Advertisement

ಆ್ಯಕ್ಷನ್‌ ಪ್ಯಾಕ್‌ನಲ್ಲಿ ‘ಅರ್ಜುನ್‌ ಗೌಡ’: ಏ. 10ರಂದು ಚಿತ್ರದ ಟ್ರೇಲರ್‌ ಬಿಡುಗಡೆ

03:24 PM Apr 03, 2021 | Team Udayavani |

“ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರದ ನಂತರ ನಟ ಪ್ರಜ್ವಲ್‌ ದೇವರಾಜ್‌ ಅಭಿನಯದ ಮತ್ತೂಂದು ಚಿತ್ರ “ಅರ್ಜುನ್‌ ಗೌಡ’ ತೆರೆಗೆ ಬರಲು ರೆಡಿಯಾಗಿದೆ. ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಖ್ಯಾತಿಯ ರಾಮು ನಿರ್ಮಾಣದಲ್ಲಿ ಮೂಡಿ ಬಂದಿರುವ “ಅರ್ಜುನ್‌ ಗೌಡ’ ಚಿತ್ರಕ್ಕೆ ಲಕ್ಕಿ ಶಂಕರ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Advertisement

ಈಗಾಗಲೇ ಸೆನ್ಸಾರ್‌ನಿಂದ “ಯು/ಎ’ ಪ್ರಮಾಣ ಪತ್ರದೊಂದಿಗೆ, ಬಿಡುಗಡೆಗೆ ಗ್ರೀನ್‌ ಸಿಗ್ನಲ್‌ ಪಡೆದುಕೊಂಡಿರುವ “ಅರ್ಜುನ್‌ ಗೌಡ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸದಲ್ಲಿ ನಿರತವಾಗಿದೆ. ಇದೇ ವೇಳೆ ಚಿತ್ರದ ಪ್ರಚಾರ ಭಾಗವಾಗಿ, ಇದೇ ಏ. 10ರಂದು “ಅರ್ಜುನ್‌ ಗೌಡ’ ಟ್ರೇಲರ್‌ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

ಏ. 10 ರಂದು “ಅರ್ಜುನ್‌ ಗೌಡ’ ಚಿತ್ರದ ಮೊದಲ ಟ್ರೇಲರ್‌ “ಆನಂದ್‌ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ ಮೂಲಕ ಬಿಡುಗಡೆಯಾಗಲಿದೆ. “ಅರ್ಜುನ್‌ ಗೌಡ’ ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ರಾಮು, “ಸಿನಿಮಾದ ಟೈಟಲ್ಲೇ ಹೇಳುವಂತೆ ಇದೊಂದು ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾ. ಆ್ಯಕ್ಷನ್‌, ಲವ್‌, ಸೆಂಟಿಮೆಂಟ್‌, ಕಾಮಿಡಿ ಎಲ್ಲವೂ ಈ ಸಿನಿಮಾದಲ್ಲಿದೆ. ಇಲ್ಲಿಯವರೆಗೆ ಪ್ರಜ್ವಲ್‌ ದೇವರಾಜ್‌ ಎಲ್ಲೂ ಕಾಣಿಸಿ ಕೊಂಡಿರದಂಥ ಡಿಫ‌ರೆಂಟ್‌ ಗೆಟಪ್‌ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ “ಅರ್ಜುನ್‌ ಗೌಡ’ ಪ್ರಮೋಶನ್ಸ್‌ ಕೆಲಸಗಳು ಶುರುವಾಗಿದ್ದು, ಆದಷ್ಟು ಬೇಗ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಿದೆ. ಸದ್ಯ ಪ್ರಮೋಶನ್‌ ಭಾಗವಾಗಿ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡುತ್ತಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ:‘ಕಬ್ಜ’ ಶೂಟಿಂಗ್ ವೇಳೆ ಅವಘಡ : ಉಪ್ಪಿ ತಲೆಗೆ ರಾಡ್‍ ಏಟು  

ಇನ್ನು “ಅರ್ಜುನ್‌ ಗೌಡ’ ಚಿತ್ರದಲ್ಲಿ, ಪ್ರಜ್ವಲ್‌ ದೇವರಾಜ್‌ಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್‌ ಜೋಡಿಯಾಗಿದ್ದಾರೆ. ಉಳಿದಂತೆ ಬಾಲಿವುಡ್‌ ನಟ ರಾಹುಲ್‌ ದೇವ್‌, ಸ್ಪರ್ಶ ರೇಖಾ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್‌ ಶೆಟ್ಟಿ, ದಿನೇಶ್‌ ಮಂಗಳೂರು, ಶೋಭಿತ್‌, ಜೀವನ್‌, ಹನುಮಂತೇ ಗೌಡ, ಮೋಹನ್‌ ಜುನೇಜ ಮುಂತಾದವರು “ಅರ್ಜುನ್‌ ಗೌಡ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

ಕನ್ನಡ ಚಿತ್ರರಂಗದಲ್ಲಿ “ಲಾಕಪ್‌ ಡೆತ್‌’, “ಗೋಲಿಬಾರ್‌’, “ಎ.ಕೆ 47′ ನಂತಹ ಸಾಕಷ್ಟು ಅದ್ಧೂರಿ ಸಾಹಸ ಪ್ರಧಾನ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿಯ ನಿರ್ಮಾಪಕ ರಾಮು, “ರಾಮು ಫಿಲಂಸ್‌’ ಬ್ಯಾನರ್‌ ಮೂಲಕ ಅಂಥದ್ದೇ ಮತ್ತೂಂದು ಆ್ಯಕ್ಷನ್‌ ಚಿತ್ರ “ಅರ್ಜುನ್‌ ಗೌಡ’ನನ್ನು ತೆರೆಗೆ ತರುತ್ತಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಎರಡನೇ ಬಾಲಿವುಡ್‌ ಚಿತ್ರ ಶುರು

Advertisement

Udayavani is now on Telegram. Click here to join our channel and stay updated with the latest news.

Next