Advertisement

ಮಂಗಳೂರು: ಜ. 22ರ ಪ್ರಜಾಧ್ವನಿ ಯಾತ್ರೆಗೆ ಸಿದ್ಧತೆ

12:41 AM Jan 19, 2023 | Team Udayavani |

ಮಂಗಳೂರು: ಕೆಪಿಸಿಸಿ ನೇತೃತ್ವದ ಪ್ರಜಾಧ್ವನಿ ಬಸ್‌ ಯಾತ್ರೆ ಜ. 22ರಂದು ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಸಮಾವೇಶದ ಪೂರ್ವಭಾವಿ ಸಭೆಯು ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಬುಧವಾರ ಕರಾವಳಿ ಉತ್ಸವ ಮೈದಾನದಲ್ಲಿ ಜರಗಿತು.
ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್‌ ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲನೆ ನಡೆಸಿ ನಾಯಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

Advertisement

50 ಸಾವಿರಕ್ಕೂ ಅಧಿಕ ಕಾರ್ಯಕರ್ತರ ನಿರೀಕ್ಷೆ
ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ರಾಜ್ಯ-ರಾಷ್ಟ್ರ ಮಟ್ಟದ ಪ್ರಮುಖರು ಭಾಗವಹಿಸಲಿದ್ದಾರೆ. ದ.ಕ. ಜಿಲ್ಲೆಯ 50 ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಸೇರುವ ನಿರೀಕ್ಷೆ ಇದ್ದು, ಸಭೆಯ ವ್ಯವಸ್ಥೆಯ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಮೊದಿನ್‌ ಬಾವಾ, ಜೆ.ಆರ್‌. ಲೋಬೊ, ಐವನ್‌ ಡಿ’ಸೋಜಾ, ಕೆಪಿಸಿಸಿ ಪ್ರಧಾನ ಕಾರ್ಯರ್ಶಿಗಳಾದ ಮಿಥುನ್‌ ರೈ, ಇನಾಯತ್‌ ಅಲಿ, ಮಮತಾ ಗಟ್ಟಿ, ಬ್ಲಾಕ್‌ ಅಧ್ಯಕ್ಷರಾದ ಅಬ್ದುಲ್‌ ಸಲೀಂ, ಪ್ರಕಾಶ್‌ ಸಾಲ್ಯಾನ್‌, ಉಮೇಶ್‌ ದಂಡಕೇರಿ, ಮುಡಾ ಮಾಜಿ ಅಧ್ಯಕ್ಷ ಸುರೇಶ್‌ ಬಲ್ಲಾಳ್‌, ಮಾಜಿ ಮೇಯರ್‌ಗಳಾದ ಶಶಿಧರ್‌ ಹೆಗ್ಡೆ, ಭಾಸ್ಕರ್‌ ಕೆ., ಕವಿತಾ ಸನಿಲ್‌, ಲುಕಾ¾ನ್‌ ಬಂಟ್ವಾಳ, ಶಾಲೆಟ್‌ ಪಿಂಟೊ, ಶಾಹುಲ್‌ ಹಮೀದ್‌, ಸಂತೋಷ್‌ ಕುಮಾರ್‌ ಶೆಟ್ಟಿ, ಚೇತನ್‌ ಬೆಂಗ್ರೆ, ಅಬ್ದುಲ್‌ ರವೂಫ್‌, ಪ್ರವೀಣ್‌ ಆಳ್ವ, ನೀರಜ್‌ ಚಂದ್ರಪಾಲ್‌, ಖಾಲಿದ್‌ ಉಜಿರೆ, ಉಮ್ಮರ್‌ ಫಾರೂಕ್‌ ಪುದು, ಸಿ.ಎಂ. ಮುಸ್ತಫಾ, ಶುಭೋದಯ ಆಳ್ವ, ಎನ್‌.ಎಸ್‌. ಕರೀಂ, ಅಬ್ದುಲ್‌ ರಝಾಕ್‌, ಸಲೀಂ ಮಕ್ಕಾ, ಹೈದರ್‌ ಬೋಳಾರ್‌ ಮುಂತಾ ದ ವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next