ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಅಕ್ಕಿ ಸಂಗ್ರಹ ಕಡಿಮೆ ಆಗಬಹುದೆಂದು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಆತಂಕವಿತ್ತು. ಹಾಗಾಗಿ ಕೊಟ್ಟಿರಲಿಲ್ಲ. ಬಫರ್ ಸ್ಟಾಕ್‌ಗೆ ಹತ್ತಿರ ಇದ್ದೆವು. 2024ರ ಜೂನ್ 13ರಂದ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ನಿಲ್ಲಿಸಿದ್ದೆವು. ಕೇಂದ್ರ ಸರ್ಕಾರ ಕೊಟ್ಟರೆ ಕೊಡುತ್ತೀವಿ ಎನ್ನಬೇಕಿತ್ತು. ಈಗ ಸ್ಟಾಕ್ ಇದೆ. 330ಲಕ್ಷ ಮೆಟ್ರಿಕ್ ಟನ್ ಸಂಗ್ರಹವಿದೆ. ಈಗ ಸಿದ್ದರಾಮಯ್ಯ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಖಾಸಗಿ, ರಾಜ್ಯ ಸರ್ಕಾರಕ್ಕೆ ಆಹ್ವಾನ ಮಾಡಿದ್ದೀವಿ. 34ರಿಂದ 28ರೂ. ಬೆಲೆ ಇಳಿದಿದೆ. ಈಗ ಮಾರಾಟ ಆರಂಭವಾಗಿದೆ. 170ರೂ. ಎಷ್ಟು ಜನರಿಗೆ ಕೊಟ್ಟೀರಿ, ಗೃಹಲಕ್ಷ್ಮೀ, ವೃದ್ಧಾಪ್ಯ ವೇತನ ಕೊಟ್ಟಿಲ್ಲ. ಇಂಧನ ಬೆಲೆ ಏಕೆ ಏರಿಸಿದ್ದೀರಿ? ನಾವು ಒಂದು ರೂ. ಏರಿಸಿದಾಗ ಆರೋಪಿಸಿದರು. ಈಗ 3.30ರೂ. ಏರಿಸಿದ್ದೀರಿ ನಾಚಿಕೆ ಆಗುವುದಿಲ್ಲವೇ ನಿಮಗೆ? ಭಾರತ ಸರ್ಕಾರ ಅಬಕಾರಿ ದರ ಇಳಿಸಿದಾಗ ನೀವು ಏರಿಸುತ್ತಿದ್ದೀರಿ. ಎಲ್ಲ ದರಗಳು ಏರಿಕೆಯಾಗಿವೆ. ಹಾಲು ಹೆಚ್ಚಿಗೆ ಇದೆಯೆಂದು ದರ ಏರಿಸಿ ಮೋಸ ಮಾಡಿದ್ದೀರಿ ಎಂದು ಹರಿಹಾಯ್ದರು.
ರೈತರಿಗೆ ಸಬ್ಸಿಡಿ ಕಡಿಮೆ ಮಾಡಿ ದ್ರೋಹ ಮಾಡುತ್ತಿದ್ದಾರೆ. ಜನರಿಗೆ ಹೊರೆ ಹಾಕಿದ್ದಾರೆ. ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ನಮ್ಮನ್ನ ಅಭಿವೃದ್ಧಿ ಕೆಲಸಕ್ಕೆ ನನ್ನ ಕಾಂಗ್ರೆಸ್ ಶಾಸಕರು ಕೇಳಲು ಬರುತ್ತಿದ್ದಾರೆ. ನೀವು ಅಕ್ಕಿ ತೆಗೆದುಕೊಳ್ಳಿ ಯಾರು ಬೇಡ ಅಂದಿದ್ದಾರೆ. ಭಾರತ ರೈಸ್, ಹಿಟ್ಟು ಬಂದ್ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಈಗಲೂ ಮಾರುಕಟ್ಟೆಯಲ್ಲಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಬೇಕು. ಶಿವಮೊಗ್ಗದಲ್ಲಿ ಬಸ್‌ಗೆ ಡೀಸೆಲ್ ಇಲ್ಲದೆ ರಸ್ತೆಯಲ್ಲೇ ನಿಂತಿದೆ. ಇದು ದರಿದ್ರ ಸರ್ಕಾರ ಆಗಿದೆ ಎಂದರು.
ಅಯೋಧ್ಯೆಯಲ್ಲಿ ಬಿಜೆಪಿ ಸೋತ್ತಿದ್ದು ಬೇರೆ ಕಾರಣ ಇದೆ. ಅಖಿಲೇಶ್ ಯಾದವ್ ಅಂಗಿ ಹಿಡಿದು ಗೆದ್ದಿದ್ದೆ ಕಾಂಗ್ರೆಸ್ ಸಾಧನೆ. ಅದು ಬೇರೆಯವರ ಮೇಲೆ ಅವಲಂಬನೆ, ಅಹಂಕಾರ ಬಿಡಲಿ. ಉತ್ತರ ಪ್ರದೇಶದಲ್ಲಿ ಮುಂದೆ ನಮ್ಮ ಸರ್ಕಾರ ಬರುತ್ತದೆ. ರಾಹುಲ್ ನಾಟಕ ಮಾಡುತ್ತಿದ್ದಾರೆ. ಗುಜರಾತ್ ಚುನಾವಣೆ ದೂರವಿದೆ. ಈಗಲೇ ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.