Advertisement

ಕರ್ನಾಟಕದ ಜನತೆ ಅನುಕಂಪ ತೋರಿಸಿದ್ದಾರೆ, ಧನ್ಯವಾದಗಳು: ಮೋದಿ ಸಹೋದರ ಪ್ರಹ್ಲಾದ ಮೋದಿ

12:50 PM Dec 28, 2022 | Team Udayavani |

ಮೈಸೂರು: ಇಲ್ಲಿನ ಕಡಕೊಳ ಬಳಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ ದಾಮೋದರ ಮೋದಿ ಅವರು ಚೇತರಿಸಿಕೊಂಡಿದ್ದು, ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ.

Advertisement

ಜೆಎಸ್‌ಎಸ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು, ಶಾಸಕ ಎಸ್.ಎ.ರಾಮದಾಸ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಪ್ರಹ್ಲಾದ ಮೋದಿ ಭಾಗವಹಿಸಿದರು.

ನಾನು, ನಮ್ಮ ಕುಟುಂಬದವರು ಪ್ರಯಾಣ ಮಾಡುತ್ತಿದ್ದೆವು.  ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಯಾರಿಗೂ ತೊಂದರೆ ಆಗಲಿಲ್ಲ. ಕಮಾಂಡ್, ಪೊಲೀಸ್ ಸಿಬ್ಬಂದಿ ಜತೆಗೆ ಇದ್ದರು. ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದೇವೆ. ಕರ್ನಾಟಕದ ಜನತೆ ಅನುಕಂಪ ತೋರಿಸಿದ್ದಾರೆ. ಕರ್ನಾಟಕ ಸರ್ಕಾರ, ಮುಖಂಡರು, ವಿರೋಧ ಪಕ್ಷದವರು, ಕಾರ್ಯಕರ್ತರು ಬಂದು ವಿಚಾರಿಸಿದ್ದಾರೆ.  ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.

ಇದನ್ನೂ ಓದಿ:ಯುವತಿಯನ್ನು ‘ದೇವದಾಸಿ’ ಪದ್ದತಿಗೆ ದೂಡಿದ ಕುಟುಂಬ; ಮೂವರ ಬಂಧನ

ಎರಡು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೆವು.  ಒಂದು ಕಾರಿ‌ನಲ್ಲಿ ನಾನು, ಮಗ, ಸೊಸೆ, ಮೊಮ್ಮಗ ಇದ್ದೆವು. ಮತ್ತೊಂದು ಕಾರಿನಲ್ಲಿ ಮಗಳು, ಅಳಿಯ ಮತ್ತು ಕುಟುಂಬದವರು ಇದ್ದರು. ಕಾರು ನನ್ನ ಸ್ನೇಹಿತ ರಾಜಶೇಖರ್ ಅವರದ್ದು.  ಬೆಂಗಳೂರಿನಲ್ಲಿ ಕಾರು ಪಡೆದು ಕೊಂಡಿದ್ದೆವು. ಚಾಲಕನದ್ದೂ ಏನೂ ತಪ್ಪಿಲ್ಲ.  ಎಸ್ಕಾರ್ಟ್ ಇದ್ದ ಕಾರಣ ಅತಿ ವೇಗದಲ್ಲಿ ಹೋಗಲು ಅವಕಾಶವೇ ಇರಲಿಲ್ಲ.‌ ಅಚಾನಕ್ಕಾಗಿ ಅಪಘಾತವಾಗಿದೆ. ಸೀಟ್ ಬೆಲ್ಟ್ ಹಾಕಿದ್ದೆವು, ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ತೊಂದರೆ ಆಗಲಿಲ್ಲ ಎಂದು ಮಾಹಿತಿ ನೀಡಿದರು.

Advertisement

ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಯಾರಿಗೂ ತೊಂದರೆ ಆಗಿಲ್ಲವೆಂದು ಹೇಳಿದ್ದೇನೆ.‌ ಚಿಕಿತ್ಸೆ ಮುಗಿಸಿದ ಬಳಿಕ ಗುಜರಾತ್‌ಗೆ ಹೋಗುತ್ತೇವೆ ಎಂದು ಪ್ರಹ್ಲಾದ್ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next