ಚಿಕ್ಕಬಳ್ಳಾಪುರ: ‘ಎಸ್‌ಐಟಿ ಮುಂದೆ ಶುಕ್ರವಾರ ಹಾಜರಾಗುತ್ತೇನೆಂದು ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಮಾಡಿರುವುದು ನಮಗೆ ಸ್ವಲ್ಪ ಸಮಾಧಾನ ತಂದಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಆಗ್ನೇಯ ಶಿಕ್ಷಕರ ಚುನಾವಣ ಪ್ರಚಾರದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಹಾಗೂ ನಾನು ಈ ಪ್ರಕರಣಕ್ಕೆ ಸಂಬಂದಿಸಿದ್ದಂತೆ ಎಲ್ಲಿಯೆ ಇದ್ದರೂ ಬಂದು ಎಸ್‌ಐಟಿ ಮುಂದೆ ಹಾಜರಾಗಿ ತನಿಖೆಗೆ ಸಹಕಾರ ಕೊಡುವಂತೆ ಎಚ್ಚರಿಕೆ ಕೊಟ್ಟಿದ್ದರು. ನಾನು ಮನವಿ ಮಾಡಿದ್ದೆ ಎಂದರು.
ಜತೆಗೆ ಪಕ್ಷದ ಕಾರ್ಯಕರ್ತರಿಗೆ ಗೌರವ ಇದ್ದರೆ ತತ್ ಕ್ಷಣ ಬರುವಂತೆ ಹೇಳಿದ್ದವು. ಅದಕ್ಕೆ ಓಗೋಟ್ಟು ಬರುತ್ತಿರುವುದಕ್ಕೆ ನಮಗೆ ಸ್ಪಲ್ಪ ಸಮಾಧಾನವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಏನು ಪ್ರಕ್ರಿಯೆಗಳು ಆಗಬೇಕು ಅದು ಆಗುತ್ತದೆ ಎಂದರು.
ನನ್ನ ವಿರುದ್ದ ಷಡ್ಯಂತ್ರ ಮಾಡಲಾಗಿದೆ ತನಿಖೆಯಿಂದಲೇ ನಾನು ಹೊರಗೆ ಬರುತ್ತೇನೆಂದು ಪ್ರಜ್ವಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ”ತನಿಖೆಯಲ್ಲಿ ಆ ಎಲ್ಲಾ ಸತ್ಯಾಂಶಗಳು ಹೊರಗೆ ಬರಬೇಕು, ಯಾರು ಯಾರ ಪಾತ್ರಗಳು ಇವೆ ಅವೆಲ್ಲಾ ಹೊರಗೆ ಬರಬೇಕು, ಎಸ್‌ಐಟಿ ತನಿಖೆಯನ್ನು ಮಾಡುತ್ತಿರುವರು ಅದನ್ನು ಎಲ್ಲಿಗೆ ತಂದು ನಿಲ್ಲಿಸುತ್ತಾರೆ ಕಾದು ನೋಡೋಣ ಎಂದರು.
ಕ್ಷೇಮೆ ಕೋರಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ”ಅವನು ನನಗೆ ಕ್ಷೇಮೆ ಕೋರುವುದಲ್ಲ. ಕಾರ್ಯಕರ್ತರ ನೋವಿಗೆ ಸ್ಪಂದಿಸುವಂತೆ ಹೇಳಿದ್ದೆ. ಈಗಲಾದರೂ ಕ್ಷೇಮೆ ಕೋರಿ ಕಾರ್ಯಕರ್ತರ ಬಗ್ಗೆ ಮಮತೆ ಇರುವುದನ್ನು ತೋರಿಸಿಕೊಂಡಿದ್ದಾನೆ. ಅದು ನನಗೆ ಸಮಾಧಾನ ತಂದಿದೆ”ಎಂದರು.