Advertisement

ಜೈಲಿನಲ್ಲಿ ‘ಬಾಂಡ್‌ ರವಿ’ ಮಸ್ತ್ ಸಾಂಗ್‌

04:01 PM Nov 23, 2022 | Team Udayavani |

ನವನಟ ಪ್ರಮೋದ್‌ ನಟಿಸಿರುವ “ಬಾಂಡ್‌ ರವಿ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ವಿ.ನಾಗೇಂದ್ರ ಪ್ರಸಾದ್‌ ಸಾಹಿತ್ಯದಲ್ಲಿ ಅರಳಿರುವ “ಮಜಾ ಮಜಾ ಮಾಡು ಬಾ’ ಹಾಡಿಗೆ ಗಾಯಕ ವಿಜಯ್‌ ಪ್ರಕಾಶ್‌ ದನಿಯಾಗಿದ್ದು, ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ.

Advertisement

ಜೋಶ್‌ ಜೊತೆಗೆ ಒಂದೊಳ್ಳೆ ನೀತಿಪಾಠವಿರುವ ಹಾಡು ಇದಾಗಿದ್ದು, ಜೈಲಿನಲ್ಲಿ ನಡೆಯುವ ಹಾಡಾಗಿದೆ. ಜೈಲಿನಲ್ಲಿರುವ ಅಪರಾಧಿಗಳಿಗೆ ಧೈರ್ಯ ತುಂಬುವ ಈ ಸಾಂಗ್‌ಗೆ ಎಲ್ಲರೊಂದಿಗೆ ನಾಯಕ ಪ್ರಮೋದ್‌ ಹೆಜ್ಜೆ ಹಾಕಿದ್ದಾರೆ.

“ಬಾಂಡ್‌ ರವಿ’ ಆಕ್ಷನ್‌ ಲವ್‌ ಸ್ಟೋರಿ ಸಿನಿಮಾ. ಯುವ ಪ್ರತಿಭೆ ಪ್ರಜ್ವಲ್‌ ಎಸ್‌.ಪಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ನರಸಿಂಹಮೂರ್ತಿ.ವಿ ಲೈಫ್ ಲೈನ್‌ ಫಿಲಂ ಬ್ಯಾನರ್‌ ನಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್‌ ಕಾಶಿ ಹಾಗೂ ಝೆವಿಯರ್‌ ಫ‌ರ್ನಾಂಡಿಸ್‌ ಸಹ ನಿರ್ಮಾಣ ಚಿತ್ರಕ್ಕಿದೆ.

ಚಿತ್ರದಲ್ಲಿ ಕಾಜಲ್‌ ಕುಂದರ್‌ ನಾಯಕಿಯಾಗಿ ನಟಿಸಿದ್ದು, ರವಿಕಾಳೆ, ಧರ್ಮ, ವಿಜಯ್‌ ಚೆಂಡೂರ್‌, ಶೋಭರಾಜ್‌, ಗೋವಿಂದೇ ಗೌಡ. ಹಂಸ, ಮಿಮಿಕ್ರಿ ಗೋಪಿ, ಪವನ್‌, ಕಾಮಿಡಿ ಕಿಲಾಡಿ ಸಂತೋಷ್‌ ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಕೆ.ಎಸ್‌. ಚಂದ್ರಶೇಖರ್‌ ಛಾಯಾಗ್ರಹಣ, ಅರ್ಜುನ್‌ ಕಿಟ್ಟು ಸಂಕಲನ, ಸುನೀಲ್‌ ಮತ್ತು ದೇವ್‌ ಎನ್‌ ರಾಜ್‌ ಸಂಭಾಷಣೆ, ಬಿ. ಧನಂಜಯ ನೃತ್ಯ ನಿರ್ದೇಶನ, ಮನೋಮೂರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next