Advertisement

ಇನ್ಸ್‌ಪೆಕ್ಟರ್‌ ವಿಕ್ರಂ: ದರ್ಶನ್‌ ಪಾತ್ರ ಮತ್ತು ಪ್ರಜ್ವಲ್‌ ಸಸ್ಪೆನ್ಸ್‌

11:58 AM Jan 21, 2021 | Team Udayavani |

ದರ್ಶನ್‌ ಅವರ ಪಾತ್ರವನ್ನು ತೆರೆಮೇಲೇಯೇ ನೋಡಿ ಆನಂದಿಸಿ… – ಹೀಗೆ ಹೇಳಿದವರು ನಟ ಪ್ರಜ್ವಲ್‌ ದೇವರಾಜ್‌. ಹೌದು, ಪ್ರಜ್ವಲ್‌ ದೇವರಾಜ್‌ ನಟನೆಯ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರ ಫೆಬ್ರವರಿ 5ರಂದು ತೆರೆಕಾಣುತ್ತಿದೆ. ಒಂದು ವರ್ಷಗಳ ನಂತರ ತೆರೆಕಾಣುತ್ತಿರುವ ಪ್ರಜ್ವಲ್‌ ಸಿನಿಮಾವಿದು. ಪಕ್ಕಾ ಆ್ಯಕ್ಷನ್‌ ಲುಕ್‌ನಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ.

Advertisement

ತಮ್ಮ ಸಿನಿಮಾ ಬಿಡುಗಡೆ ವಿಚಾರವನ್ನು ಅನೌನ್ಸ್‌ ಮಾಡಲು ಪ್ರಜ್ವಲ್‌ ಸೋಶಿಯಲ್‌ ಮೀಡಿಯಾದಲ್ಲಿ ಬಂದಿದ್ದರು. ಈ ವೇಳೆ ಅಭಿಮಾನಿಗಳು ಸಿನಿಮಾ ಕುರಿತಾಗಿ ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಅದರಲ್ಲಿ ಬಹುತೇಕ ಪ್ರಶ್ನೆಗಳು ದರ್ಶನ್‌ ಕುರಿತಾಗಿ ಇದ್ದವು. ಅದಕ್ಕೆ ಕಾರಣ ದರ್ಶನ್‌ ಈ ಸಿನಿಮಾದಲ್ಲಿ ನಟಿಸಿರೋದು. “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರದಲ್ಲಿ ದರ್ಶನ ಪ್ರಮುಖ ಪಾತ್ರ ಮಾಡಿದ್ದು, ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಅವರ ಪಾತ್ರದ ಬಗ್ಗೆ ಕುತೂಹಲವಿದೆ. ಈ ಕಾರಣದಿಂದ ಪ್ರಜ್ವಲ್‌ ಅವರಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದರು. ಇದಕ್ಕೆ ಉತ್ತರಿಸಿದ ಪ್ರಜ್ವಲ್‌, “ದರ್ಶನ್‌ ಅವರ ಜೊತೆ ನಟಿಸಿದ ನಾನು ಲಕ್ಕಿ. ಅವರ ಪಾತ್ರ ತುಂಬಾ ಮಜವಾಗಿದೆ. ಅದನ್ನು ನೀವು ತೆರೆಮೇಲೆಯೇ ನೋಡಬೇಕು. ಈಗ ಹೇಳಿದರೆ ಕುತೂಹಲ ವಿರಲ್ಲ’ ಎಂದರು.

ಇದನ್ನೂ ಓದಿ:ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ದ್ವಿವೇದಿಗೆ ಜಾಮೀನು ನೀಡಿದ ಸುಪ್ರೀಂ

ಚಿತ್ರದಲ್ಲಿ ಪ್ರಜ್ವಲ್‌ ಅವರಿಗೂ ವಿಭಿನ್ನವಾದ ಪಾತ್ರ ಸಿಕ್ಕಿದೆ. ತುಂಬಾ ಜಾಲಿ-ಪೋಲಿಯಾಗಿ ರುವ ಜೊತೆಗೆ ಅಷ್ಟೇ ಕರ್ತವ್ಯ ನಿಷ್ಠೆ ಹೊಂದಿರುವ ಪಾತ್ರದಲ್ಲಿ ಪ್ರಜ್ವಲ್‌ ಕಾಣಿಸಿಕೊಂಡಿ ದ್ದಾರಂತೆ. ಈ ಚಿತ್ರ ಶಿವರಾಜ್‌ ಕುಮಾರ್‌ ಅವರ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರವನ್ನು ನೆನಪಿಸುತ್ತದೆಯಂತೆ. ಇನ್ನು ಚಿತ್ರದ ಟ್ರೇಲರ್‌ ಜನವರಿ 26ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ “ಜಾಕಿ’ ಭಾವನಾ ನಾಯಕಿಯಾಗಿ ನಟಿಸಿದ್ದಾರೆ. ವಿಖ್ಯಾತ್‌ ಈ ಚಿತ್ರದ ನಿರ್ಮಾಪಕರು.

ಇದನ್ನೂ ಓದಿ: ಭಜರಂಗಿ-2, ಸಲಗ.. ಸ್ಟಾರ್‌ ಸಿನಿಮಾಗಳ ರಿಲೀಸ್‌ಗೆ ಕೊನೆಗೂ ಡೇಟ್‌ ಫಿಕ್ಸ್

Advertisement
Advertisement

Udayavani is now on Telegram. Click here to join our channel and stay updated with the latest news.

Next