Advertisement

‘ಪ್ರಾರಂಭ’ ಚಿತ್ರ ವಿಮರ್ಶೆ: ಭಗ್ನ ಪ್ರೇಮಿಯ ಕಥೆ-ವ್ಯಥೆ

03:36 PM May 21, 2022 | Team Udayavani |

ಯುವ ಮನಸ್ಸುಗಳ ಲವ್‌ ಫೇಲ್ಯೂರ್‌ ಅನ್ನೋ ಸಂಗತಿ ಸಾಮಾನ್ಯ. ಆದರೆ ಭಗ್ನ ಪ್ರೇಮಿಗಳು ತಮ್ಮ ಪ್ರೇಯಸಿಯನ್ನು ಮರೆಯಲು ಸಿಗರೇಟ್‌, ಕುಡಿತದ ದಾಸರಾಗುತ್ತಾರೆ. ತಮಗೂ ಒಂದು ಜೀವನ ಇದೆ, ತಮಗಾಗಿ ನಮ್ಮ ತಂದೆ ತಾಯಿ, ಸ್ನೇಹಿತರು ಎಷ್ಟು ಪರಿತಪಿಸುತ್ತಾರೆ ಎನ್ನುವ ಪರಿಜ್ಞಾನ ಅವರಿಗೆ ಇರುವುದಿಲ್ಲ. ಇಂಥದ್ದೇ ಒಂದು ಯುವ ಪ್ರೇಮ ಕಥೆ, ಭಗ್ನ ಪ್ರೇಮಿಯ ವ್ಯಥೆಯನ್ನು ಹೇಳುವ ಸಿನಿಮಾವೇ “ಪ್ರಾರಂಭ’.

Advertisement

ಪ್ರಾರಂಭ ಔಟ್‌ ಅಂಡ್‌ ಔಟ್‌ ಲವ್‌ ಸ್ಟೋರಿಯಾಗಿದ್ದು, ಚಿತ್ರದ ಮೊದಲಾರ್ಧ ಸುಂದರವಾದ ಪ್ರೇಮ ಕಥೆ, ಬ್ರೇಕಪ್‌ನಿಂದ ಕೂಡಿದ್ದರೆ, ಚಿತ್ರದ ಎರಡನೇ ಭಾಗದಲ್ಲಿ ಜೀವನ ಸಂಬಂಧಗಳ ಮಹತ್ವವನ್ನು ತಿಳಿಸುತ್ತದೆ. ಎಲ್ಲಾ ಲವ್‌ ಸ್ಟೋರಿಗಳಂತೆ ಇಲ್ಲೂ ಒಂದು ಕಥೆ ಇದ್ದು, ಆ ಕಥೆಗೆ ಪ್ರೇಮದ ಸುಂದರ ಆಯಾಮ ಹಾಗೂ ವಿರೋಧ, ವಿರಹ, ಹಳೆ ನೆನಪುಗಳು ಎನ್ನುವ ಅಪೂರ್ಣ ಪ್ರೇಮವೂ ಇದೆ. ಚಿತ್ರಕಥೆ ಮೊದಲು ಮಾಮೂಲಿಯಂತೆ ಅನಿಸಿದರೆ, ಎರಡನೇ ಭಾಗ ಕೊಂಚ ಬದಲಾವಣೆಯನ್ನು ನೀಡುತ್ತದೆ. ಚಿತ್ರದ ಕಥೆಯನ್ನು ಇನ್ನಷ್ಟು ಬಿಗಿಮಾಡುವುದರ ಜೊತೆಗೆ ಸಣ್ಣ ವಿಭಿನ್ನತೆ ಇದ್ದಿದ್ದರೆ ಚಿತ್ರ ಇನ್ನೂ ಚೆನ್ನಾಗಿರುತ್ತಿತ್ತು. ಆದರೆ ನಿರ್ದೇಶಕ ಮನು ಕಲ್ಯಾಡಿ ಅವರ ಚೊಚ್ಚಲ ಪ್ರಯತ್ನವನ್ನು ಮೆಚ್ಚಬಹುದು.

ಇದನ್ನೂ ಓದಿ:@62ನೇ ಹುಟ್ಟುಹಬ್ಬ: ಸ್ಟಾರ್ ನಟನಾಗುವ ಮುನ್ನ ಲಾಲೆಟ್ಟನ್ ಖ್ಯಾತ ಕುಸ್ತಿಪಟುವಾಗಿದ್ದರು!

ಮನುರಂಜನ್‌ ಪಕ್ಕಾ ಲವರ್‌ ಬಾಯ್‌ ಹಾಗೂ ಲವ್‌ ಫೆಲ್ಯೂರ್‌ ದೇವದಾಸ್‌ ಎರಡು ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೂತನ ಚಿತ್ರವಾದರು ನಾಯಕಿ ಕೀರ್ತಿ ಪಾತ್ರವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಚಿತ್ರದ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶಾಂಭವಿ ವೆಂಕಟೇಶ್‌, ಕಡ್ಡಿಪುಡಿ ಚಂದ್ರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಪ್ರಜ್ವಲ್‌ ಪೈ ಸಂಗೀತ ಸಂಯೋಜನೆಯಲ್ಲಿ, ಗಾಯಕ ಸಂಜಿತ್‌ ಹೆಗ್ಡೆ ಕಂಠದಲ್ಲಿ ಮೂಡಿ ಬಂದ ಹಾಡು ಇಂಪಾಗಿದ್ದು , ಚಿತ್ರಮಂದಿರದ ಹೊರಗೂ ಗುನುಗುವಂತಿದೆ. ಛಾಯಾಗ್ರಾಹಕ ಬಿ. ಸುರೇಶ್‌ ಬಾಬು ಗೋವಾದ ಸುಂದರ ತಾಣಗಳು ಹಾಗೂ ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸುಂದರವಾಗಿ ಸೆರೆಹಿಡಿದ್ದಾರೆ.

Advertisement

ವಾಣಿ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next