Advertisement

ಹಾದನೂರು ಗ್ರಾಮ ಮಾದರಿ ಮಾಡಲು ಪಣತೊಟ್ಟಿರುವ ಪ್ರಕಾಶ್‌

06:14 PM Jan 02, 2021 | Team Udayavani |

ಎಚ್‌.ಡಿ.ಕೋಟೆ: ಕಳೆದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ನನಗೆಗೆಲುವಿನ ಶ್ರೀರಕ್ಷೆ. ರಸ್ತೆ, ಶುದ್ಧ ಕುಡಿವ ನೀರು, ವಿದ್ಯುತ್‌ಪೂರೈಕೆ, ಗ್ರಾಮ ನೈರ್ಮಲ್ಯ, ಅರ್ಹ ಫ‌ಲಾನುಭವಿಗಳಿಗೆಪಿಂಚಣಿ ಸೇರಿದಂತೆ ಮತ್ತಿತರ ಸವಲತ್ತು ಕಲ್ಪಿಸಿರುವ ತೃಪ್ತಿ ಇದೆ. ಈ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೈಗೊಂಡು ನಮ್ಮೂರನ್ನು ಮಾದರಿಗ್ರಾಮ ವನ್ನಾಗಿಸುವ ಗುರಿಹೊಂದಿದ್ದೇನೆ.ಇದು ಸರಗೂರುತಾಲೂಕಿನ ಗಡಿಭಾಗದ ಹಾದನೂರು ಗ್ರಾಮ ಪಂಚಾಯ್ತಿ ಸದಸ್ಯರಾಗಿ 2 ಬಾರಿ ಆಯ್ಕೆ ಯಾದ ಹಾದನೂರು ಮಹೇಶ್‌ ಅವರ ಮನದಾ ಳದ ಮಾತು. ತಮ್ಮ ಕಾರ್ಯ ವೈಖರಿ ಕುರಿತು ಉದಯವಾಣಿ ಜೊತೆ ತಮ್ಮ ಅಭಿಪ್ರಾಯ ಹಂಚಿ ಕೊಂಡಿದ್ದಾರೆ

Advertisement

ಅವಧಿಯಲ್ಲಿ ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು? :

ಗ್ರಾಮದಲ್ಲಿ ಬಹುಸಂಖ್ಯೆಯಲ್ಲಿ ನಿವೇಶನ ರಹಿತರಿದ್ದಾರೆ. ಒಂದೊಂದು ಮನೆಯಲ್ಲಿ 3-4 ಕುಟುಂಬಗಳು ವಾಸಿಸುತ್ತಿವೆ. ಇವರಿಗೆ ನಿವೇಶನಕಲ್ಪಿಸಬೇಕಿದೆ. ನಿವೇಶನ ಹೊಂದಿರುವ ಬಡವರಿಗೆ ಸ್ವಂತ ಸೂರು ನಿರ್ಮಿಸಲು ವಸತಿ ಯೋಜನೆಯಡಿ ಆಯ್ಕೆ ಮಾಡಲಾಗುವುದು. ನೀರುಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗುವುದು. ಶಾಸಕರು ಹಾಗೂ ಸಂಸದರ ಸಹಕಾರದೊಂದಿಗೆ ಅವರ ಅನುದಾನದಲ್ಲಿ ನನೆಗುದ್ದಿಗೆ ಬಿದ್ದಿರುವ ಭವನದ ಕಾಮಗಾರಿ ಪೂರ್ಣಗೊಳಿಸಲಾಗುವುದು. ವೃದ್ಧರಿಗೆ ಪಿಂಚಣಿ ಮಂಜೂರಾತಿ ಮಾಡಿಸಿಕೊಡಲಾಗುವುದು. ಸರ್ವ ಸದಸ್ಯರ ವಿಶ್ವಾಸ ಪಡೆದು ಅಪೂರ್ಣಗೊಂಡಿರುವ ಗ್ರಾಪಂ ಕಟ್ಟಡವನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದೇನೆ.

ಸತತ ಎರಡು ಬಾರಿ ಗೆಲುವು ಸಾಧಿಸಲು ಕಾರಣ ಏನು? :

ಕಳೆದ ಅವಧಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ. ಶಾಸಕ ಅನಿಲ್‌ ಚಿಕ್ಕಮಾದು ಹಾಗೂ ಆಗಿನ ಸಂಸದರಾಗಿದ್ದ ಆರ್‌.ಧ್ರುವನಾರಾಯಣ ಸಹಕಾರದೊಂದಿಗೆ 2 ಕೋಟಿ ರೂ.ಗೂಅಧಿಕ ವೆಚ್ಚದಲ್ಲಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಪಡಿಸ ಲಾಗಿದೆ.ಜಮೀನುಗಳ ಓಣಿ ರಸ್ತೆ ಅಭಿವೃದ್ಧಿ, ಶುದ್ಧ ನೀರಿನ ಘಟಕ ಸ್ಥಾಪನೆ,ವಿದ್ಯುತ್‌ ಲೈನ್‌ ನವೀಕರಣ, ಭಾಗ್ಯಜ್ಯೋತಿ ಯೋಜನೆ, ಬಯಲು ಶೌಚ ಮುಕ್ತಗೊಳಿಸಲು ಪ್ರತಿ ಮನೆಗಳಿಗೆ ಶೌಚಾಲಯ ನಿರ್ಮಾಣಸೇರಿದಂತೆ ಇನ್ನಿತರ ಸರ್ಕಾರಿ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸಿದ್ದೇನೆ. ಹೀಗಾಗಿ ಜನರು ಮತ್ತೆ ನನ್ನ ಕೈಹಿಡಿದಿದ್ದಾರೆ.

Advertisement

 ಕಾಡಂಚಿನ ಗಡಿಭಾಗದ ಗ್ರಾಮ ಇದಾಗಿದ್ದು, ಇಲ್ಲಿ ಕುಡಿವ ನೀರಿನ ಸ್ಥಿತಿ ಹೇಗಿದೆ? :

 ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ವಿಶ್ವಾಸದಿಂದ 2 ಹ್ಯಾಂಡ್‌ಪಂಪ್‌ ನಿರ್ಮಿಸಲಾಗಿದೆ. 5 ಲಕ್ಷ ರೂ. ಅಂದಾಜು ವೆಚ್ಚದ ಪೈಪ್‌ಲೈನ್‌ ಅಳವಡಿಸಿದ ಬಳಿಕ ಗ್ರಾಮದಲ್ಲಿ ನೀರಿನ ಸಮಸ್ಯೆ ಪರಿಹಾರವಾಗಿದೆ. ಈ ಭಾಗದಲ್ಲಿ ಮತ್ತಷ್ಟು ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವೆ.

ಕಳೆದ ಸಾಲಿನ ಆಯ್ಕೆಗೂ ಬಾರಿಯ ಆಯ್ಕೆಗೂ ವ್ಯತ್ಯಾಸ ಏನು?:

ಕಳೆದ ಬಾರಿ 237 ಮತ ಪಡೆದು 37 ಮತಗಳ ಅಂತರದಿಂದ ಗೆದ್ದಿದ್ದೆ. ಈ ಬಾರಿ 304 ಮತಗಳಿಸಿ 124ಮತಗಳ ಅಂತರದಿಂದ ಗೆಲುವುಸಾಧಿಸಿದ್ದೇನೆ. ಜನರ ಕಷ್ಟಸುಖಗಳಿಗೆಸ್ಪಂದಿಸಿದ್ದಕ್ಕೆ ಗೆಲುವಿನ ಅಂತರ ಹೆಚ್ಚಾಗಿದೆ.

ನಿಮ್ಮ ಗೆಲುವಿಗೆ ಕಾರಣರಾದ ಮತದಾರರಿಗೆ ಏನು ಹೇಳುತ್ತೀರಿ? : 

ಸತತ ಎರಡು ಬಾರಿ ಕೈಹಿಡಿದಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಗೆಲುವಿಗೆ ಸಹಕರಿಸಿದ ಶಾಸಕ ಅನಿಲ್‌ಚಿಕ್ಕಮಾದು ಹಾಗೂ ಮಾಜಿ ಸಂಸದ ಆರ್‌.ಧ್ರುವನಾರಾಯಣ್‌ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕಾರ್ಯನಿರ್ವ ಹಿಸುತ್ತೇನೆ. ಗ್ರಾಪಂನಲ್ಲಿ ಯಾವುದೇ ಸಮಸ್ಯೆಯಿದ್ದರೂ ತಮ್ಮನ್ನು ನೇರವಾಗಿ ಭೇಟಿ ಮಾಡಬಹುದು. ತ್ವರಿತವಾಗಿ ಸಮಸ್ಯೆ ಇತ್ಯರ್ಥಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.

 

-ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next