ಉಡುಪಿ: ಶಿಕ್ಷಣ ಪೂರೈಸಿದ ಯುವ ಜನತೆ ಕಾಲಹರಣ ಮಾಡದೆ ಉದ್ಯೋಗ, ಉನ್ನತ ಶಿಕ್ಷಣ, ಕೌಶಲಾಭಿವೃದ್ಧಿ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಗರ ವೃತ್ತ ನಿರೀಕ್ಷಕ ಪ್ರಮೋದ್ ಕುಮಾರ್ ಹೇಳಿದರು.
ಕುಂಜಿಬೆಟ್ಟಿ ಎಂ.ಜಿ.ಎಂ. ಕಾಲೇಜಿನಲ್ಲಿ ಹಮ್ಮಿಕೊಂಡ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾವು ನಮ್ಮ ಕುಟುಂಬ, ಸಮಾಜದ ಕುರಿತು ಕಾಳಜಿ ಹೊಂದಿರುವುದರ ಜತೆಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಯುವಜನರು ದುಶ್ಚಟಗಳಿಗೆ ದಾಸರಾಗದೆ, ಉತ್ತಮ ಪ್ರಜೆಗಳಾಗಬೇಕು ಎಂದರು.
ಇದನ್ನೂ ಓದಿ:ಮುಂದಿನ ವರ್ಷ ಲೋಕಾರ್ಪಣೆ: ಡಾ| ಅಶ್ವತ್ಥ ನಾರಾಯಣ್
ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ರಮೇಶ್, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಅಧ್ಯಕ್ಷ ಸೂರಜ್, ಪ್ರ. ಕಾರ್ಯದರ್ಶಿ ರೇಹಾ ಖಾದ್ರಿ ಉಪಸ್ಥಿತರಿದ್ದರು.