Advertisement

ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ

10:02 AM Feb 22, 2020 | keerthan |

ಹೈದರಾಬಾದ್: ಎಡಗೈ ಸ್ಪಿನ್ ಬೌಲರ್ ಪ್ರಗ್ಯಾನ್ ಓಜಾ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತದ ಟೆಸ್ಟ್ ತಂಡದಲ್ಲಿ ಮಿಂಚಿದ್ದ ಓಜಾ 100 ವಿಕೆಟ್ ಸಾಧನೆ ಮಾಡಿದ್ದಾರೆ.

Advertisement

2008ರ ಏಷ್ಯಾ ಕಪ್ ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಏಕದಿನ ಪದಾರ್ಪಣೆ ಮಾಡಿದ ಓಜಾ ನಿಗದಿತ ಓವರ್ ಮಾದರಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡವರಲ್ಲ. ಪ್ರಗ್ಯಾನ್ ಓಜಾ ಆಡಿರುವುದು ಒಟ್ಟು 18 ಏಕದಿನ ಮತ್ತು ಆರು ಟಿ20 ಪಂದ್ಯಗಳನ್ನು ಮಾತ್ರ.

33 ವರ್ಷದ ಪ್ರಗ್ಯಾನ್ ಓಜಾ ಆಡಿದ್ದು 24 ಟೆಸ್ಟ್ ಮಾತ್ರ. ಇದರಲ್ಲಿ ಪ್ರಗ್ಯಾನ್ ಓಜಾ 113 ವಿಕೆಟ್ ಕಬಳಿಸಿದ್ದಾರೆ. ಓಜಾ ಕೊನೆಯದಾಗಿ ಭಾರತದ ಪರವಾಗಿ ಆಡಿದ್ದು ವಿಂಡೀಸ್ ವಿರುದ್ದದ ಮುಂಬೈ ಟೆಸ್ಟ್ ನಲ್ಲಿ. ಕಾಕತಾಳೀಯವೆಂದರೆ ಅದು ಸಚಿನ್ ತೆಂಡೂಲ್ಕರ್ ಅವರ ಕೊನೆಯ ಟೆಸ್ಟ್ ಕೂಡಾ.

ಐಪಿಎಲ್ ನಲ್ಲೂ ಮಿಂಚಿದ್ದ ಓಜಾ ಪ್ರಶಸ್ತಿ ಗೆದ್ದ ಡೆಕ್ಕನ್ ಚಾರ್ಜರ್ ತಂಡದ ಪರವಾಗಿ ಆಡಿದ್ದರು. ನಂತರದ ಆವೃತ್ತಿಗಳಲ್ಲಿ ಮುಂಬೈ ಪರ ಮಿಂಚಿದ್ದ ಅವರು 2010ರ ಪರ್ಪಲ್ ಕ್ಯಾಪ್ ವಿಜೇತರಾಗಿದ್ದರು. 2015ರ ನಂತರ ಐಪಿಎಲ್ ನಲ್ಲೂ ಅವಕಾಶ ಪಡೆದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next