ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಅವರು 1,769 ಕೋ.ರೂ. ಐತಿಹಾಸಿಕ ಅನುದಾನವನ್ನು ತಂದು ಉಡುಪಿಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸಿದ್ದಾರೆ. ಪ್ರಮೋದ್ ಮಧ್ವರಾಜ್ ಅವರ ಈ ಸಾಧನೆಯನ್ನು ಮನೆಮನೆಗೆ ತಲುಪಿಸುವುದೇ ನಮ್ಮ ಗುರಿ ಎಂದು ಉಡುಪಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪಿ. ಅಮೃತ್ ಶೆಣೈ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Advertisement
ಮಲ್ಪೆ-ಪಡುಕರೆ ಸೇತುವೆಗೆ 16.91 ಕೋ.ರೂ, ಬ್ರಹ್ಮಾವರದಲ್ಲಿ ಮಹಾ ಕೃಷಿ ವಿದ್ಯಾಲಯ-4 ಕೋ.ರೂ., ಮೀನುಗಾರರಿಗೆ ಸಂಕಷ್ಟ ಪರಿಹಾರ 2ರಿಂದ 5 ಲ.ರೂ.ಗೆ ಏರಿಕೆ, ಹಿಂದುಳಿದ ವರ್ಗ ಅಭಿವೃದ್ಧಿಗೆ 12.75 ಕೋ.ರೂ., ಅಲ್ಪಸಂಖ್ಯಾಕ ಅಭಿವೃದ್ಧಿಗೆ 9.05 ಕೋ.ರೂ., ಹಿಂದೂ ಧಾರ್ಮಿಕ ಕ್ಷೇತ್ರ ಅಭಿವೃದ್ಧಿಗೆ 3.28 ಕೋ.ರೂ., ಬಡವರ ಸೂರಿಗೆ 24.718 ಕೋ.ರೂ., ಸೊÌàದ್ಯೋಗ, ಕೈಗಾರಿಕೆಗೆ 47.86 ಕೋ.ರೂ. ಆರೋಗ್ಯ ಸೌಲಭ್ಯಕ್ಕೆ 17.07 ಕೋ.ರೂ., ಮೀನುಗಾರಿಕೆಗೆ 284.71 ಕೋ.ರೂ., ರಾಜ್ಯ ಹೆದ್ದಾರಿಗೆ 9 ಕೋ.ರೂ., ಶಾಸಕರ ಪ್ರದೇಶಾಭಿವೃದ್ಧಿ ನಿಧಿ 8 ಕೋ.ರೂ. ಅನುದಾನ ನೀಡಲಾಗಿದೆ ಎಂದರು.
Related Articles
ನರ್ಮ್ ಬಸ್ ಸಂಚಾರಕ್ಕೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಮೃತ್ ಶೆಣೈ ಅವರು, ಖಾಸಗಿ ಬಸ್ ಮಾಲಕರ ನಡೆ ಸರಿಯಾದುದಲ್ಲ. ಖಾಸಗಿ ಮತ್ತು ಸರಕಾರಿ ಬಸ್ ಸೇವೆಗಳು ಹೊಂದಾಣಿಕೆಯಲ್ಲಿ ಮುಂದುವರಿದು ಕೊಂಡು ಹೋಗಬೇಕು. ಸೌಹಾರ್ದದಿಂದ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಮಾತುಕತೆಗೆ ಸ್ಪಂದನ ಸಿಕ್ಕಿಲ್ಲವೆಂದು ಅವರು ಹೇಳುತ್ತಾರೆ. ಆದರೆ ಸಚಿವರೊಂದಿಗೆ ಮನವಿ ಮಾಡಿಕೊಂಡು ಕೂತು ಚರ್ಚಿಸಿದ್ದರೆ ಈ ರೀತಿಯಾಗುತ್ತಿರಲಿಲ್ಲ. ಈಗ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಸಚಿವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅಮೃತ್ ಶೆಣೈ ಹೇಳಿದರು.
Advertisement