Advertisement
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಪ್ರಕಾಶ್ ರೈ ಅವರು, “ಧರ್ಮ, ಸಂಸ್ಕೃತಿ ಹಾಗೂ ನೈತಿಕತೆಯ ಹೆಸರು ಹೇಳಿಕೊಂಡು ಯುವ ಜೋಡಿಗಳ ಮೇಲೆ ಹಲ್ಲೆ ನಡೆಸುವುದು, ಗೋಹತ್ಯೆ ನೆಪದಲ್ಲಿ ಹಲ್ಲೆ ನಡೆಸಿ ಕಾನೂನು ಕೈಗೆತ್ತಿಕೊಳ್ಳುವುದು ಭಯೋತ್ಪಾದನೆಯೇ ಅಲ್ಲವೇ? ಪ್ರತಿರೋಧ ವ್ಯಕ್ತಪಡಿಸಿದರೆ ಅವರನ್ನೇ ಬೆದರಿಸುವುದು, ಟ್ರೋಲ್ ಮಾಡುವುದು… ಭಯೋತ್ಪಾದನೆ ಅಲ್ಲ ಎಂದಾದರೆ, ಭಯೋತ್ಪಾದನೆ ಎಂದರೆ ಮತ್ತೇನು’ ಎಂದು ಪ್ರಶ್ನಿಸಿದ್ದಾರೆ.
ಬಲಪಂಥೀಯರಲ್ಲೂ ಭಯೋತ್ಪಾದಕರಿದ್ದಾರೆ. ಹಿಂದೂ ಬಲಪಂಥೀಯ ಸಂಘಟನೆಗಳಲ್ಲಿ ಭಯೋತ್ಪಾದಕರು ಇಲ್ಲ ಎಂದು ಇನ್ನು ವಾದಿಸುವಂತಿಲ್ಲ’ ಎಂದು ಪತ್ರಿಕೆಯೊಂದಕ್ಕೆ ಲೇಖನ ಬರೆದು ತೀವ್ರ ಟೀಕೆಗೆ ಗುರಿಯಾಗಿರುವ ನಟ ಕಮಲ್ ಹಾಸನ್ ವಿರುದ್ಧ ವಾರಾಣಸಿ ಯಲ್ಲಿ ಪ್ರಕರಣ ದಾಖಲಾಗಿದೆ. ಮಾನನಷ್ಟ ಮೊಕದ್ದಮೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಧರ್ಮಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಿಂದೂ ಸಂಘಟನೆಗಳ ಲ್ಲಿಯೂ ಉಗ್ರವಾದ ನುಸುಳಿಬಿಟ್ಟಿದೆ ಎಂದು ಹಾಸನ್ ಹೇಳಿದ್ದು, ಸಹಜವಾಗಿ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಶನಿವಾರ ನಡೆವ ಸಾಧ್ಯತೆಯಿದೆ.