Advertisement

ರಾಜ್ಯ ರಾಜಕಾರಣಕ್ಕಿಲ್ಲ; ಸಿಎಂ ಆಕಾಂಕ್ಷಿ ಅಲ್ಲ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟನೆ

12:33 AM Apr 27, 2023 | Team Udayavani |

ಹುಬ್ಬಳ್ಳಿ: “ಸರ್ವಾಂಗೀಣ ಅಭಿ ವೃದ್ಧಿಯ ಚಿಂತಕ ಪ್ರಧಾನಿ ನರೇಂದ್ರ ಮೋದಿ ಜತೆಗೆ ಕೆಲಸ ಮಾಡುವುದು ಮಹಾಭಾಗ್ಯ. ಅದನ್ನು ಬಿಟ್ಟು ನಾನ್ಯಾಕೆ ರಾಜ್ಯ ರಾಜಕೀಯಕ್ಕೆ ಬರಲಿ? ಯಾವುದೇ ಕಾರಣಕ್ಕೂ ಬರುವುದಿಲ್ಲ. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಂತೂ ಅಲ್ಲವೇ ಅಲ್ಲ’…
-ಇದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸ್ಪಷ್ಟೋಕ್ತಿ. ಈ ವಿಚಾರದಲ್ಲಿ ಯಾರ್ಯಾರೋ ಏನೇನೋ ಹೇಳಬಹುದು. ಆದರೆ ನನ್ನ ಈ ನಿಲುವು ಸ್ಪಷ್ಟ. ಇದರಲ್ಲಿ ಯಾವುದೇ ಬದ ಲಾವಣೆ ಇಲ್ಲ ಎಂದು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು.

Advertisement

 ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ- ಚುನಾವಣೆ ಪೈಪೋಟಿ ಹೇಗಿದೆ?
ರಾಜ್ಯದಲ್ಲಿ ಬಿಜೆಪಿಗೆ ಫಲಪ್ರದವಾಗುವ ರೀತಿಯಲ್ಲಿ ಧ್ರುವೀಕರಣ ಸೂಕ್ಷ್ಮರೀತಿಯಲ್ಲಿ ಆಗಿದೆ. ಚುನಾವಣೆ ವಿಚಾರಕ್ಕೆ ಬಂದರೆ, ಹಳೆ ಮೈಸೂರು ಭಾಗದ ಒಂದೆರಡು ಜಿಲ್ಲೆಗಳಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಇರುವುದು ಬಿಟ್ಟರೆ ಉಳಿದ ಎಲ್ಲ ಕಡೆ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇದೆ.

 ರಾಜ್ಯದಲ್ಲಿ ಬಿಜೆಪಿಗೆ ಇದುವರೆಗೆ ಪೂರ್ಣ ಬಹುಮತ ಸಿಕ್ಕಿಲ್ಲ. ಈ ಬಾರಿಯಾದರೂ ಸಿಕ್ಕೀತೆ?
ನಿಜ. ಹಿಂದೆ ನಮಗೆ ಪೂರ್ಣ ಬಹುಮತ ಸಿಕ್ಕಿಲ್ಲ. ಆದರೆ ಈ ಬಾರಿ ಖಂಡಿತ ಸಿಕ್ಕೇ ಸಿಗುತ್ತದೆ. ಮೀಸಲಾತಿ ಹೆಚ್ಚಳ, ಒಳಮೀಸಲು ಫಲ ನೀಡುತ್ತದೆ. ಪ್ರಧಾನಿಯವರ ಜನಪ್ರಿಯತೆ ರಾಜ್ಯದಲ್ಲಿ ಹೆಚ್ಚಿರುವುದು, ಡಬಲ್‌ ಎಂಜಿನ್‌ ಸರಕಾರದ ಸಾಧನೆ ಇವೆಲ್ಲವೂ ನಮಗೆ ಧನಾತ್ಮಕ ಅಂಶ. ಮೀಸಲು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಸದ್ಯ ತಡೆ ನೀಡಿರಬಹುದು. ಆದರೆ ಮುಸ್ಲಿಮರಿಗೆ ನೀಡಿದ ಧರ್ಮಾಧಾರಿತ ಮೀಸಲು ಮುಂದುವರಿಯಲಾರದು ಎಂಬ ವಿಶ್ವಾಸ ನಮಗಿದೆ.

 ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಬಾರಿ ಯಾದರೂ ಐದು ವರ್ಷ ಒಬ್ಬರೇ ಸಿಎಂ ಇರುತ್ತಾರಾ?
ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಹಿಂದಿನ ರಾಜಕೀಯ ಸ್ಥಿತಿಯಲ್ಲಿ ಒಮ್ಮೆ ಮೂವರು, ಈಗ ಇಬ್ಬರು ಸಿಎಂಗಳು ಆಗಿರ ಬಹುದು. ಯಡಿಯೂರಪ್ಪನವರು 80 ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದರು. ಇನ್ನು ಮುಂದೆ ಒಬ್ಬರೇ ಮುಖ್ಯಮಂತ್ರಿಯಷ್ಟೇ ಅಲ್ಲ, ಸುಸ್ಥಿರ ಹಾಗೂ ಸಮರ್ಥ ಸರಕಾರ ನೀಡುತ್ತೇವೆ.

 ಪ್ರಹ್ಲಾದ್‌ ಜೋಶಿ ಅಥವಾ ಬಿ.ಎಲ್‌. ಸಂತೋಷ್‌ ಮುಂದಿನ ಸಿಎಂ ಅಂತೆ?
ಬಿ.ಎಲ್‌. ಸಂತೋಷ್‌ ಆರೆಸ್ಸೆಸ್‌ ಪ್ರಚಾರಕ ರಾಗಿ ದ್ದವರು. ಅವರೆಂದೂ‌ ಕ್ರಿಯ ರಾಜಕಾರಣಕ್ಕೆ ಬಂದವರಲ್ಲ, ಬರುವುದೂ ಇಲ್ಲ. ಅವರನ್ನೇಕೆ ಸಿಎಂ ಸ್ಥಾನಕ್ಕೆ ಎಳೆದು ತರುವ ಕೆಲಸ ಮಾಡ ಲಾಗುತ್ತಿದೆ, ತಿಳಿಯುತ್ತಿಲ್ಲ. ನಾನಂತೂ ಖಂಡಿತ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. ಹೀಗಿರುವಾಗ ಸಿಎಂ ಆಗುವ ಮಾತು ಎಲ್ಲಿಂದ ಬಂತು? ಒಂದು ವೇಳೆ ಪಕ್ಷದ ವರಿಷ್ಠರು ನನ್ನ ಅನಿಸಿಕೆ ಕೇಳಿದರೂ ಇದೇ ಮಾತು ಹೇಳುವೆ. ಲಿಂಗಾಯತ ಸಿಎಂ ವಿಚಾರಕ್ಕೆ ಬಂದರೆ, ಸದ್ಯ ಲಿಂಗಾಯತ ಸಮು ದಾಯದ ಬೊಮ್ಮಾಯಿ ಅವರೇ ಇದ್ದಾರಲ್ಲ?

Advertisement

 ಸಿಎಂ ಹುದ್ದೆ ವಿಚಾರದಲ್ಲಿ ನಿಮ್ಮ ಹೆಸರು ತಳುಕು ಹಾಕಿದ ಎಚ್‌ಡಿಕೆ ಆರೋಪಕ್ಕೆ ಏನಂತಿರಿ?
ಸಿಎಂ ವಿಚಾರದಲ್ಲಿ ಜಾತಿ- ಡಿಎನ್‌ಎ ಇತ್ಯಾದಿ ಅಸಂಬದ್ಧ ವಿಚಾರ  ಗಳನ್ನು ಪ್ರಸ್ತಾವಿಸುವ ಮೂಲಕ ಎಚ್‌.ಡಿ. ಕುಮಾರಸ್ವಾಮಿ ತಮ್ಮ ವ್ಯಕ್ತಿತ್ವ ಏನೆಂಬುದನ್ನು ತೋರಿಸಿ ಕೊಟ್ಟಿದ್ದಾರೆ. ರಾಜಕೀಯ ಟೀಕೆಗೆ ಮಿತಿ ಇರಬೇಕು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಾಯಿಗೆ ಬಂದಂತೆ ಹೇಳಿಕೆ ಕೊಡುವುದಲ್ಲ.

 ರಾಜ್ಯ ಬಿಜೆಪಿ ಕೆಲವರ ಹಿಡಿತದಲ್ಲಿ ಇದೆಯಂತೆ, ಹೌದೇ?
ಏನೇ ಘಟನೆ-ಬೆಳವಣಿಗೆ ಯಾ ದರೂ ಅದರ ಹಿಂದೆ ಆರೆಸ್ಸೆಸ್‌ ಕೈವಾಡ ಇದೆ ಎಂದು ಆರೋಪಿಸು ವುದು ವಿಪಕ್ಷಗಳ ಚಟ. ಬಿಜೆಪಿ ತನ್ನದೇ ಶಕ್ತಿ ಯಾಗಿ ಬೆಳೆದಿದೆ. ಟಿಕೆಟ್‌ ವಿಚಾರದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಿರ್ಣಯ ಕೈಗೊಂಡಿದ್ದಾರೆ ಎಂದರೆ ಏನನ್ನೂ ಪರಿಗಣಿಸದೆ ಏಕ ಪಕ್ಷೀಯವಾಗಿ ನಿರ್ಣಯ ಕೈಗೊಂಡಿ ದ್ದಾರೆ ಎಂದಲ್ಲ. ಎಲ್ಲ ಮಾಹಿತಿ ಪರಿಶೀಲಿಸಿ, ರಾಜ ಕೀಯ ಲೆಕ್ಕಾಚಾರದೊಂದಿಗೆ ಟಿಕೆಟ್‌ ಅಂತಿಮಗೊಳಿಸಿದ್ದಾರೆ.

 ಬಿಜೆಪಿ ಆಡಳಿತಕ್ಕಲ್ಲ, ವಿಪಕ್ಷಕ್ಕೆ ಯೋಗ್ಯವಂತೆ?
ಇದು ಕುಹಕಿಗಳ ಮಾತು. ಆದರೆ ನಾವು ವಿಪಕ್ಷವಾಗಿ ಸಮರ್ಥ ಕಾರ್ಯನಿರ್ವಹಣೆಗೂ ಸಿದ್ಧ, ಆಡ ಳಿತ ಪಕ್ಷವಾಗಿ ಉತ್ತಮ ಆಡಳಿತ- ಅಭಿವೃದ್ಧಿಗೂ ಬದ್ಧ ಎಂಬು ದನ್ನು ತೋರಿಸಿಕೊಟ್ಟಿದ್ದೇವೆ. ಕರ್ನಾಟಕವನ್ನೇ ತೆಗೆದುಕೊಳ್ಳಿ, ಮೀಸಲಾತಿ ಎಂದರೆ ಜೇನುಗೂಡಿಗೆ ಕೈ ಎನ್ನುವ ಅನಿಸಿಕೆ ಇತ್ತು. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಯಾವ ಜಾತಿಗೂ ಅನ್ಯಾಯ ವಾಗದಂತೆ ಮೀಸಲು ಹೆಚ್ಚಳ, ಒಳ ಮೀಸಲು ಜಾರಿ ನಿರ್ಣಯ ಕೈಗೊಳ್ಳಲಿಲ್ಲವೇ? ದಕ್ಷ ಆಡಳಿತದ ಎದೆಗಾರಿಕೆ ಇದಲ್ಲವೆ?

 ಶೇ. 40 ಕಮಿಷನ್‌ ಆರೋಪಕ್ಕೆ ನಿಮ್ಮ ಅನಿಸಿಕೆ?
ಭ್ರಷ್ಟಾಚಾರ ಬಗ್ಗೆ ಕಾಂಗ್ರೆಸ್‌ ಮಾತನಾಡುವುದಕ್ಕೆ ಏನಾದರೂ ಅರ್ಥ ಇದೆಯೇ? ದೇಶದಲ್ಲಿ ನೆಹರು ಕಾಲದ ಜೀಪ್‌ ಹಗರಣದಿಂದ ಹಿಡಿದು, ಯುಪಿಎ ಸರಕಾರದ 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ಹಗರಣದವರೆಗೆ ಭ್ರಷ್ಟಾ ಚಾರ – ಹಗರಣಗಳ ಸರಮಾಲೆಯನ್ನೇ ಧರಿಸಿ, ಜನರಿಂದ ತಿರಸ್ಕೃತಗೊಂಡ ಕಾಂಗ್ರೆಸ್‌ ತಳ
ಬುಡವಿಲ್ಲದ ಶೇ. 40 ಕಮಿಷನ್‌ ಸುಳ್ಳನ್ನು ಪ್ರಸ್ತಾವಿಸಿ ನಿಜವಾಗಿಸಲು ಹೊರಟಿದೆ. ಯುಪಿಎ ಅಧಿಕಾರದಲ್ಲಿ ಒಟ್ಟು 12 ಲಕ್ಷ ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆದಿದೆ. ನಾವು ಕಾಂಗ್ರೆಸ್‌ನವರಂತೆ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳಿ ಆರೋಪಿಸುತ್ತಿಲ್ಲ. ಸಿಎಜಿ ವರದಿ, ಸುಪ್ರೀಂ ಕೋರ್ಟ್‌ ನಲ್ಲಿರುವ ಪ್ರಕರಣಗಳನ್ನು ಆಧರಿಸಿ ಹೇಳುತ್ತಿದ್ದೇವೆ.

 ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಸುಳಿವು ಇತ್ತೇ?
ಅವರು ಕಾಂಗ್ರೆಸ್‌ ಸೇರುವುದನ್ನು ಕನಸಿನಲ್ಲಿಯೂ ಊಹಿಸಲು ಸಾಧ್ಯ ಇರಲಿಲ್ಲ. ಆದರೂ ಅಂತಹ ರಾಜಕೀಯ ನಿರ್ಧಾರವನ್ನು ಯಾಕೆ ತೆಗೆದುಕೊಂಡರು ಎಂಬುದು ಈಗಲೂ ನನಗೆ ಯಕ್ಷ ಪ್ರಶ್ನೆ. ಬಿಜೆಪಿಯಲ್ಲಿದ್ದಾಗ ಪಕ್ಷ ಸಿದ್ಧಾಂತವನ್ನು ಪ್ರಬಲವಾಗಿ ಮಂಡಿಸುತ್ತಿದ್ದ, ರಾಹುಲ್‌ ಗಾಂಧಿ, ಕಾಂಗ್ರೆಸ್‌ ಸಿದ್ಧಾಂತವನ್ನು ಅಷ್ಟೇ ಗಟ್ಟಿಯಾಗಿ ವಿರೋಧಿಸುತ್ತಿದ್ದ ಶೆಟ್ಟರ್‌ ತದ್ವಿರುದ್ಧ ಸಿದ್ಧಾಂತ ಹಾಗೂ ಅವಕಾಶವಾದಿ ಕಾಂಗ್ರೆಸನ್ನು ಹೇಗೆ ಸೇರಿದರು ಎಂಬುದೇ ತಿಳಿಯುತ್ತಿಲ್ಲ.

“ಸ್ನೇಹಿತ’ ಜಗದೀಶ್‌ ಶೆಟ್ಟರ್‌ ಅವರ ರಾಜಕೀಯ ನಡೆ ಬಗ್ಗೆ ಏನಂತೀರಿ?
ನಾನು ಮತ್ತು ಜಗದೀಶ್‌ ಶೆಟ್ಟರ್‌ ನಾಲ್ಕು ದಶಕಗಳಿಂದ ರಾಜಕೀಯ ಹಾಗೂ ವೈಯಕ್ತಿಕ ವಾಗಿ ಉತ್ತಮ ಸ್ನೇಹಿತರು. ಇದು ನಿಸ್ಸಂದೇಹ. ಈಗ ಅವರು ರಾಜಕೀಯ ವಾಗಿ ಇನ್ನೊಂದು ದಿಕ್ಕಿಗೆ ಹೋಗಿದ್ದಾರೆ. ಅವರ ಬಗ್ಗೆ ಸಿಟ್ಟು, ದ್ವೇಷ ಇಲ್ಲ. ವೈಯಕ್ತಿಕ ಸ್ನೇಹಕ್ಕೆ ಧಕ್ಕೆ ಇಲ್ಲ. ರಾಜಕೀಯವಾಗಿ ನಾನು ಪಕ್ಷದ ಶಿಸ್ತಿನ ಸಿಪಾಯಿ. ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡಬೇಕೆಂದು ನಾನು ಮತ್ತು ಸಿಎಂ ಬೊಮ್ಮಾಯಿ ಗಟ್ಟಿ ಧ್ವನಿ ಎತ್ತಿ ದ್ದೆವು. ಇದು ಶೆಟ್ಟರ್‌ ಅವರಿಗೂ ಗೊತ್ತಿದೆ. ಆದರೆ ಪಕ್ಷದ ಉನ್ನತ ನಾಯಕರು ಕೈಗೊಂಡ ತೀರ್ಮಾನಕ್ಕೆ ಎಲ್ಲರೂ ತಲೆ ಬಾಗಲೇ  ಬೇಕಲ್ಲ. ಇದನ್ನು ಶೆಟ್ಟರ್‌ ಅವರಿಗೆ ಮನ ವರಿಕೆ ಮಾಡಿದ್ದೆ, ಮನವಿಯನ್ನೂ ಮಾಡಿದ್ದೆ. ಆದರೂ ಅವರು ಏಕೆ ಹಠಕ್ಕೆ ಬಿದ್ದರು ಎನ್ನುವುದು ತಿಳಿಯದು.

- ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next