ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಸಿಎಂಗೆ ನಿಜವಾಗಿ ಕಳಕಳಿ ಇದ್ದರೆ, ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿಸಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಎನ್ನುವುದು ಇಸ್ಲಾಂನಲ್ಲಿ ಸಹಜ ಪ್ರಕ್ರಿಯೆಯಾಗಿದೆ. ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲ ಎನ್ನುವಂತಾಗಿದೆ. ಐಸಿಸ್ ಮಾದರಿಯಲ್ಲಿ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಚಾಕು ಹಾಕಲು ಎಲ್ಲಿಯೋ ತರಬೇತಿ ಪಡೆದಿದ್ದಾನೆ. ಕಾಂಗ್ರೆಸ್ ಬೆಳೆಸಿದ ವಿಷ ಬೀಜವಿದು ಎಂದು ಆರೋಪಿಸಿದರು.
ಕಾಂಗ್ರೆಸ್ ಹುಟ್ಟಿದಾಗ ಬ್ರಿಟೀಷರ ಪರವಿದ್ದರು. ಈಗ ಮುಸ್ಲಿಮರು ಕೊಲೆಗಡುಕರ ಪರ ಇದ್ದಾರೆ. ಕೊಲೆಗಡುಕನ ಮನೆಗೆ ಬುಲ್ಡೋಜರ್ ಹಚ್ಚಿ ಕಿತ್ತು ಬಿಸಾಕಬೇಕು. ಜಮಾತೆ ಇಸ್ಲಾಮಿನವರು ಕೂಡಲೆ ಫತ್ವಾ ಹೊರಡಿಸಿ ಮನೆ ಬಹಿಷ್ಕರಿಸಬೇಕು ಎಂದರು.
ವಕೀಲರು ಅವನ ಪರ ನಿಲ್ಲಬಾರದು. ಲವ್ ಮಾಡಿ ಮತಾಂತರ ಮಾಡಲು ಮುಂದಾಗಿದ್ದ. ಲವ್ ಜಿಹಾದ್ ಯಶಸ್ವಿಯಾಗಲಿಲ್ಲವೆಂದು ಕೊಲೆ ಮಾಡಿದ್ದಾನೆ. ಎಲ್ಲಿಯವರೆಗೆ ಕಾಂಗ್ರೆಸ್ ಇರುತ್ತದೋ ಅಲ್ಲಿಯವರೆಗೆ ಈ ರೀತಿ ಕೊಲೆಗಳಾಗುತ್ತವೆ. ರಾಜ್ಯದಲ್ಲೂ ಯುಪಿ ಮಾದರಿ ಬುಲ್ಡೋಜರ್ ಸಂಸ್ಕೃತಿ ಜಾರಿಯಾದಾಗ ಮಾತ್ರ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ದೊರೆಯಲು ಸಾಧ್ಯ ಎಂದರು.
ಎಬಿವಿಪಿ ಪ್ರತಿಭಟನೆ: ನೇಹಾ ಹಿರೇಮಠ ಕೊಲೆ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ಇಲ್ಲಿನ ಬಿವಿಬಿ ಕಾಲೇಜು ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಗುರುವಾರ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ನೇಹಾ ಕೊಲೆ ಖಂಡಿಸಿ ಎಬಿವಿಪಿಯಿಂದ ಕಾಲೇಜು ಮುಂದೆಯೇ ಶುಕ್ರವಾರ ಬೆಳಿಗ್ಗೆ ಸಾವಿರಾರು ವಿದ್ಯಾರ್ಥಿಗಳು ರಸ್ತೆತಡೆ ಆರಂಭಿಸಿದರು.
ರಸ್ತೆ ತಡೆಯಿಂದ ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕೆಲ ವಾಹನಗಳನ್ನು ಪರ್ಯಾಯ ಮಾರ್ಗವಾಗಿ ಕಳುಹಿಸಲಾಗಿದೆ. ನೇಹಾಳ ಶವವನ್ನು ಬಿವಿಬಿ ಕಾಲೇಜು ಆವರಣಕ್ಕೆ ತರುವಂತೆ ಪ್ರತಿಭಟನಾಕಾರರ ಆಗ್ರಹಿಸುತ್ತಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.