Advertisement

ತುಳುವಿನಲ್ಲಿ 21 ಅಡಿ ಉದ್ದದ ಹಾಡು ಬರೆದ ಮಂಗಳೂರಿನ ಪ್ರಾಣೇಶ್‌

10:46 AM Jun 18, 2020 | mahesh |

ಮಂಗಳೂರು: ತುಳು ಭಾಷೆಯಲ್ಲಿ ಅತೀ ಉದ್ದದ ಹಾಡು ಬರೆದ ಮಂಗಳೂರಿನ ಕುಲಶೇಖರದ ಪ್ರಾಣೇಶ್‌ ಅವರು ಯು.ಕೆ.ಯ ವರ್ಲ್ಡ್ ಬುಕ್‌ ಆಫ್‌ ರೆಕಾರ್ಡ್ಸ್‌ ವಿಶ್ವದಾಖಲೆ ಪುಸ್ತಕಕ್ಕೆ ಸೇರಿದ್ದಾರೆ. ಪ್ರಾಣೇಶ್‌ಅವರು ತುಳು ಭಾಷೆ ಸಂಸ್ಕೃತಿಯನ್ನು ಬಿಂಬಿಸುವ “ತುಳುನಾಡ ಐಸಿರಿ’ ಎಂಬ ಹೆಸರಿನ ಹಾಡು ಬರೆದಿದ್ದು, ಇದು 21 ಅಡಿ ಉದ್ದ ಹೊಂದಿದೆ. 30ಕ್ಕೂ ಮಿಕ್ಕಿ ಎ4 ಹಾಳೆಯಲ್ಲಿ ಒಟ್ಟು 108 ಚರಣಗಳಿವೆ. 2,241 ಶಬ್ಧಗಳನ್ನು ಹೊಂದಿದೆ. ತುಳು ಭಾಷೆಯಲ್ಲಿ ಹೆಸರು ಗಳಿಸಬೇಕು ಎಂಬ ಉದ್ದೇಶದಿಂದ ಸ್ವತಃ ಹಾಡು ಬರೆದು ಜನವರಿ ತಿಂಗಳಿನಲ್ಲಿ ವರ್ಲ್ಡ್ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಕಳುಹಿಸಿದ್ದರು. ಇದೀಗ ಅವರು ಬರೆದ ಹಾಡು ವರ್ಲ್ಡ್ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ ಎಂದು ಅವರಿಗೆ ಆನ್‌ಲೈನ್‌ ಮೂಲಕ ಪ್ರಮಾಣ ಪತ್ರ ಬಂದಿತ್ತು. ಈ ಹಾಡಿನಲ್ಲಿ ತುಳುನಾಡಿನ ಸಂಸ್ಕೃತಿಯಾದ ದೈವಾರಾಧನೆ, ನಾಗಾರಧನೆ, ಪುಣ್ಯಕ್ಷೇತ್ರಗಳ ಬಗ್ಗೆ, ತುಳುನಾಡಿನ ಹಬ್ಬಗಳ ಆಚರಣೆ, ಜನಪ್ರಿಯ ಕ್ರೀಡೆಗಳು, ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಮನವಿ ಸಾಹಿತ್ಯ ರೂಪದಲ್ಲಿ ಇದೆ. ಪ್ರಾಣೇಶ್‌ ಅವರು ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಕಲಿಯುತ್ತಿದ್ದಾರೆ. ಅವರ ಈ ಸಾಧನೆಗೆ ತಾಯಿ ಸುಜಾತಾ ಸಾಥ್‌ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next