ಮುಂಬೈ: ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ರಮೇಶಬಾಬು ಅವರು ಕೇವಲ ಮೂರು ತಿಂಗಳ ಅಂತರದಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಎರಡನೇ ಗೆಲುವು ದಾಖಲಿಸಿದ್ದಾರೆ.
ಶುಕ್ರವಾರ ನಡೆದ ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯ 5 ನೇ ಸುತ್ತಿನಲ್ಲಿ ಇಬ್ಬರು ಆಟಗಾರರು ಭೇಟಿಯಾದರು. ಕಾರ್ಲ್‌ಸನ್ ವಿರುದ್ಧದ ಗೆಲುವಿನ ನಂತರ ಪ್ರಗ್ನಾನಂದ ಅವರು ನಾಕೌಟ್ ಹಂತಕ್ಕೆ ಮುನ್ನಡೆಯುವ ಅವಕಾಶವನ್ನು ಜೀವಂತವಾಗಿರಿಸಿಕೊಂಡರು.
ಪಂದ್ಯಾವಳಿಯ 2 ನೇ ದಿನದಂದು ಚೀನಾದ ವೈ ಯಿ ನಂತರ ಕಾರ್ಲ್‌ಸೆನ್ ಲೀಡರ್ ಬೋರ್ಡ್‌ನಲ್ಲಿ 2 ನೇ ಸ್ಥಾನದಲ್ಲಿದ್ದರೆ ಪ್ರಗ್ನಂಧ ಅವರು ತಮ್ಮ ಮೊತ್ತವನ್ನು 12 ಅಂಕಗಳಿಗೆ ತೆಗೆದುಕೊಂಡರು. ವಿಶ್ವದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಅಭಿಮನ್ಯು ಮಿಶ್ರಾ ಕೂಡ 16 ಮಂದಿ ಪಂದ್ಯಾವಳಿಯ ಭಾಗವಾಗಿದ್ದಾರೆ.
ಇದನ್ನೂ ಓದಿ:ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ ಉದಯ ಚೌಟ ಇನ್ನಿಲ್ಲ
16 ವರ್ಷ ವಯಸ್ಸಿನ ಪ್ರಗ್ನಾನಂದ ಅವರು ಫೆಬ್ರವರಿಯಲ್ಲಿ ಆನ್‌ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಾದ ಏರ್‌ಥಿಂಗ್ಸ್ ಮಾಸ್ಟರ್ಸ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಮೊದಲ ಬಾರಿಗೆ ಸೋಲಿಸಿದರು. ಪ್ರಗ್ನಾನಂದ ಅವರು ಕಾರ್ಲ್‌ಸೆನ್‌ರ 3-ಪಂದ್ಯಗಳ ಗೆಲುವಿನ ಓಟವನ್ನು ಕೊನೆಗೊಳಿಸಿದ್ದರು.