Advertisement

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

10:27 AM May 07, 2024 | Team Udayavani |

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕುಟುಂಬ ಸಮೇತರಾಗಿ ಆಗಮಿಸಿ ಇಲ್ಲಿನ ಚಿನ್ಮಯ ವಿದ್ಯಾಲಯ ಮತಕೇಂದ್ರದ 111 ಮತಗಟ್ಟೆಯಲ್ಲಿ ಮತದಾನ ಮಾಡಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಹಂತದ ಮತದಾನ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವರದಿ ಬಂದಿದ ಎಂದರು.

ನನ್ನ ತೇಜೋವಧೆ ಯತ್ನ ನಡೆದಿದೆ. ಪ್ರತಿಬಾರಿಯೂ ಇಂತಹದ್ದು ಇರುತ್ತದೆ. ಈ ಬಾರಿ ಸ್ವಲ್ಪ ಹೆಚ್ಚಿನದಾಗಿದೆ.

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ.

ಕೇಂದ್ರ ಸರ್ಕಾರ ನೇರವಾಗಿ ಸಿಬಿಐಗೆ ವಹಿಸಲು ಬಾರದು, ರಾಜ್ಯ ಸರ್ಕಾರ ನೀಡಬೇಕು ಇಲ್ಲವೇ ಯಾರಾದರು ಹೈಕೋರ್ಟ್ ಮೊರೆ ಹೋಗಿ ಕೋರ್ಟ್ ನಿಂದ ಸಿಬಿಐ ವಹಿಸುವ ಆದೇಶ ಪಡೆಯಬೇಕು.

Advertisement

ಪ್ರಕರಣದಲ್ಲಿ ತಮ್ಮ ಪಾತ್ರವೇನು ಇಲ್ಲವೆಂದಾದರೆ ಪ್ರಕರಣವನ್ನು ಸಿಬಿಐಗೆ ವಹಿಸಲು ಸಿಎಂ-ಡಿಸಿಎಂಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು.

ಮಹಿಳೆಯರಿಗೆ ಆಗಿರುವ ಅನ್ಯಾಯಕ್ಕೆ ಕ್ಷಮೆ ಇಲ್ಲವೇ ಇಲ್ಲ. ಪ್ರಕರಣದಲ್ಲಿ ಪ್ರಜ್ವಲ್ ತಪ್ಪಿತಸ್ಥನಾದರೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next