ಗುರುಗ್ರಾಮ : ಗುರಾಗ್ರಾಮದ ರಯಾನ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಎರಡನೇ ತರತಿಗಯ ಬಾಲಕ ಪ್ರದ್ಯುಮ್ನ ಠಾಕೂರ್ ನನ್ನು ಕೊಂದವರು ಯಾರೆಂದು ಹರಿಯಾಣ ಪೊಲೀಸರಿಗೆ ಮೊದಲೇ ಗೊತ್ತಿತೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಹರಿಯಾಣ ಪೊಲೀಸರು ರಯಾನ್ ಮರ್ಡರ್ ಕೇಸಿನಲ್ಲಿ ವಿಚಾರಗಳು ಮುಚ್ಚಿಟಿದ್ದೇ ಇದಕ್ಕೆ ಕಾರಣವಾಗಿದೆ. ಹಾಗಾಗಿ ಇದೀಗ ಸಿಬಿಐ ಈ ಮರ್ಡರ್ ಕೇಸಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ರಯಾನ್ ಮರ್ಡರ್ ಕೇಸಿನ ತನಿಖೆಯಲ್ಲಿ ತಾವು ಎಡವಿರುವುದಾಗಿ ಈ ಮೊದಲೇ ಹರಿಯಾಣ ಪೊಲಿಸರು ಒಪ್ಪಿಕೊಂಡಿದ್ದರು.
ಗುರುಗ್ರಾಮ ಪೊಲೀಸ್ ಕಮಿಷನರ್ ಸಂದೀಪ್ ಕುಮಾರ್ ಖೀರಾವರ್ ಅವರು ಈ ಸಂಬಂಧ ಮೊದಲ ತನಿಖಾ ತಂಡ ಸಭೆಯನ್ನು ಕಳೆದ ತಪ್ಪುಗಾರ ಪೊಲೀಸ್ ಅಧಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.
ರಯಾನ್ ಮರ್ಡರ್ ಕೇಸಿನಲ್ಲಿ ತಾವು ಈ ಮೊದಲು ಶಾಲಾ ಬಸ್ ಚಾಲಕ ಅಶೋಕ್ ಕುಮಾರ್ ಎಂಬಾತನನ್ನು ಬಂಧಿಸಿದ್ದರು. ಇದು ತಮ್ಮ ತಪ್ಪು ಎಂದು ಅನಂತರ ಹರಿಯಾಣ ಪೊಲೀಸರು ಒಪ್ಪಿಕೊಂಡರು. ತಾವು ಶಾಲೆಯ ಸಿಸಿಟಿವಿ ಚಿತ್ರಿಕೆಗಳನ್ನು ವೀಕ್ಷಿಸಿಯೇ ಇರಲಿಲ್ಲ ಎಂದವರು ಒಪ್ಪಿಕೊಂಡಿದ್ದರು.
ಆರಂಭಿಕ ಎಂಟು ಸೆಕುಂಡುಗಳು ಸಿಸಿಟಿವಿ ಚಿತ್ರಿಕೆಯಲ್ಲಿ ಹನ್ನೊಂದನೇ ತರಗತಿಯ ಪುಂಡ ವಿದ್ಯಾರ್ಥಿ ಪ್ರದ್ಯುಮ್ಮನನ್ನು ಶೌಚಾಲಯಕ್ಕೆ ಬರುವಂತೆ ಕರೆಯುತ್ತಿದ್ದುದು ಕಂಡುಬಂದಿದೆ. ಈ ನಿರ್ಣಾಯಕ ಸಾಕ್ಷ್ಯ ತಮಗೆಹೇಗೆ ತಪ್ಪಿಹೋಯಿತೆಂಬ ಬಗ್ಗೆ ಪೊಲೀಸ್ ಅಧಿಕಾರಿಗಳಲ್ಲಿ ಯಾವುದೇ ಉತ್ತರವಿರಲಿಲ್ಲ.
ಸಿಬಿಐ ರಯಾನ್ ಮರ್ಡರ್ ಕೇಸನ್ನು ಕೈಗೆತ್ತಿಕೊಳ್ಳುವ ಬಗ್ಗೆ ಯಾವುದೇ ಅಧಿಕೃತ ಆದೇಶ ಅಥವಾ ನಿರ್ದೇಶನ ಹೊರಟು ಬಂದಿಲ್ಲವಾದರೂ ಇದೀಗ ಸಿಬಿಐ ಎಸ್‌ಐಟಿ ತಂಡದ ನಾಲ್ವರು ಸದಸ್ಯರನ್ನು ಪ್ರಶ್ನಿಸಲು ಕರೆದಿರುವುದು ಮಹತ್ತರ ಬೆಳವಣಿಗೆಯಾಗಿದೆ.