Advertisement

ಹುಟ್ಟೂರು ಪಡುಕೋಣೆಯಲ್ಲಿ ಬ್ಯಾಡ್ಮಿಂಟನ್‌ ದಿಗ್ಗಜ

11:17 PM Nov 19, 2021 | Team Udayavani |

ಕುಂದಾಪುರ: ವಿಶ್ವಶ್ರೇಷ್ಠ ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆ ಶುಕ್ರವಾರ ಹುಟ್ಟೂರಾದ ಪಡುಕೋಣೆಗೆ ಆಗಮಿಸಿ ಕೆಲಕಾಲ ಕಳೆದರು.

Advertisement

ಗುರುವಾರವಷ್ಟೇ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌ನ ಪ್ರತಿಷ್ಠಿತ ಜೀವಮಾನ ಸಾಧನೆಗೆ ನೀಡುವ ಪ್ರಶಸ್ತಿ ಪುರಸ್ಕೃತರಾಗಿದ್ದ ಪ್ರಕಾಶ್‌ ಪಡುಕೋಣೆ, ಈ ಸಂದರ್ಭವೇ ಹುಟ್ಟೂರಿಗೆ ಆಗಮಿಸಿರುವುದು ವಿಶೇಷ.

ಪಡುಕೋಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಪ್ರಕಾಶ್‌ ಪಡುಕೋಣೆ ಅವರಿಗೆ ಶಾಲೆಯ ವತಿಯಿಂದ ಆತ್ಮೀಯ ಸ್ವಾಗತ ನೀಡಲಾಯಿತು. ಕೆಲಹೊತ್ತು ವಿದ್ಯಾರ್ಥಿಗಳೊಂದಿಗೆ ಕಾಲ ಕಳೆದು ಪ್ರೋತ್ಸಾಹದ ಮಾತುಗಳನ್ನಾಡಿದರು. ವಿದ್ಯಾರ್ಥಿಗಳು ಕ್ರೀಡೆ ಸಹಿತ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರತ್ತ ಹೆಚ್ಚಿನ ಗಮನಕೊಡಬೇಕು ಎಂದು ಹುರಿದುಂಬಿಸಿದರು.

ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಕಾಶ್‌ ಪಡುಕೋಣೆ, ಪತ್ನಿ ಉಜ್ವಲಾ ಪ್ರಕಾಶ್‌ ಪಡುಕೋಣೆ ಅವರನ್ನು ಅಭಿನಂದಿಸಲಾಯಿತು. ನಾಗರಾಜ ಬಿ. ಪಡುಕೋಣೆ ಮತ್ತು ಪ್ರವೀಣ ಪಡುಕೋಣೆ ಪ್ರಕಾಶ್‌ ಪಡುಕೋಣೆಯವರನ್ನು ಬರಮಾಡಿಕೊಂಡರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಅಭಿನಂದನಾ ಮಾತುಗಳನ್ನಾಡಿದರು.

ಇದನ್ನೂ ಓದಿ:ಟೀಮ್‌ ಇಂಡಿಯಾ ಸರಣಿ ಜಯಭೇರಿ

Advertisement

ಮಕ್ಕಳಿಗೆ ಸಂಭ್ರಮ
ವಿಶ್ವ ಶ್ರೇಷ್ಠ ಬ್ಯಾಡ್ಮಿಂಟನ್‌ ತಾರೆ ಪ್ರಕಾಶ್‌ ಪಡುಕೋಣೆ ಅವರು ತಮ್ಮ ಶಾಲೆಗೆ ಭೇಟಿ ನೀಡಿರುವುದನ್ನು ಕಂಡು ಮಕ್ಕಳು ಅತೀವ ಸಂಭ್ರಮಪಟ್ಟರು. ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಬಳಿಕ ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಅವರ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಪ್ರಕಾಶ್‌ ಪಡುಕೋಣೆಯವರಿಗೆ “ಜನಾಧಿಕಾರ’ ಪುಸ್ತಕವನ್ನು ಹಸ್ತಾಂತರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸರೀಟಾ ಪಾಯಸ್‌, ಶಿಕ್ಷಕ ವೃಂದ, ಊರಿನ ಪ್ರಮುಖರು ಉಪಸ್ಥಿತರಿದ್ದರು. ಪ್ರಕಾಶ್‌ ಪಡುಕೋಣೆ ಅವರೊಂದಿಗೆ ಸ್ನೇಹಿತರಾದ ಶಿರಿಸ್‌ ಗುಜ್ಜಾರ್‌ ದಂಪತಿ ಸಹ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next