Advertisement

ಪ್ರಜ್ವಲ್‌ ಅಬ್ಬರಕ್ಕೆ ಶಿವಣ್ಣ ಸಾಥ್‌

12:35 PM Dec 06, 2020 | Suhan S |

ನಟ ಪ್ರಜ್ವಲ್‌ ದೇವರಾಜ್‌ ಅಭಿನಯದ ಹೊಸ ಚಿತ್ರಕ್ಕೆ ಟೈಟಲ್‌ ಸಿಕ್ಕಿದೆ. ಅದು “ಅಬ್ಬರ’. ಇತ್ತೀಚೆಗೆ ಈ ಚಿತ್ರದ ಟೈಟಲ್‌ ಪೋಸ್ಟರ್‌ ಅನ್ನು ಶಿವರಾಜ್‌ಕುಮಾರ್‌ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

Advertisement

ಈ ಮೂಲಕ ಪ್ರಜ್ವಲ್‌”ಅಬ್ಬರ’ಕ್ಕೆ ಶಿವಣ್ಣ ಸಾಥ್‌ ನೀಡಿದ್ದಾರೆ. ಈ ಚಿತ್ರವನ್ನು ರಾಮ್‌ ನಾರಾಯಣ್‌ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುಪಾಲು ಚಿತ್ರೀಕರಣ ಮುಗಿದಿದ್ದು, ಇನ್ನುಕೆಲ ದಿನಗಳು ಬಾಕಿ ಇವೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಲೇಖಾ ಚಂದ್ರ, ರಾಜಶ್ರೀ ಪೊನ್ನಪ್ಪ ಹಾಗೂ ನಿಮಿಕಾ ನಟಿಸುತ್ತಿದ್ದಾರೆ.

ಇದನ್ನೂ ಓದಿ :ರಾಜಕೀಯದಲ್ಲಿ ನಾನು ಮುಗ್ದ, ಇನ್ನೂ ಅಂಬೆಗಾಲಿಡುತ್ತಿದ್ದೇನೆ: ಸಚಿವ ಎಸ್.ಟಿ.ಸೋಮಶೇಖರ್

ಚಿತ್ರವನ್ನು ಎಚ್‌.ಎಂ. ಬಸವರಾಜ್‌ ಮಂಚಯ್ಯ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತವಿದೆ. ಇನ್ನು, ಈ ಚಿತ್ರದಲ್ಲಿ ಪ್ರಜ್ವಲ್‌ ವಿಭಿನ್ನ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ. ಹೊಸ ಬಗೆಯ ಕಥೆ ಇದಾಗಿರುವುದರಿಂದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಅವರಿಗಿದೆ. ­

Advertisement
Advertisement

Udayavani is now on Telegram. Click here to join our channel and stay updated with the latest news.

Next