ಉಡುಪಿ : ಕೇಂದ್ರ ಸರಕಾರದ ನರೇಂದ್ರ ಮೋದಿ ಅವರಂತೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಕೊಡಬೇಕು. ಮನೆ ಮನೆಗೆ ತೆರಳಿ ಮತ ಭಿಕ್ಷೆ ಬೇಡುತ್ತೇನೆ. ಬಿಜೆಪಿಯನ್ನೇ ತಿದ್ದಿ ಸರಿ ಮಾಡುತ್ತೇನೆ ವಿನಾ ಕಾಂಗ್ರೆಸ್ ಸೇರುವೆ ಮಾತೇ ಇಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಹೋರಾಟ ಬಿಜೆಪಿ ವಿರುದ್ಧವಲ್ಲ. ಹಿಂದುತ್ವಕ್ಕಾಗಿ, ಅಭಿವೃದ್ಧಿಗಾಗಿ, ಪ್ರಾಮಾಣಿಕ ವ್ಯವಸ್ಥೆ ರೂಪಿಸಲು ನನ್ನ ಹೋರಾಟ ನಿರಂತರ. ಈ ಕಾರಣ ದಿಂದಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.
ಕಾರ್ಯಕರ್ತರಿಗೆ ಶಕ್ತಿ ತುಂಬಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಈ ಬಗ್ಗೆ ಏಳೆಂಟು ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿದ್ದು ಕಾರ್ಕಳ ಕೂಡ ಇದರಲ್ಲಿ ಒಂದು. ಈ ತಿಂಗಳ ಕೊನೆಗೆ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ. ಕಾರ್ಕಳದಲ್ಲಿನ ಓಡಾಟ ಶಾಸಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಕಾರ್ಯಕರ್ತರಿಗೆ ಕೇಸು ಹಾಕೋದು, ಹೆದರಿಸೋದು ಮಾಡು ತ್ತಿದ್ದಾರೆ. ಹಿಂದುತ್ವದ ನೈತಿಕತೆ ಇದ್ದರೆ ಹೆದರಿಸುವ ಆವಶ್ಯಕತೆ ಇರಲಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಮೂರು ಸಾವಿರ ಹಿಂದೂ ಕಾರ್ಯಕರ್ತರ ಮೇಲೆ ಕೇಸು ಇದೆ. ರಾಜ್ಯದಲ್ಲಿ 18 ಹಿಂದೂ ಒಕ್ಕೂಟ ಬಿಜೆಪಿಗೆ ವಿರುದ್ಧವಾಗಿದೆ ಎಂದರು.
ಕಾರ್ಕಳದ ಭ್ರಷ್ಟಾಚಾರದ ದಾಖಲೆ ಇದೆ. ಒಂದೊಂದಾಗಿ ತಿರುಗೇಟು ಕೊಡುತ್ತೇನೆ. ಮುಂದಿನ ದಿನಗಳಲ್ಲಿ ನಾನು ಕೇಸು ಹಾಕುತ್ತೇನೆ. ನಮ್ಮ ಕಾರ್ಯಕರ್ತರಿಗೆ ಭಯಪಡಿಸಿದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ಕಾರ್ಕಳದಲ್ಲಿ ಬೂತ್ ಮಟ್ಟದಲ್ಲಿ ಸಂಘಟನೆ ಕಾರ್ಯ ನಡೆಯುತ್ತಿದೆ. ಲವ್ ಜೆಹಾದ್, ಗೋವು ಕಳ್ಳತನ ಕಾರ್ಕಳದಲ್ಲಿ ಹೆಚ್ಚಿದೆ. ಕಾರ್ಕಳದಲ್ಲಿ ಈಗಾಗಲೆ ಜನರು ಸಕಾರಾತ್ಮಕವಾಗಿ ಸ್ಪಂದಿಸಿ ಸ್ವಾಗತಿಸಿದ್ದಾರೆ.
ಬಾಲಿವುಡ್ ವಿರುದ್ಧ ಗುಡುಗು
ಬಾಲಿವುಡ್ ಸಿನೆಮಾಗಳು ಇಸ್ಲಾಮೀಕರಣ ಹೇರುತ್ತಿದ್ದು, ನಾಸ್ತಿಕವಾದ, ಕಮ್ಯುನಿಸಂನ್ನು ಹೆಚ್ಚು ಪ್ರಚಾರಪಡಿಸುತ್ತಿದೆ. ಬಾಲಿವುಡ್‌ಗೆ ದಾವೂದ್ ಬೆಂಬಲವಾಗಿ¨ªಾನೆ. ಈ ಮೂಲಕ ವ್ಯವಸ್ಥಿತವಾಗಿ ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬಾಲಿವುಡ್ ವಿರುದ್ದ ಮುತಾಲಿಕ್ ಗುಡುಗಿದರು.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ಪ್ರಮುಖ ರಾದ ಗಂಗಾಧರ್ ಕುಲಕರ್ಣಿ, ಆನಂದ್ ಶೆಟ್ಟಿ ಅಡ್ಯಾರು, ಹರೀಶ್ ಅಧಿಕಾರಿ ಉಪಸ್ಥಿತರಿದ್ದರು.