸ್ಟ್ 22) ರಾತ್ರಿ ದೆಹಲಿ ತಲುಪಿ, ಇಂದು(ಸೋಮವಾರ, ಆಗಸ್ಟ್ 23) ಬೆಳಗ್ಗೆ ಕೊಲ್ಯ ಕನೀರುತೋಟದಲ್ಲಿರುವ ಮನೆಗೆ ತಲುಪಿದ್ದಾರೆ.
ಸುರಕ್ಷಿತವಾಗಿ ಮುಟ್ಟಲು ಕೊರಗಜ್ಜನಿಗೆ ಹರಕೆ ಹೇಳಿದ್ದೆ
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಸಾದ್ ಪತ್ನಿ ಭವಿಳಾ ಪ್ರಸಾದ್, ಪತಿ ಪ್ರಸಾದ್ ಕಾಬೂಲಿನಲ್ಲಿ ಸಿಲುಕಿಕೊಂಡ ಸಂದರ್ಭದಲ್ಲಿ ಸುರಕ್ಷಿತವಾಗಿ ಮರಳಲು ಕೊರಗಜ್ಜನಿಗೆ ಹರಕೆ ಹೇಳಿಕೊಂಡಿದ್ದೆ. ಕಾಬೂಲ್ ತಾಲಿಬಾನ್ ವಶವಾಗುತ್ತಿದ್ದಂತೆ ನಿರಂತರವಾಗಿ ಪ್ರಸಾದ್ ಅವರೊಂದಿಗೆ ಸಂಪರ್ಕ ದಲ್ಲಿದ್ದೆ. ಮೂರು ದಿನಗಳ ಕಾಲ ಏರ್ಪೋರ್ಟ್ ನಲ್ಲಿ ಏರ್ ಲಿಫ್ಟ ಗಾಗಿ ಕಾಯುತ್ತಿದ್ದರು. ಕತಾರ್ ಗೆ ಏರ್ ಲಿಫ್ಟ್ ಆಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದು ಇದೀಗ ಮನೆಗೆ ತಲುಪಿದ್ದರಿಂದ ಮನಸ್ಸಿಗೆ ಸಮಾಧಾನವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಇಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 14 ವರ್ಷ: ಗುಡಿಬಂಡೆ ತಾಲೂಕಿಗಿಲ್ಲ ಸೂಕ್ತ ಸ್ಥಾನ ಮಾನ