Advertisement

ಪರಕೀಯ ಮಹಿಳೆಗೆ ಜನಿಸಿದ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ; ರಾಹುಲ್ ಗೆ ಪ್ರಜ್ಞಾ ಠಾಕೂರ್ ಟೀಕೆ

09:16 AM Mar 12, 2023 | Team Udayavani |

ಹೊಸದಿಲ್ಲಿ: ಭಾರತೀಯ ಜನತಾ ಪಾರ್ಟಿ ಸಂಸದೆ ಪ್ರಜ್ಞಾ ಠಾಕೂರ್ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.  “ಪರಕೀಯ ಮಹಿಳೆಗೆ ಜನಿಸಿದ ಮಗ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ ಎಂಬ ಚಾಣಕ್ಯನ ಮಾತುಗಳನ್ನು “ಸಾಬೀತುಪಡಿಸಿದ್ದಾರೆ” ಎಂದು ಟೀಕಿಸಿದ್ದಾರೆ.

Advertisement

ಅಲ್ಲದೆ ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ನೀಡಿದ ಕೆಲವು ಹೇಳಿಕೆಗಳಿಗಾಗಿ ಅವರನ್ನು ದೇಶದಿಂದ ಹೊರಹಾಕಬೇಕು ಎಂದು ಠಾಕೂರ್ ಹೇಳಿದರು.

ಲೋಕಸಭೆಯಲ್ಲಿ ಮೈಕ್‌ ಗಳು ಪ್ರತಿಪಕ್ಷಗಳು ಮಾತನಾಡುವ ವೇಳೆ ಹೆಚ್ಚಾಗಿ ಮೌನವಾಗಿರುತ್ತವೆ ಎಂದು ರಾಹುಲ್ ಲಂಡನ್‌ ನಲ್ಲಿ ಬ್ರಿಟಿಷ್ ಸಂಸದರಿಗೆ ಹೇಳಿದ್ದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದೆ ಎಂದು ಅವರು ಟೀಕಿಸಿದ್ದರು.

“ನಿಮ್ಮ ತಾಯಿ (ಸೋನಿಯಾ ಗಾಂಧಿ) ಇಟಲಿಯಿಂದ ಬಂದವರಾಗಿರುವುದರಿಂದ ನೀವು ಭಾರತದವರಲ್ಲ ಎಂದು ನಾವು ಭಾವಿಸಿದ್ದೇವೆ” ಎಂದು ಸಾಧ್ವಿ ಪ್ರಜ್ಞಾ ಹೇಳಿದರು.

“ಸಂಸತ್ತು ಸುಗಮವಾಗಿ ನಡೆದರೆ ಹೆಚ್ಚಿನ ಕೆಲಸಗಳು ನಡೆಯುತ್ತವೆ. ಹೆಚ್ಚು ಕೆಲಸವಿದ್ದರೆ ಕಾಂಗ್ರೆಸ್ ನವರಿಗೆ ಉಳಿಗಾಲವಿಲ್ಲ. ಕಾಂಗ್ರೆಸ್ ಅಸ್ತಿತ್ವ ಕೊನೆಗೊಳ್ಳುವ ಹಂತದಲ್ಲಿದೆ. ಈಗ ಅವರ ಮನಸ್ಸು ಕೂಡ ಭ್ರಷ್ಟವಾಗುತ್ತಿದೆ” ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next