Advertisement
– ಹೀಗೆ ಹೇಳಿ ಹಾಗೊಮ್ಮೆ ಪಕ್ಕದಲ್ಲಿದ್ದ ನಿರ್ದೇಶಕರ ಮುಖ ನೋಡಿದರು ನಟ ಮನೋರಂಜನ್. ಅವರು ಹೀಗೆ ಹೇಳಿದ್ದು, ‘ಪ್ರಾರಂಭ’ ಚಿತ್ರದ ಬಗ್ಗೆ. ಇತ್ತೀಚೆಗೆ ‘ಪ್ರಾರಂಭ’ ಚಿತ್ರತಂಡ ಸಿನಿಮಾ ಬಗ್ಗೆ ಹೇಳಿಕೊಳ್ಳಲು ಪತ್ರಕರ್ತರ ಮುಂದೆ ಬಂದಿತ್ತು. ಅಂದು ಮೊದಲು ಮಾತಿಗಿಳಿದದ್ದು, ಮನೋರಂಜನ್. ಅವರು ಹೇಳಿದ್ದಿಷ್ಟು. ‘ನನಗೆ ಈ ಚಿತ್ರದ ಕಥೆ ಇಷ್ಟ ಆಯ್ತು. ಹಾಗೆಯೇ ಟೀಮ್ ಕೂಡ. ಟೀಸರ್ ನೋಡಿದವರು ಮೆಚ್ಚಿದ್ದಾರೆ. ಆ ಟೀಸರ್‌ಗೆ ದರ್ಶನ್ ವಾಯ್ಸ ಕೊಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್ ಹೇಳ್ತೀನಿ. ಕ್ಲೈಮ್ಯಾಕ್ಸ್‌ನಲ್ಲೂ ಅವರ ವಾಯ್ಸ ಇರಲಿದೆ. ಸಿನಿಮಾಗೆ ಗಟ್ಟಿ ಧ್ವನಿ ಬೇಕಿತ್ತು. ಹಾಗಾಗಿ, ಅವರನ್ನು ಕೇಳಿಕೊಂಡಾಗ, ಒಪ್ಪಿ ಧ್ವನಿ ಕೊಟ್ಟಿದ್ದಾರೆ. ಟೀಸರ್ ನೋಡಿದವರು ‘ಅರ್ಜುನ್ ರೆಡ್ಡಿ’ ಅಂತಾರೆ. ಆದರೆ, ಅದರ ಚಿಕ್ಕ ಲೈನ್ ಕೂಡ ಇಲ್ಲಿಲ್ಲ. ಇದು ಸಂಪೂರ್ಣ ಹೊಸ ಸ್ಟೋರಿ. ನಾನಿಲ್ಲಿ ಎರಡು ಶೇಡ್ ಇರುವ ಪಾತ್ರ ಮಾಡಿದ್ದೇನೆ. ಲವ್ ಟ್ರ್ಯಾಕ್‌ನಲ್ಲಿ ಲವ್ವರ್ ಬಾಯ್ ಆಗಿದ್ದರೆ, ಇನ್ನೊಂದು ಟ್ರ್ಯಾಕ್‌ನಲ್ಲಿ ಗಡ್ಡ ಬಿಟ್ಟು, ಎಣ್ಣೆ ಹೊಡ್ಕಂಡು, ಸಿಗರೇಟ್ ಸೇದ್ಕೊಂಡು ಇರುವ ಪಾತ್ರ. ದ್ವಿತಿಯಾರ್ಧದಲ್ಲಿ ಹೊಸ ಅಂಶ ಇದೆ. ಎಲ್ಲವನ್ನೂ ಈಗಲೇ ಹೇಳಿದರೆ ಮಜ ಇರಲ್ಲ. ಇನ್ನು, ‘ಪ್ರಾರಂಭ’ ಅಂದರೆ, ಆರಂಭ ಎಂದರ್ಥ. ಬದುಕು ಮತ್ತು ಪ್ರೀತಿ ಇವೆರೆಡರ ನಡುವಿನ ಕಥೆ ಇಲ್ಲಿದೆ. ಎಲ್ಲ ಮುಗಿದ ಮೇಲೆ ಹೊಸ ಬದುಕು ಶುರುವಾಗುತ್ತೆ. ಅದು ಹೇಗೆ ಅನ್ನೋದೇ ‘ಪ್ರಾರಂಭ’. ಇಲ್ಲಿ ಪ್ರೇಮಲೋಕವೂ ಉಂಟು, ರಣಧೀರನ ಗತ್ತು ಉಂಟು. ಲವ್‌ಸ್ಟೋರಿ ಜೊತೆ ಎಮೋಷನ್ಸ್, ಆ್ಯಕ್ಷನ್, ಸೆಂಟಿಮೆಂಟ್ ಇದೆ. ಪ್ರೀತಿಯಲ್ಲಿ ಫೇಲ್ಯೂರ್ ಆದವರು ಎಣ್ಣೆ ಹೊಡ್ಕಂಡ್ ಬಿದ್ದಿರಬೇಕೆಂಬ ರೂಲ್ ಇಲ್ಲ. ಪ್ರೀತಿ ಸಿಗದವರು ಹೇಗಿರಬೇಕೆಂಬ ಅಂಶ ಇಲ್ಲಿ ಹೈಲೈಟ್. ಚಿತ್ರದ ಸ್ಟ್ರೆಂಥ್ ಅಂದರೆ ಅದು ಛಾಯಾಗ್ರಾಹಕ ಸುರೇಶ್ ಬಾಬು ಹಾಗು ನಿರ್ಮಾಪಕರು’ ಎಂದು ಹೇಳಿಕೊಂಡರು ಮನೋರಂಜನ್.
Related Articles
Advertisement
ರಘು ಶ್ರೀವತ್ಸ ಅವರಿಲ್ಲಿ ಗೆಳೆಯನ ಪಾತ್ರ ಮಾಡಿದ್ದಾರಂತೆ. ಸಂಗೀತ ನಿರ್ದೇಶಕ ಪ್ರಜ್ವಲ್ ಪೈ ಅವರಿಗಿಲ್ಲಿ ಒಳ್ಳೆಯ ಹಾಡು ಕೊಟ್ಟ ಖುಷಿ ಇದೆಯಂತೆ. ಛಾಯಾಗ್ರಾಹಕ ಸುರೇಶ್ ಬಾಬು ಅವರಿಗೆ ತೃಪ್ತಿ ಕೊಟ್ಟ ಚಿತ್ರಗಳಲ್ಲಿ ಇದೂ ಒಂದಂತೆ. ಸಂಕಲನಕಾರ ವಿಜಯ್, ‘ಇದೊಂದು ಒಳ್ಳೆಯ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ನಿಮ್ಮೆಲ್ಲರ ಸಹಕಾರ ಬೇಕು’ ಅಂದರು.
ವಿಜಯ್ ಭರಮಸಾಗರ