Advertisement

ರೈತರ ಪ್ರತಿಭಟನೆಯ ಕಾವು ಹೆಚ್ಚಿಸಲು ಕೆನಡಾ ಕುಮ್ಮಕ್ಕು ನೀಡುತ್ತಿದೆ : ಪ್ರಕಾಶ್ ಬೆಳವಾಡಿ

12:01 AM Jan 11, 2021 | Team Udayavani |

ಮೈಸೂರು: ಕೇಂದ್ರ ಸರ್ಕಾರವು ಕೃಷಿ ಉತ್ಪನ್ನಗಳ ಆಮದಿನ ಮೇಲೆ ಕೆಲವೊಂದು ನಿರ್ಬಂಧವನ್ನು ಹೇರಿದೆ. ಹಾಗಾಗಿ ಕೆನಾಡಿದಿಂದ ಭಾರತಕ್ಕೆ ಆಮದಾಗುತ್ತಿದ್ದ ದ್ವಿದಳ ಧಾನ್ಯಗಳ ಪ್ರಮಾಣ ಕಡಿಮೆಯಾಗಿದೆ. ಈ ಕಾರಣದಿಂದ ಕೇಂದ್ರದ ಕೃಷಿ ಕಾಯ್ದೆಯ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಕಾವು ಹೆಚ್ಚಿಸಲು ಕೆನಡಾ ಕುಮ್ಮಕ್ಕು ನೀಡುತ್ತಿದೆ ಎಂದು ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ದೂರಿದರು.

Advertisement

ಮಂಥನ’ವತಿಯಿಂದ ಭಾನುವಾರ ‘ಸತ್ಯ, ಸಂಖ್ಯೆ ಮತ್ತು ಗಣತಂತ್ರ’ವಿಷಯದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ಪನ್ನಗಳ ಮೇಲಿನ ನಿರ್ಬಂಧದಿಂದ ಕೆನಡಾದಿಂದ ಆಮದಾಗುತ್ತಿದ್ದ ಶೇ.80 ರಷ್ಟು ಕಡಿಮೆಯಾಗಿದೆ. ಈ ಪ್ರಕ್ರಿಯೆ ಸಹಜವಾಗಿ ಕೋಪತರಿಸಿದೆ, ಕೆನಡಾ ಪ್ರಧಾನಿಯೂ ರೈತರ ಪ್ರತಿಭಟನೆ ಬಗ್ಗೆ ಮಾತನಾಡಲು ಇದೇ ಕಾರಣ ಎಂದರು.

ದ್ವಿದಳ ಧಾನ್ಯದಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದರೂ,ರಫ್ತಿನಲ್ಲಿ ಕೆನಡಾ ಮುಂಚೂಣಿಯಲ್ಲಿದೆ. ಈಗ ಆಮದಿನ ಪ್ರಮಾಣ ಏಕಾ-ಏಕಿ ಕುಸಿದಿರುವುದು, ಸರ್ಕಾರಕ್ಕೆ ಕೋಪತರಿಸಿದೆ ಎಂದು ಹೇಳಿದರು.

ಇದನ್ನೂ ಓದಿ : ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ನಂತರ ಪ್ರಾಥಮಿಕ ಶಿಕ್ಷಣದ ಅವಧಿ 15 ವರ್ಷ: ಡಿಸಿಎಂ

ಆತ್ಮಹತ್ಯೆ ಏಕೆ?:

Advertisement

ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಭಾರತಕ್ಕೆ ಆಹಾರ ಬೇಡಿಕೆ ಎಂದೂ ಕಡಿಯಾಗುವುದಿಲ್ಲ. ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆ ಇದ್ದೇ ಇರುತ್ತದೆ. ಪೂರೈಕೆಗಿಂತಲೂ ಹೆಚ್ಚಿನ ಬೇಡಿಕೆ ಇದೆ. ಪರಿಸ್ಥಿತಿ ಹೀಗಿರುವಾಗ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಏಕೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೃಷಿ ಕಾಯ್ದೆಗಳನ್ನು ವಿರೋಧಿಸುವ ಮುನ್ನ ಈ ದೇಶದ ಕೃಷಿ ವ್ಯವಸ್ಥೆ, ಕೃಷಿಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ತಿಳಿದುಕೊಳ್ಳಬೇಕು. ದೊಡ್ಡ ಉತ್ಪಾದಕರು, ಏಜೆಂಟರುಗಳು ಮತ್ತು ಎಲ್ಲ ಪಕ್ಷಗಳ ರಾಜಕಾರಣಿಗಳ ನಡುವೆ ಒಂದು ಜಾಲ ಬೆಸೆದುಕೊಂಡಿದೆ. ಅವರೇ ಎಲ್ಲವನ್ನೂ ನಿಯಂತ್ರಿಸುತ್ತಾರೆ. ಸರ್ಕಾರ ರೈತರಿಗೆ ಉತ್ತಮ ಮಾರುಕಟ್ಟೆ ನೀಡಿದರೂ ಅದನ್ನು ರೈತರಿಗೆ ತಲುಪಲು ಬಿಡದೇ ಏಜೆಂಟರು ಭಯ ಹುಟ್ಟಿಸುತ್ತಿದ್ದಾರೆ. ಈಗ ಸರ್ಕಾರ ಉಮ್ಮಮ ಬೆಲೆ ನೀಡಿದೆ, ಇದರ ಎರಡರಷ್ಟನ್ನು ನಮ್ಮಿಂದಲೇ ಕಸಿಯುತ್ತದೆ ಎಂದು ಹೆದರಿಸಿ, ಅವರು ಸೌಲಭ್ಯವನ್ನೇ ಪಡೆದುಕೊಳ್ಳಬಾರದು ಎನ್ನುವಂತೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಅಂಕಿ-ಅಂಶಗಳ ಮಾಹಿತಿ ನೀಡದೇ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next