ಬೆಂಗಳೂರು: ಪ್ರಜ್ವಲ್ ರೇವಣ್ಣ ಬಂಧನಕ್ಕೆ ಬಲೆ ಬೀಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ವು ಈ ಸಂಬಂಧ ಶೀಘ್ರ ಯೂರೋಪ್‌ನ ಹಂಗೇರಿಗೆ ಹಾರುವ ಸಾಧ್ಯತೆಗಳಿವೆ.
ಎಸ್‌ಐಟಿ ತಂಡವು ಪ್ರಜ್ವಲ್ ಯಾವ ದೇಶದಲ್ಲಿದ್ದಾರೆ ಎಂಬ ಬಗ್ಗೆ ಹುಡುಕಾಟ ನಡೆದಿದೆ. ಪ್ರಜ್ವಲ್ ಸದ್ಯ ಭಾರತಕ್ಕೆ ಮರಳುವುದು ಅನುಮಾನ ಎಂಬ ವಿಚಾರ ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ಎಸ್‌ಐಟಿ ತಂಡದ ಸದಸ್ಯರು ಹಂಗೇರಿಗೆ ತೆರಳುವ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ಪ್ರಜ್ವಲ್ ಓಡಾಡಿರುವ ದೇಶಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಜ್ವಲ್ ಜರ್ಮನಿಯಿಂದ ವಿಮಾನದ ಬದಲು ರಸ್ತೆ ಮಾರ್ಗದಲ್ಲೇ ಪ್ರಯಾಣಿಸಿರುವ ಅನುಮಾನ ವ್ಯಕ್ತವಾಗಿದೆ. ಆದರೆ ನಿಖರವಾಗಿ ಎಲ್ಲಿದ್ದಾರೆ ಎಂಬ ಬಗ್ಗೆ ಇನ್ನೂ ಎಸ್‌ಐಟಿಗೆ ಸುಳಿವು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಇದು ಸೂಕ್ಷ್ಮ ಪ್ರಕರಣವಾದ ಹಿನ್ನೆಲೆಯಲ್ಲಿ ತನಿಖೆ ಬಗ್ಗೆ ತನಿಖಾ ತಂಡದಿಂದ ಮಾಹಿತಿ ಸೋರಿಕೆ ಆಗದಂತೆ ಎಚ್ಚರಿಕೆ ವಹಿಸಲು ಎಸ್‌ಐಟಿ ತಂಡದ ಮುಖ್ಯಸ್ಥ ಬಿ.ಕೆ. ಸಿಂಗ್ ತನಿಖಾಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಜ್ವಲ್ ವಿರುದ್ಧ ಸದ್ಯದಲ್ಲೇ ರೆಡ್ ಕಾರ್ನರ್ ನೋಟಿಸ್ ನೀಡುವ ಸಾಧ್ಯತೆಗಳು ಕಂಡುಬಂದಿವೆ.
ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡದಂತೆ ಮೋದಿಯನ್ನು ತಡೆಯುತ್ತಿರುವುದು ಯಾವ ಶಕ್ತಿ? ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಯಂತೆ ಪ್ರಜ್ವಲ್ ದೇಶ ಬಿಟ್ಟು ಪರಾರಿ ಯಾಗಲು ಹೇಗೆ, ಯಾಕೆ ಅವಕಾಶ ಮಾಡಿಕೊಡಲಾಯಿತು?
-ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ