Advertisement
ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಗಳು ಹಾಗೂ ಪ್ರಾಚಿ ಉಡುಪಿ ವತಿಯಿಂದ ಎರಡು ದಿನಗಳ ಕಾಲ ಆಯೋಜನೆಯ ಪ್ರಜ್ಞಾ ಕ್ರಾಫ್ಟ್ ಮೇಳ ಪಿಪಿಸಿ ಕಾಲೇಜು ಆವರಣದಲ್ಲಿ ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕದ ಜಂಟಿ ಕಾರ್ಯದರ್ಶಿ ಎನ್. ಶಶಿಧರ ಉದ್ಘಾಟಿಸಿ, ಜೈಪುರದಲ್ಲಿರುವಂತೆ ಕ್ರಾಫ್ಟ್ ಕಾಲೇಜು ಜಿಲ್ಲೆಯಲ್ಲಿಯೂ ಆಗಬೇಕೆಂದರು.
ಜಿಟುಕು-ಮಿಟುಕು, ಕರ್ಮವೃಕ್ಷ, ಕಂಚಿನ ಪ್ರತಿಮೆಗಳು, ಮರದ ಕೆತ್ತನೆಗಳು, ಬಿದಿರಿನ ಬಾಚಣಿಗೆ, ಬಸ್ತರ್, ಬೀಸುವ ಕೊಳಲು, ಹ್ಯಾಂಡ್‌ಮೇಡ್ ಲ್ಯಾಂಪ್‌ಗ್ಳು, ಮಣ್ಣಿನ ಕಲಾಕೃತಿಗಳು, ಇಳಕಲ್ ಸೀರೆ, ಖಾದಿ, ಟವೆಲ್, ನ್ಯಾಪ್ಕಿನ್, ಪರ್ಸ್‌ಗಳು, ಮೆಕ್ಕೆ ಜೋಳದ ಸಿಪ್ಪೆಯಿಂದ ತಯಾರಿಸಿದ ಹೂಗಳು, ಹ್ಯಾಂಡ್‌ಮೇಡ್ ನೆಕ್ಲೆಸ್, ಕಿವಿಯೋಲೆ, ಉಂಗುರ, ತಾಳಿಪಾಡಿಯ ಸೀರೆ, ಪೈಂಟಿಂಗ್‌ಗಳು, ಯಕ್ಷಗಾನದ ಕಲಾಕೃತಿಗಳು, ತೆಂಗಿನ ಚಿಪ್ಪುವಿನಲ್ಲಿ ತಯಾರಿಸಿದ ಕೀ ಪಂಚ್, ವರ್ಲಿ ಆರ್ಟ್, ಟ್ರೈಬಲ್ ಆರ್ಟ್ ಹೀಗೆ ಹಲವಾರು ವಸ್ತುಗಳು ನೋಡುಗರ ಗಮನಸೆಳೆಯಿತು.