Advertisement

ಅಸಹಿಷ್ಣುಗಳಿಗೆ ದೇಶದಲ್ಲಿ ಜಾಗವಿಲ್ಲ:ದೆಹಲಿ ವಿವಿ ಹಿಂಸಾಚಾರಕ್ಕೆ ಚಾಟಿ

11:24 PM Mar 02, 2017 | Team Udayavani |

ಕೇರಳ:ಭಾರತ ದೇಶದಲ್ಲಿ ಅಸಹಿಷ್ಣುಗಳಿಗೆ ಜಾಗವಿಲ್ಲ. ಅದೇ ರೀತಿ ದೇಶದ ವಿಶ್ವವಿದ್ಯಾಲಯಗಳು ಬೇರೆಯ ವಿಷಯಗಳಿಗಿಂತ ಹೆಚ್ಚಾಗಿ ಚರ್ಚೆಯ ಸ್ಥಳವಾಗಬೇಕೇ ಹೊರತು ಹಿಂಸಾಚಾರಕ್ಕೆ ಆಸ್ಪದ ನೀಡುವಂತಾಗಬಾರದು…ಇದು ಇತ್ತೀಚೆಗೆ ದೆಹಲಿಯ ರಮ್ಜಾಸ್ ಕಾಲೇಜಿನಲ್ಲಿ ನಡೆದ ಮುಕ್ತ ಭಾಷಣ ಮತ್ತು ರಾಷ್ಟ್ರೀಯವಾದಕ್ಕೆ ಸಂಬಂಧಿಸಿದಂತೆ ಹೊತ್ತಿದ ಹಿಂಸಾಚಾರದ ಕುರಿತಂತೆ ದೇಶದ ಮೊದಲ ಪ್ರಜೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವ್ಯಕ್ತಪಡಿಸಿದ ಅಭಿಪ್ರಾಯ ಇದಾಗಿದೆ.

Advertisement

ಕೇರಳದ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜೆಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್ ನನ್ನು ರಮ್ಜಾಸ್ ಕಾಲೇಜಿಗೆ ಆಹ್ವಾನಿಸಿದ್ದಕ್ಕೆ ದೆಹಲಿ ವಿವಿಯಲ್ಲಿ ನಡೆದ ಗಲಾಟೆ ಕುರಿತಂತೆ ರಾಷ್ಟ್ರಪತಿ ಮುಖರ್ಜಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಮುಕ್ತ ಆಲೋಚನೆ, ಮಾತು ಹಾಗೂ ಅಭಿಪ್ರಾಯ ವ್ಯಕ್ತಪಡಿಸುವುದು ಸಂವಿಧಾನದ ಮೂಲಭೂತ ಹಕ್ಕುಗಳು. ಆದರೆ ದೇಶ ಮತ್ತು ಜನರಿಗೆ ಮೊದಲ ಆದ್ಯತೆ ನೀಡಬೇಕು. ಹಾಗಾಗಿ ದೇಶ ಮತ್ತು ದೇಶಪ್ರೇಮದ ಬಗ್ಗೆ ಪುನರ್ ಚಿಂತಿಸಲು ನಾವು ಇನ್ನಷ್ಟು ಹೆಚ್ಚಿನ ಶ್ರಮವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next