Advertisement
ಬೇನಾಮಿ ಆಸ್ತಿಗೆ ಸಂಬಂಧಿಸಿ ಫೆ. 28ರಂದು ಡಿ.ಸಿ.ಯವರಿಗೆ, ದೂರು, ಮಾ. 2ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಹೆಬ್ರಿ ತಾಲೂಕಿನ ಶಿವಪುರ ಹಾಗೂ ಕೆರೆಬೆಟ್ಟು ಗ್ರಾಮದಲ್ಲಿ 4.15 ಕೋ.ರೂ.ಗಳಿಗೆ 67.94 ಎಕ್ರೆ ಜಾಗವನ್ನು ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದಾರೆ. ಅವರಿಗೆ ಅಷ್ಟು ಆದಾಯ ಇಲ್ಲ. ಬೇನಾಮಿ ಹೆಸರಿನಲ್ಲಿ ಆದಂತಹ ಹಗರಣ ಇದು. ಇದರಲ್ಲಿ ಸಚಿವರ ಕೈವಾಡದ ಸಂಶಯ ಇದೆ. ಈ ಜಾಗ ಮುಂದೆ ಇಂಡಸ್ಟ್ರಿಯಲ್ ಏರಿಯಾ ಆಗುತ್ತದೆ ಎಂದು ಗೊತ್ತಿದ್ದೇ ಖರೀದಿ ಮಾಡಿ¨ªಾರೆ. ಇದು ಖರೀದಿ ಮಾಡಿದ ಎರಡೇ ತಿಂಗಳಲ್ಲಿ ಇಂಡಸ್ಟ್ರಿಯಲ್ ಏರಿಯಾ ಎಂದು ಘೋಷಣೆ ಆಗಿ ಈಗ ಆ ಜಾಗದ ಕಿಮ್ಮತ್ತು ನಾಲ್ಕು ಪಟ್ಟು ಹೆಚ್ಚಿದೆ. ಇದು ಭ್ರಷ್ಟಾಚಾರ. ಇಂತಹ ಬೇನಾಮಿ ಆಸ್ತಿ ಈ ಕ್ಷೇತ್ರದಲ್ಲಿ ಸಾಕಷ್ಟಿವೆ. ಇದರ ವಿರುದ್ಧ ಸಮರ ಆರಂಭಿಸಿದ್ದೇನೆ ಎಂದು ಕಾರ್ಕಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಕೋಟಿ ಚೆನ್ನಯ, ಪರಶುರಾಮ ಥೀಂ ಪಾರ್ಕ್ ಮತ್ತು ಕಾರ್ಕಳ ಉತ್ಸವ ಇದೆಲ್ಲ ಪ್ರವಾಸೋದ್ಯಮ ದೃಷ್ಟಿಯಿಂದ ಉತ್ತಮ ಕಾರ್ಯಗಳು. ಜನರ ಆರ್ಥಿಕ ಮಟ್ಟ ಸುಧಾರಣೆಗೆ ಅನುಕೂಲಕರ. ಇದಕ್ಕೆ ಸಚಿವರಿಗೆ ಅಭಿನಂದನೆ. ಉಳಿದಂತೆ ಅಭಿವೃದ್ಧಿಯಲ್ಲಿ ಹಗರಣಗಳು ನಡೆದಿವೆ. ಇವುಗಳನ್ನೂ ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ. ಹೆಬ್ರಿ ತಾಲೂಕಿನಲ್ಲಿ ಅಭಿವೃದ್ಧಿ ಏನಾಗಿದೆ ಎಂದು ಮುತಾಲಿಕ್ ಪ್ರಶ್ನಿಸಿದರು. ಆಡಿಯೋ ಒಂದರಲ್ಲಿ ಗುತ್ತಿಗೆದಾರನೊಬ್ಬ ಸಚಿವ ಸುನಿಲ್ ಅವರಿಗೆ ಕಮಿಶನ್ ನೀಡಬೇಕು ಎಂದು ಹೇಳಿರುವುದನ್ನು ಕೇಳಿಸಿಕೊಂಡಿದ್ದೇವೆ. ಟೆಂಡರ್ ಬಿಡುಗಡೆ, ಬಿಲ್ ಮಾಡುವಾಗ ಹೀಗೆ ಪ್ರತಿಬಾರಿಯೂ ಕಮಿಶನ್ ನೀಡಬೇಕು. ಒಂದು ತಿಂಗಳಿನಲ್ಲಿ ಕೋಟ್ಯಾಂತರ ರೂ.ಗಳ ಟೆಂಡರ್ ತರಾತುರಿಯಲ್ಲಿ ಆಗಿದೆ. ಇಂಧನ ಇಲಾಖೆ ಭ್ರಷ್ಟವಾಗಿದೆ. ಕೆಪಿಟಿಸಿಎಲ್‌ನಲ್ಲಿ ವರ್ಗ, ಭಡ್ತಿ ಎಲ್ಲವೂ ಭ್ರಷ್ಟವಾಗಿದೆ ಎಂದು ಆರೋಪಿಸಿದರು.
Related Articles
ನಾನು ಗೆಲ್ಲಬೇಕೆಂದು ಬಂದಿದ್ದೇನೆ. ಕಾಂಗ್ರೆಸ್‌ನವರು ಅಭ್ಯರ್ಥಿ ಹಾಕುವುದು ಬಿಡುವುದು ಅವರಿಗೆ ಬಿಟ್ಟದ್ದು. ಮುತಾಲಿಕ್ ಹಿಂದುತ್ವವನ್ನು ಗೆಲ್ಲಿಸುವುದಾದರೆ ಗೆಲ್ಲಿಸಲಿ ಎಂದರು.
ಕಾರ್ಯಕರ್ತರನ್ನು ಮುಟ್ಟಲಿ ನೋಡೋಣ ಎಲ್ಲ ಬೇನಾಮಿಗಳ ಬಗ್ಗೆ ದಾಖಲೆಗಳಿವೆ. ಎಲ್ಲವನ್ನೂ ಬಹಿರಂಗಪಡಿಸುವೆ. ನಮ್ಮ ಕಾರ್ಯಕರ್ತರಿಗೆ ಬೆದರಿಕೆ, ಕೊಲೆ ಪ್ರಕರಣ ಹಾಕಿ¨ªಾರೆ. ಜಾಮೀನು ಹಾಗೂ ತಡೆ ಸಿಕ್ಕಿದೆ. ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಬಂದರೆ ನಾನಿದ್ದೇನೆ ಎಂಬ ಸ್ಪಷ್ಟ ಮಾತು ಹೇಳುತ್ತಿದ್ದೇನೆ. ಚುನಾವಣೆ ಘೋಷಣೆಯಾದ ಬಳಿಕ ಅವರ ಜತೆ ಗುರುತಿಸಿಕೊಂಡವರೆಲ್ಲ ನಮ್ಮ ಜತೆಗೆ ಇರುತ್ತಾರೆ ಎಂದು ಮುತಾಲಿಕ್ ಹೇಳಿದರು.
Advertisement
ದಾವಣಗೆರೆ ಶಾಸಕನ ಸಹಿತ ಹಲವು ಶಾಸಕರ ವಿರುದ್ಧ ಭ್ರಷ್ಟಾಚಾರ ದೂರು ದಾಖಲಿಸಿ 10 ವರ್ಷಗಳಾಗಿವೆ. ಸ್ಪಷ್ಟ ದಾಖಲೆ ನೀಡಿದ್ದರೂ ವಿಳಂಬ ಮಾಡುವುದಾದರೆ ಲೋಕಾಯುಕ್ತ ಕೂಡ ಭ್ರಷ್ಟವೇ ಎಂಬ ಪ್ರಶ್ನೆಯನ್ನು ಅವರ ಬಳಿಯೇ ಕೇಳುವೆ ಎಂದು ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.ನ್ಯಾಯವಾದಿ ಹರೀಶ್ ಅಧಿಕಾರಿ, ಲಕ್ಷ್ಮೀನಾರಾಯಣ ಮಲ್ಯ, ಸುಭಾಶ್ ಹೆಗ್ಡೆ, ದಿವ್ಯಾ, ಗಂಗಾಧರ ಕುಲಕರ್ಣಿ ಉಪಸ್ಥಿತರಿದ್ದರು.