Advertisement
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 1998-99 ರಲ್ಲಿ ಎನ್ ಡಿಎ ರಚನೆಯಾಗಿತ್ತು.2014 ಹಾಗೂ 2019ಕ್ಕೆ ಎನ್ ಡಿಎ ಅಧಿಕಾರ ಬಂದಿದೆ. ಯಾವುದೇ ಸಮಯದಲ್ಲಿ ಎನ್ ಡಿಎ ಹೆಸರು ಬದಲಾವಣೆ ಮಾಡುವ ಅವಶ್ಯಕತೆ ಬರಲಿಲ್ಲ. ಏಕೆಂದರೆ ಎನ್ ಡಿಎ ಮೇಲೆ ಒಂದೇ ಒಂದು ಆರೋಪ ಇಲ್ಲ. ಯುಪಿಎ ಮೇಲೆ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ಆರೋಪವಿದೆ. ಈ ಕಾರಣಕ್ಕೆ ಯುಪಿಎ ಹೆಸರು ಬದಲಾವಣೆ ಆಗಿದೆ. ಆದರೆ ಎನ್‌ಡಿಎ ಯಾವತ್ತೂ ತನ್ನ ಹೆಸರು ಬದಲಾವಣೆ ಮಾಡಲ್ಲ ಎಂದರು.
ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಪಕ್ಷ ಎನ್ ಡಿಎ ಜತೆ ಸೇರಿದ್ದೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈಗ ಅವರು ನಮ್ಮ ಜೊತೆ ಸೇರಿರುವುದು ಸಂತಸದ ಸಂಗತಿ. ಆದರೆ ಇದುವರೆಗೂ ಯಾವುದೇ ಕ್ಷೇತ್ರ ಅಥವಾ ಇಷ್ಟೇ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ. ಆ ಕುರಿತು ರಾಜ್ಯದ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು. ಡ್ಯಾಮ್ ಪರಿಸ್ಥಿತಿ ನೋಡಿ ವಾದಿಸಿಲ್ಲ:
ಕಾವೇರಿ ವಿಚಾರದಲ್ಲಿ ಸರ್ಕಾರ ಅವರ ಮತ್ತು ನಮ್ಮ ಡ್ಯಾಂ ಸ್ಥಿತಿ ನೋಡಿ ವಾದ ಮಾಡಿಲ್ಲ. ಸಂಸದ ಡಿ.ಕೆ. ಸುರೇಶ್ ಅವರು ಆನ್ ಲೈನ್ ಮೂಲಕ ಹಾಜರಾಗುವುದು ಇಂತಹ ಎಲ್ಲ ಸಂಗತಿಗಳು ನಡೆದುಹೋಗಿವೆ. ನಾವು ಕೇಂದ್ರದಿಂದ ಎಲ್ಲಾ ಸಹಕಾರ ಕೊಡುತ್ತಿದ್ದೇವೆ. ಮುಂದೆಯೂ ಕೊಡುತ್ತೇವೆ. ಈ ವಿಚಾರ ಕೋರ್ಟ್ ನಲ್ಲಿರುವ ಕಾರಣ ನಾನು ಬಹಳ ಮಾತನಾಡಲ್ಲ. ಮೊನ್ನೆ ಡಿಸಿಎಂ ಡಿ.ಕೆ. ಶಿವಕುಮಾರ್ ನಮ್ಮ ಮನೆಗೆ ಬಂದಾಗ ವಿವರವಾಗಿ ಮಾತನಾಡಿದ್ದೇನೆ ಎಂದರು.
Related Articles
Advertisement
ತಮ್ಮ ತಪ್ಪುಮುಚ್ಚಿಹಾಕಲು ಜನರನ್ನು ತಪ್ಪು ದಾರಿಗೆ ಎಳೆಯಲು ಸಿಎಂ ಸಿದ್ದರಾಮಯ್ಯ ನಿಸ್ಸೀಮರು. ಮೈತ್ರಿ ಪಕ್ಷಗಳ ನಾಯಕರು ಖರ್ಗೆ ಅವರೇ, ಇದುವರೆಗೆ ಏಕೆ ಅವರು ಇಬ್ಬರನ್ನು ಕರೆದು ಮಾತನಾಡಿಲ್ಲ. ಎಲ್ಲವನ್ನೂ ಮೋದಿ ಮೇಲೆ ಗೂಬೆ ಕೂರಿಸುವುದೆ ಇವರ ಕೆಲಸ ಎಂದು ಸಚಿವ ಜೋಶಿ ಹರಿಹಾಯ್ದರು.
ಇದನ್ನೂ ಓದಿ: Modi Multiplex: ನೂತನ ಸಂಸತ್ತನ್ನು ‘ಮೋದಿ ಮಲ್ಟಿಪ್ಲೆಕ್ಸ್’ ಎಂದ ಕಾಂಗ್ರೆಸ್ ಹಿರಿಯ ನಾಯಕ