Advertisement

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

12:32 PM Apr 16, 2024 | Team Udayavani |

ಹುಬ್ಬಳ್ಳಿ: ಎಲ್ಲಾ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಎರಡ್ಮೂರು ಸೀಟ್ ಗೆದ್ದರೆ ಜಾಸ್ತಿ ಅನ್ನುವುದಾಗಿದೆ. ಹೀಗಾಗಿ ಆ ಪಕ್ಷ ಹತಾಶಗೊಂಡು ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ ವೋಟರ್, ಎಬಿಸಿ ಸಮೀಕ್ಷೆಯಲ್ಲಿ ಎರಡ್ಮೂರು ತೋರಿಸಿದೆ. ಯಾರು ಗಲಾಟೆ ಮಾಡುತ್ತಾರೆ. ಧಿಕ್ಕಾರ ಕೂಗುತ್ತಾರೆ ಅವರಿಗೆ ಜನ ತಕ್ಕಪಾಠ ಕಲಿಸುತ್ತಾರೆ ಎಂದರು.

ಎಚ್.ಡಿ. ದೇವೇಗೌಡರು ಅತ್ಯಂತ ಹಿರಿಯ ಜೀವಿ. ಅವರು ಕರ್ನಾಟಕದ ಏಕೈಕ ಪ್ರಧಾನಿ. ಅವರನ್ನು ತುಚ್ಛ ಭಾಷೆಯಲ್ಲಿ ಮಾತಾಡುತ್ತಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ ಎಂದರು.

ಎಚ್.ಡಿ. ಕುಮಾರಸ್ವಾಮಿ ಅವರು 1000 ಎಕರೆ ಆಸ್ತಿ ಮಾಡಿದ್ದರೆ ಅವರೊಂದಿಗೆ ಏಕೆ ಸರ್ಕಾರ ಮಾಡಿದ್ದರು. ಅವರ ಮನೆಯಲ್ಲಿ ಕುಳಿತಿದ್ದರು ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದರು.

ಕರ್ನಾಟಕದಲ್ಲಿ ಬಹಳ ಗೊಂದಲವಿದೆ. ಈ ಕಾರಣದಿಂದ ಸರ್ಕಾರದ ಆಡಳಿತ ಯಂತ್ರ ಕುಸಿದಿದೆ. ಮುಂದೆ ಯಾವ ಹಂತಕ್ಕಾದರೂ ಹೋಗಬಹುದು ಎಂದು ಡಿಕೆಶಿ ಇಂಡಿಕೇಶನ್ ಕೊಡುತ್ತಿದ್ದಾರೆ. ಈ ಸರ್ಕಾರ ಐದು ವರ್ಷ ಇರಬೇಕು. ಆದರೆ ಇವರ ಬಡಿದಾಟದಿಂದ ಏನಾದರೂ ಆಗಬಹುದು ‌ಎಂದರು.

Advertisement

ನಿನ್ನೆ ನಾಮಪತ್ರ ಸಲ್ಲಿಸಿದ್ದೇನೆ. ನಿರೀಕ್ಷೆಗೆ ಮೀರಿ ಜನ ಸೇರಿದ್ದರು. ಆದರೆ ಕಾಂಗ್ರೆಸ್ ಮಾತು ಕೇಳಿ‌ ಅಧಿಕಾರಿಗಳು ಕೆಲ ಕಡೆ ನಮ್ಮ ಪಕ್ಷದ ಕಾರ್ಯಕರ್ತರ ವಾಹನ ತಡೆದಿದ್ದಾರೆ. ಕೂಡಲೇ ನಾನು ಅವರ ಗಮನಕ್ಕೆ ತಂದಾಗ ಹಿರಿಯ ಅಧಿಕಾರಿಗಳು ಅದನ್ನು ಸರಿಪಡಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next